ಖಾಕಿ ಕೈಗೆ ಸಿಕ್ಕಿಬಿದ್ದ ಟಿಕ್‍ಟಾಕ್..!

0
292

ಜಾಲತಾಣದಲ್ಲಿ ಸಂಚಲನ ಮೂಡಿಸಿದ ಆ ಒಂದು ಅಪ್ಲಿಕೇಷನ್ ಅಂದ್ರೆ ಅದು ಟಿಕ್ ಟಾಕ್. ಚೀನಾ ನಿರ್ಮಿತ ಈ ಅಪ್ಲಿಕೇಷನ್ ಜಗತ್ತಿನಾದ್ಯಂತ ಅತಿಹೆಚ್ಚು ಡೌನ್‍ಲೋಡ್ ಆಗಿರುವ ಅಪ್ಲಿಕೇಷನ್ ಎಂಬ ಮಾಹಿತಿಯಿದೆ. ಇದು ಜನರನ್ನು ಅಕರ್ಷಿಸಿದ್ದು ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿದೆ. ಆದರೆ ಇಲ್ಲಿ ಒಂದು ಅಡಚಣೆಯೂ ಇದೆ.

ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಅಬ್ಬರಿಸಿರುವ ಅಪ್ಲಿಕೇಷನ್ ಅಂದ್ರೆ ಅದು ಟಿಕ್ ಟಾಕ್, 15 ಸೆಕೆಂಡ್ ವಿಡಿಯೊ ಮಾಡಿ ಹರಿಬಿಡುವ ಅಪ್ಲಿಕೇಷನ್ ಮೋಡಿಗೆ ಒಳಗಾಗದವರು ಯಾರು ಇಲ್ಲ. ವಯಸ್ಸು, ಲಿಂಗ ಮತ್ತು ಯಾವುದರ ಬೇದವಿಲ್ಲದೇ ಜಗತ್ತಿನ ಮೂಲೆ ಮೂಲೆಯ ಜನರು ಅಂಟಿಕೊಂಡಿದ್ದಾರೆ.

ಜನರು ತಂತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಮಾಡಿಕೊಂಡಿರುವ ಈ ಅಪ್ಲಿಕೇಷನ್ ಬಳಸುವುದು ಜನರಿಗೆ ಅಚ್ಚುಮೆಚ್ಚು ಏಕೆಂದರೆ ಜನರನು ತಮ್ಮ ನವರಸ ಭಾವನೆಗಳನ್ನು ಹಂಚಿ ಬಿಡುವುದು ಇದೇ ಟಿಕ್ ಟಾಕ್‍ನಲ್ಲಿ. ಹೊಸ ವಿಡಿಯೊ ಮಾಡುವುದು ಎಲ್ಲರಿಗೂ ಸಂತೋಷದ ವಿಷಯ. ಆದ್ರೆ ಇಲ್ಲಿ ಅಪಾಯಗಳು ಇವೆ ಎಂಬುದನ್ನು ಸುದ್ದಿ ವರದಿಗಳು ಬಿಚ್ಚಿಟ್ಟಿವೆ.

ಸಾಕಷ್ಟು ಅಪರಾಧ ಕೃತ್ಯಗಳಿಗೆ ಮತ್ತು ಸ್ವಹತ್ಯಗಳಿಗೆ ಈ ಟಿಕ್ ಟಾಕ್ ಅಪ್ಲಿಕೇಷನ್ ವೇದಿಕೆಯಾಗಿರುವುದಕ್ಕೆ ಸಾಕಷ್ಟು ಜನರು ಈ ಅಪ್ಲಿಕೇಷನ್ ಬ್ಯಾನ್ ಮಾಡಬೇಕು ಎಂದು ಗುಡುಗಿದ್ರು. ನಮ್ಮ ದೇಶದ ನ್ಯಾಯಾಲಯಗಳು ಇದನ್ನು ಬ್ಯಾನ್ ಮಾಡಿತ್ತು ಆದರೆ ಮತ್ತೆ ಕಾನೂನು ಸಮರದಲ್ಲಿ ಟಿಕ್ ಟಾಕ್ ಗೆದ್ದು ಮತ್ತೆ ತನ್ನ ಅಬ್ಬರ ಜೋರಾಗಿಸಿತು.

ಇತ್ತಿಚಿನ ಬೆಳವಣಿಗೆ ನಿಮಗೆ ಆಶ್ಚರ್ಯವಾಗಬಹುದು ಏಕೆಂದರೆ ಈ ಸಮುದಾಯ ಟಿಕ್ ಟಾಕ್ ಬಳಸಲು ಶುರುಮಾಡಿದೆ. ಅರೇ ಇದೇನಪ್ಪ ಅಂತಿರಾ ಹೌದು ಪೊಲೀಸ್ ಪಡೆಯೂ ಈಗ ಟಿಕ್ ಟಾಕ್ ಬಳಸಲು ಮುಂದಾಗಿದೆ. ನಮ್ಮ ದೇಶದ ಉತ್ತರ ಪ್ರದೇಶದ ಖಾಕಿ ಪಡೆ ಇದೀಗ ಟಿಕ್‍ಟಾಕ್‍ಖಾತೆ ಆರಂಭಿಸಿದೆ. ಇದರ ಮೂಲಕ ಜನರಿಗೆ ಸುರಕ್ಷತೆಯ ಮಾಹಿತಿ ನೀಡಲಿದೆಯಂತೆ.
ಪೊಲೀಸರು ಮುಖ್ಯವಾಗಿ ವನಿತೆಯರ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಮತ್ತು ರೋಡ್ ರೂಲ್ಸ್ ತಿಳಿಹೇಳಲು ಟಿಕ್ ಟಾಕ್ ಬಳಸಲು ಮುಂದಾಗಿದೆ. ವಿಡಿಯೋ ಸಂದೇಶಗಳ ಮೂಲಕವೇ ಯುವಜನರನ್ನು ತಲುಪುವ ಉದ್ದೇಶ ಹೊಂದಿರುವ ಯೂಪಿ ಪೊಲೀಸರ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಟಿಕ್‍ಟಾಕ್ ಅಪ್ಲಿಕೇಷನ್ ಬಳಸಿಕೊಂಡು ಜಾಗೃತಿ ಮೂಡಿಸುವ ಅಭಿಯಾನವನ್ನು ಕೇರಳ ಪೊಲೀಸ್ ಪಡೆ ಮುಂದಾಗಿತ್ತು. ಸದ್ಯ ಉತ್ತರ ಪ್ರದೇಶದ ಪೊಲೀಸರು ಟಿಕ್ ಟಾಕ್ ಮೊರೆ ಹೋಗಿದ್ದಾರೆ.

LEAVE A REPLY

Please enter your comment!
Please enter your name here