ಟಿಕ್ – ಟಾಕ್ ಅವಾಂತರ !

0
483

ಪಡ್ಡೆ ಹುಡುಗರಿಂದ ಹಿಡಿದು ನಿದ್ದೆ ಮಾಡೋ ಮುದುಕರವರೆಗೂ ಸದ್ಯ ಟಿಕ್ ಟಾಕ್ ನದ್ದೇ ಸುದ್ದಿ ! ಹೌದು ಈ ಟಿಕ್ ಟಾಕ್ ಯಾವ ಮಟ್ಟಿಗೆ ಮಿತಿ ಮೀರಿದೆ ಅಂದರೆ ಹೇಳಲು ಸಾಧ್ಯವಿಲ್ಲ. ಟಿಕ್ ಟಾಕ್ ಮಾಡುವ ಹುಚ್ಚಿನಿಂದಾಗಿ ಹಲವು ಅವಘಡಗಳು ಸಂಭವಿಸಿವೆ. ಅಷ್ಟೇ ಯಾಕೆ ಹಲವು ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ.ಹಾಗಾಗಿ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಸಹಿತ ಜೋರಾಗಿದೆ. ಈಗ ಮತ್ತೊಂದು ಅವಾಂತರ ಯಾದಗಿರಿಯಲ್ಲಿ ನಡೆದಿದೆ.. ತನ್ನ ಪ್ರೇಯಸಿ ಜೊತೆ ಯುವಕನೊಬ್ಬ ಟಿಕ್ ಟಾಕ್ ಮಾಡಿ ಧರ್ಮದೇಟು ತಿಂದ್ದಿದ್ದಾನೆ.

ಯಾದಗಿರಿ ತಾಲೂಕಿನ ಹಳಿಗೇರ ಗ್ರಾಮದಲ್ಲಿ ಬುಗ್ಗಪ್ಪ ಯುವಕ ಕೆಲವು ತಿಂಗಳುಗಳಿಂದ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ.ಈ ಪ್ರೇಮದ ವಿಚಾರ ಇಬ್ಬರ ಪೋಷಕರಿಗಾಗಲಿ ಅಥವಾ ಗ್ರಾಮದ ಜನರಿಗಾಗಲಿ ತಿಳಿದಿರಲಿಲ್ಲ! ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಾರೆ ಎಂಬಂತೆ ಈ ಯುವಕ ತನ್ನ ಪ್ರೇಯಸಿಯ ಜೊತೆ ಅವರ ಮನೆಯ ಮುಂಬದಿಯಲ್ಲಿ ಒಂದು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದಾನೆ. ಈ ವಿಡಿಯೋ ದಿನದಿಂದ ದಿನಕ್ಕೆ ಸಾಕಷ್ಟು ವೈರಲ್ ಆಗುತ್ತಲೇ ಇತ್ತು.ಹೀಗೆ ವೈರಲ್ ಆಗುತ್ತಿದ್ದಂತೆ ಆ ಹುಡುಗಿ, ಯುವಕನನ್ನು ಪ್ರೀತಿಸುವುದನ್ನು ಬಿಟ್ಟಿದ್ದಾಳೆ.

ಕಡೆಗೆ ಈ ಟಿಕ್ ಟಾಕ್ ವಿಡಿಯೋ ಹುಡುಗಿಯ ಮನೆಯವರಿಗೆ ಕಂಡುಬಂದಿದೆ.ಅದನ್ನು ನೋಡಿ ಸುಮ್ಮನಾಗದ ಹುಡುಗಿಯ ಪೋಷಕರು,ಗ್ರಾಮದ ಜನರು ಆ ಯುವಕನನ್ನು ಮರಕ್ಕೆ ಕಟ್ಟಿ ಮನ ಬಂದಂತೆ ಧರ್ಮದೇಟು ಕೊಟ್ಟಿದ್ದಾರೆ ! ಅಲ್ಲದೆ ಹುಡುಗನ ತಾಯಿ ಅಸಭ್ಯ ಮಾತುಗಳಿಂದ ಬೈದು ಚಪ್ಪಲಿಯಲ್ಲಿ ಆ ಯುವಕನಿಗೆ ಹೊಡೆದಿದ್ದಾಳೆ ! ಇನ್ನು ಈ ಘಟನೆ ನಿನ್ನೆ ನಡೆದಿದ್ದು ಈ ವಿಡಿಯೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ !

LEAVE A REPLY

Please enter your comment!
Please enter your name here