ಟಿಕ್ ಟಾಕ್ ಆಪ್ ಅತಿಯಾದ ಬಳಕೆ, ದುರ್ಬಳಕೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

0
213

ಟಿಕ್ ಟಾಕ್ ಆಪ್ ಮಕ್ಕಳು ಮತ್ತು ಹದಿಹರೆಯದವರಿಗೆ ಇನ್ನೂ ಅಚ್ಚುಮೆಚ್ಚು. 15 ಸೆಕೆಂಡ್ ಗಳ ಸಣ್ಣ ವಿಡಿಯೊ ಹಂಚಿಕೊಳ್ಳುವ ಆಪ್ ಆಗಿರುವ ಟಿಕ್ ಟಾಕ್ ಮಕ್ಕಳಿಗಂತೂ ಬಹಳ ಪ್ರೀತಿ. ಅತಿಯಾದ ಬಳಕೆಯಿಂದ ಮಕ್ಕಳ ಕಲಿಕೆ, ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಟಿಕ್ ಟಾಕ್ ನ ಅತಿಯಾದ ಬಳಕೆಯಿಂದ ಪೋಷಕರು ಹೇಗೆ ದೂರವಿಡಬಹುದು ಎಂಬುದಕ್ಕೆ ಕೆಲವೊಂದು ಪರಿಹಾರ, ಉಪಾಯಗಳನ್ನು ನೀಡಲಾಗಿದೆ.

 

ಮಕ್ಕಳಲ್ಲಿ ಧನಾತ್ಮಕ ಅಂಶಗಳನ್ನು ತುಂಬಿ; ಟಿಕ್ ಟಾಕ್ ವಿಡಿಯೊದಲ್ಲಿ ಹಲವು ಹ್ಯಾಶ್ ಟಾಗ್ ಟ್ರೆಂಡಿಂಗ್ ಆಗುತ್ತದೆ. ಇವುಗಳಲ್ಲಿ ಮಕ್ಕಳಿಗೆ ಯಾವುದು ಒಳ್ಳೆಯ ಟ್ರೆಂಡಿಂಗ್ ಹ್ಯಾಶ್ ಟಾಗ್ ಗಳು, ಯಾವುದನ್ನು ಅನುಸರಿಸಬೇಕು ಎಂಬುದನ್ನು ಪೋಷಕರು ಹೇಳಿಕೊಡಬೇಕು. ಉದಾಹರಣೆಗೆ ಟಿಕ್ ಟಾಕ್ ಆಪ್ ನಲ್ಲಿರುವ #EduTok ಆಪ್ ನಲ್ಲಿ ಮಕ್ಕಳಿಗೆ ಜ್ಞಾನ ತುಂಬುವಂತಹ, ಅವರಿಗೆ ಉತ್ತಮ ಪ್ರಚೋದನೆ ನೀಡುವಂತಹ ವಿಡಿಯೊಗಳಿರುತ್ತವೆ.

 

ಆಪ್ ನಲ್ಲಿ ಕಳೆಯುವ ಸಮಯದ ಬಗ್ಗೆ ನೋಡಿಕೊಳ್ಳಿ: ಟಿಕ್ ಟಾಕ್ ನಲ್ಲಿ ಸುರಕ್ಷಿತ ವಿಧಾನವಾದ ಡಿಜಿಟಲ್ ವೆಲ್ಲ್ ಬೀಯಿಂಗ್ ಎಂಬುದಿರುತ್ತದೆ. ಇದರ ಮೂಲಕ ಪೋಷಕರು 40,60,90 ಅಥವಾ 120 ನಿಮಿಷ ಎಂದು ಸಮಯ ಸೆಟ್ ಮಾಡಿ ಮಕ್ಕಳಿಗೆ ಬಳಸಲು ನೀಡಬೇಕು. ತಮ್ಮ ಅವಧಿ ಮುಗಿದರೆ ಮಕ್ಕಳು ಮುಂದುವರಿಯಬೇಕೆಂದರೆ ಪಾಸ್ ವರ್ಡ್ ನೀಡಬೇಕಾಗುತ್ತದೆ. ಅದನ್ನು ಪೋಷಕರು ಮಾಡಿ ಮಕ್ಕಳು ಏನೇನು ಚಟುವಟಿಕೆ ಅದರಲ್ಲಿ ಮಾಡುತ್ತಾರೆ, ಏನು ನೋಡುತ್ತಾರೆ ಎಂದು ನಿಗಾವಹಿಸಬಹುದು. ನೋಡುವ ವಿಷಯಗಳ ಮೇಲೆ ನಿಯಂತ್ರಣವಿರಲಿ.

 

ಡಿಜಿಟಲ್ ವೆಲ್ ಬೀಯಿಂಗ್ ನಲ್ಲಿರುವ ಮತ್ತೊಂದು ಲಾಭ ರಿಸ್ಟ್ರಿಕ್ಟೆಡ್ ಮೋಡ್. ಇದು ಆಪ್ ನಲ್ಲಿ ವಿಷಯಗಳನ್ನು ನಿಯಂತ್ರಿಸುತ್ತದೆ, ಕೆಲವೊಂದು ವಿಚಾರಗಳು ಮತ್ತು ವಿಷಯಗಳು ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ನೋಡುವುದು ಯೋಗ್ಯವಾಗಿಲ್ಲದಿರುತ್ತದೆ. ಅಂತಹುದಕ್ಕೆ ಇದು ತಡೆ ನೀಡುತ್ತದೆ. ಪಾಸ್ ವರ್ಡ್ ಮೂಲಕ ರಿಸ್ಟ್ರಿಕ್ಟೆಡ್ ಮೋಡ್ ನ್ನು ಟಿಕ್ ಟಾಕ್ ನಲ್ಲಿ ಸಕ್ರಿಯಗೊಳಿಸಬಹುದು.

 

ಅನಪೇಕ್ಷಿತರಿಂದ ದೂರವಿರಿ: ಅನಪೇಕ್ಷಿತ ಹೇಳಿಕೆಗಳು, ಟೀಕೆಗಳು, ಮಾತುಗಳಿಂದ ನಿಮ್ಮ ಮಕ್ಕಳನ್ನು ದೂರವಿರಿಸಬೇಕೆಂದರೆ ಕಮೆಂಟ್ಸ್ ಫಿಲ್ಟರ್ ಅಳವಡಿಸಿಕೊಳ್ಳಿ. ಈ ಮೂಲಕ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ 30 ಕೀವರ್ಡ್ ಗಳನ್ನು ಆಯ್ಕೆ ಮಾಡಿಕೊಂಡು ಕಮೆಂಟ್ ಗಳಿಂದ ಸ್ವಯಂಚಾಲಿತವಾಗಿ ಫಿಲ್ಟರ್ ಆಗಬಹುದು, ಅಂದರೆ ನಿಮಗೆ ಬೇಕಾಗಿದ್ದನ್ನು ತೆಗೆದುಕೊಂಡು ಬೇಡವಾದದ್ದನ್ನು ಬಿಡಬಹುದು. ಸೈಬರ್ ಬೆದರಿಕೆಯಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಇದು ಉತ್ತಮ ವಿಧಾನ.

 

13ರಿಂದ ಮೇಲಿನ ವಯಸ್ಸಿನವರು: 13 ವರ್ಷಕ್ಕಿಂತ ಮೇಲಿನವರು ಮಾತ್ರ ಟಿಕ್ ಟಾಕ್ ಆಪ್ ಬಳಕೆ ಮಾಡಬಹುದು. 13 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮಾತ್ರ ಬಳಕೆ ಮಾಡಬಹುದಾದ ಸುರಕ್ಷಿತ ಇನ್ ಆಪ್ ಏಜ್ ಗೇಟ್ ಆಗಿದೆ.ಡಿವೈಸ್ ಮ್ಯಾನೇಜ್ ಮೆಂಟ್; ಟಿಕ್ ಟಾಕ್ ನಲ್ಲಿ ಡಿವೈಸ್ ಮ್ಯಾನೇಜ್ ಮೆಂಟ್ ಇದೆ. ತಮ್ಮ ಬಳಕೆ ಅವಧಿಯನ್ನು ಕೊನೆಗೊಳಿಸಲು ಅಥವಾ ಇತರ ಸಾಧನಗಳಿಂದ ತಮ್ಮ ಖಾತೆಗಳನ್ನು ಟಿಕ್‌ಟಾಕ್‌ನಿಂದ ತೆಗೆದುಹಾಕಲು ಬಳಕೆದಾರರಿಗೆ ಈ ಡಿವೈಸ್ ಅವಕಾಶ ನೀಡುತ್ತದೆ. ಮಕ್ಕಳ ಟಿಕ್ ಟಾಕ್ ಖಾತೆಗಳನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳದಂತೆ ಪೋಷಕರು ಈ ಮೂಲಕ ನೋಡಿಕೊಳ್ಳಬಹುದು.ಟಿಕ್ ಟಾಕ್ ಆಪ್ ನ್ನು ಅಭಿವೃದ್ಧಿಪಡಿಸಿದ್ದು ಬೈಟೆಡ್ಯಾನ್ಸ್ ಎಂಬ ತಂತ್ರಜ್ಞಾನ ಕಂಪೆನಿ.

 

LEAVE A REPLY

Please enter your comment!
Please enter your name here