ಮೂರು ಬಾರಿ ತಾಳಿ ಕಟ್ಟಿಸಿಕೊಂಡಿರುವ ಹೆಸರಾಂತ ಸೆಲೆಬ್ರಿಟಿಗಳು!

0
844

ಮನುಷ್ಯನ ಹುಟ್ಟು ಸಾವಿನ ನಡುವೆ ಬರುವ ಬಹು ಮುಖ್ಯವಾದ ಘಟ್ಟವೆಂದರೆ ವಿವಾಹ, ಬ್ರಹ್ಮಚರ್ಯದಲ್ಲಿ ಎಷ್ಟೇ ನೋವುಗಳನ್ನು ಅನುಭವಿಸಿದ್ದರು ಬಾಳಸಂಗಾತಿ ಬಂದ ಮೇಲೆ ತಮ್ಮ ನೋವುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ನೋವಿನ ಭಾರವನ್ನು ಇಳಿಸಿ ಸುಖ ಜೀವನ ನಡೆಸುತ್ತಾರೆ.. ಪ್ರತಿಯೊಬ್ಬ ಗಂಡು ಹೆಣ್ಣಿಗೆ ವಿವಾಹ ಎಂಬುದು ಬಹು ಮುಖ್ಯವಾದ ಅಂಶ.. ಹೀಗೆ ಸಂಸಾರ ಜೀವನಕ್ಕೆ ಕಾಲಿಟ್ಟ ಮೇಲೆ ಕೆಲ ದಿನಗಳ ಕಾಲ ಎಲ್ಲವೂ ಸರಿ ಇರುತ್ತದೆ,ದಿನ ಕಳೆದಂತೆ ಮನಸ್ತಾಪಗಳು, ವಿರಸಗಳು ಹೆಚ್ಚಾಗುತ್ತವೆ ಯಾರು ಇವನ್ನೆಲ್ಲ ಅರಿತು ಮುನ್ನುಗ್ಗುತ್ತಾರೆ ಅವರ ಸಾಂಸಾರಿಕ ಜೀವನ ಸುಖಮಯವಾಗಿರುತ್ತದೆ.

 

 

ಹಿಂದಿನ ಕಾಲದಲ್ಲಿ ಒಂದು ಮದುವೆಯಾದರೆ, ಏಳೇಳು ಜನುಮಕ್ಕೂ ಇವರೇ ನಮ್ಮ ಬಾಳಸಂಗಾತಿ ಎಂದುಕೊಳ್ಳುತ್ತಿದ್ದರು, ತಮ್ಮ ಪತಿ ಅಥವಾ ಪತ್ನಿ ಇಹಲೋಕ ತ್ಯಜಿಸಿದರೆ ಮತ್ತೊಂದು ಮದುವೆಯಾಗದೆ ಏಕಾಂಗಿ ಜೀವನವನ್ನು ನಡೆಸುತ್ತಿದ್ದರು.. ಆದರೆ ಈಗ ಕಾಲ ಬದಲಾಗಿದೆ ಹಿರಿಯರು ಹಾಕಿದ ಆಲದಮರಕ್ಕೆ ನೇಣು ಹಾಕಿಕೊಳ್ಳುವವರು ಯಾರು ಎಂದುಕೊಂಡು ತಮ್ಮ ನೆಚ್ಚಿನ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡು, ಸಂಸಾರ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದರೆ ಅವರಿಂದ ವಿಚ್ಛೇದನ ಪಡೆದುಕೊಂಡು ಬೇರೋಬ್ಬರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಾರೆ.. ಇದು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇರುವುದು ಒಂದೇ ಜೀವನ .ನಮ್ಮನ್ನು ಇಷ್ಟಪಡುವವರು ನಮ್ಮ ಜೊತೆ ಹೊಂದಾಣಿಕೆಯಿಂದ ಬಾಳ್ವೇ ನಡೆಸಿದರೆ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ !

 

 

ಒಂದು ಮದುವೆಯಾಗಿ ಸಂಸಾರ ನಡೆಸುವುದೇ ಕಷ್ಟ ಅನ್ನುವ ಈಗಿನ ಕಾಲದಲ್ಲಿ ಮೂರು ಮದುವೆಯಾಗಿ, ಮೂರು ಸಲ ತಾಳಿ ಕಟ್ಟುವುದಕ್ಕೆ, ಕಟ್ಟಿಕೊಳ್ಳುವುದಕ್ಕೆ ತುಂಬಾನೇ ತೆರೆಯಬೇಕು ಅಲ್ಲವೇ ?! ಹಾಗಾದರೆ ಮೂರು ಬಾರಿ ತಾಳಿ ಕಟ್ಟಿಸಿಕೊಂಡ ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

 

 

ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿ , ನಿರ್ದೇಶಕ ಮತ್ತು ನಿರ್ಮಾಪಕರ ಫೇವರೇಟ್ ನಟಿ ಎನಿಸಿಕೊಂಡಿದ್ದವರು ನಟಿ ಲಕ್ಷ್ಮಿ ..
ಬೋಲ್ಡ್ ಮಾತುಗಳನ್ನು ಆಡುವ ಈ ನಟಿ ತಮ್ಮ ಜೀವನದಲ್ಲಿ ಬೋಲ್ಡ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಉದ್ಯಮಿ ಭಾಸ್ಕರ್ ಜೊತೆ ಮೊದಲು ವಿವಾಹವಾದ ನಟಿ ಲಕ್ಷ್ಮಿ ಅವರ ಜೊತೆ ನಾಲ್ಕು ವರ್ಷಗಳ ಕಾಲ ಸಂಸಾರವನ್ನು ನಡೆಸುತ್ತಾರೆ.

 

 

ಕೆಲವು ಭಿನ್ನಾಭಿಪ್ರಾಯಗಳಿಂದ ಅವರಿಂದ ವಿಚ್ಛೇದನ ಪಡೆದುಕೊಂಡು ತಮ್ಮ ಮಗಳೊಂದಿಗೆ ಮದ್ರಾಸಿನಲ್ಲಿ ನೆಲೆಸಿದ ಲಕ್ಷ್ಮಿ, ನಂತರ ನಟ ಮೋಹನ್ ಶರ್ಮಾ ಅವರ ಜೊತೆ ಎರಡನೇ ಮದುವೆಯಾಗಿ ಅವರ ಜೊತೆಗೆ ಐದು ವರ್ಷಗಳ ಕಾಲ ಸಂಸಾರ ನಡೆಸಿ ಅವರಿಂದಲೂ ವಿಚ್ಛೇದನವನ್ನು ಪಡೆದುಕೊಂಡು ಇದೀಗ ಮೂರನೇ ಮದುವೆಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

 

 

ಕನ್ನಡದ ಹೆಸರಾಂತ ಗಾಯಕ ಮತ್ತು ನಟ ರಾಜೇಶ್ ಕೃಷ್ಣನ್ ಅವರು ಒಂದು ಕಾಲದಲ್ಲಿ ಜೂನಿಯರ್ ಎಸ್ ಬಿ ಬಾಲಸುಬ್ರಹ್ಮಣ್ಯಂ ಎಂದೇ ಕರೆಸಿಕೊಳ್ಳುತ್ತಿದ್ದರು,ಇವರು ಕೂಡ ಮೂರು ವಿವಾಹವಾಗಿದ್ದು ಸಿಂಗರ್ ಸೌಮ್ಯ, ಹರಿಪ್ರಿಯಾ ,ರಮ್ಯಾ ಅವರ ಜೊತೆ ಸಂಸಾರ ನಡೆಸಿದ್ದಾರೆ. ವಿಪರ್ಯಾಸವೆಂದರೆ ಇವರ ಮೂವರಿಗೂ ವಿಚ್ಛೇದನವನ್ನು ನೀಡಿ ಇದೀಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

 

 

ನಟಿ ಮತ್ತು ನಿರ್ಮಾಪಕಿಯಾಗಿ ತಮಿಳು ಚಿತ್ರರಂಗ ಸೇರಿದಂತೆ ಕನ್ನಡ ಹಿಂದಿ ಮಲೆಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ರಾಧಿಕಾ ಶರತ್ ಕುಮಾರ್ ಅವರು ಕೂಡ ಮೂರು ವಿವಾಹವಾಗಿದ್ದು ಮೊದಲ ಇಬ್ಬರು ಪತಿಯರಿಗೆ ವಿಚ್ಛೇದನವನ್ನು ನೀಡಿ, ಈಗ ಹೆಸರಾಂತ ನಟ ಶರತ್ ಕುಮಾರ್ ಅವರ ಜೊತೆ ವೈವಾಹಿಕ ಜೀವನವನ್ನು ಹದಿನೆಂಟು ವರ್ಷಗಳಿಂದ ಸುಖಕರವಾಗಿ ನಡೆಸುತ್ತಿದ್ದಾರೆ.

 

 

ಇನ್ನು ತಮಿಳು ಚಿತ್ರರಂಗದ ಹೆಸರಾಂತ ನಟ ಕಮಲಹಾಸನ್ ಅವರು ಕೂಡ ತಮ್ಮ ಮೂರು ಪತ್ನಿಯರಿಗೂ ವಿಚ್ಛೇದನವನ್ನು ನೀಡಿದ್ದಾರೆ,ನಟಿ ವಾಣಿ ಗಣಪತಿ ಸಾರಿಕಾ ಮತ್ತು ಗೌತಮಿ ಅವರ ಜೊತೆ ವಿವಾಹವಾಗಿದ್ದು ಯಾರ ಜೊತೆಗೂ ಹೊಂದಾಣಿಕೆಯಾಗದ ಕಾರಣ ಮೂವರಿಗೂ ವಿಚ್ಛೇದನವನ್ನು ನೀಡಿ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ !

 

 

ಕನ್ನಡ ಸೇರಿದಂತೆ ಪಂಚ ಭಾಷೆಯಲ್ಲಿ ನಾನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ಟೈಗರ್ ಪ್ರಭಾಕರ್ ಅವರು ಮೊದಲು ಮೇರಿ ಎಂಬುವವರನ್ನು ವಿವಾಹವಾದರೂ ನಂತರ ಅವರಿಗೆ ವಿಚ್ಛೇದನವನ್ನು ನೀಡಿ ಜಯಮಾಲಾ ಅವರನ್ನು ಮದುವೆಯಾಗುತ್ತಾರೆ ಆದರೆ ಕೆಲವು ವರ್ಷಗಳ ನಂತರ ಅವರಿಗೂ ಸಹ ವಿಚ್ಛೇದನವನ್ನು ನೀಡಿ ಮಳಯಾಳಂನ ನಟಿ ಅಂಜು ಅವರನ್ನು ಮದುವೆಯಾಗಿ ಅವರಿಗೂ ಸಹಿತ ಕೆಲವೇ ವರ್ಷಗಳಲ್ಲಿ ವಿಚ್ಛೇದನ ನೀಡಿ ಒಬ್ಬಂಟಿ ಜೀವನ ಸಾಗಿಸುತ್ತಿದ್ದರು.

 

 

ತೆಲುಗಿನ ಸೆನ್ಸೇಷನ್ ಸ್ಟಾರ್ ಅಂತಂದರೆ ಪವರ್ ಸ್ಟಾರ್ ಪವನ್ ಕಲ್ಯಾಣ್, ಇವರು ಕೂಡ ಮೂರು ವಿವಾಹವಾಗಿದ್ದು ತನ್ನ ಇಬ್ಬರು ಪತ್ನಿಯರಿಗೆ ವಿಚ್ಛೇದನವನ್ನು ನೀಡಿ ಇದೀಗ ಫಾರಿನ್ ಹುಡುಗಿಯನ್ನು ವಿವಾಹವಾಗಿ ಅವರ ಜೊತೆ ಅನ್ಯೋನ್ಯವಾಗಿ ಸಂಸಾರವನ್ನು ನಡೆಸುತ್ತಿದ್ದಾರೆ.

 

 

ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮೊದಲಿಗೆ ಕನ್ನಡದ ಹಾಸ್ಯ ನಟಿ ರೇಖಾ ದಾಸ್ ಅವರನ್ನು ವಿವಾಹವಾಗಿ ಕೆಲ ವರ್ಷಗಳ ನಂತರ ಅವರಿಗೆ ವಿಚ್ಛೇದನ ನೀಡುತ್ತಾರೆ ತದನಂತರ ನಂದಾ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ..ನಂತರ ಅವರಿಂದಲೂ ದೂರ ಉಳಿದು ನಟಿ ಭವ್ಯ ಅವರನ್ನು ವಿವಾಹವಾಗಿದ್ದಾರೆ.

 

 

ಹೀಗೆ ಕೆದಕುವುದಾದರೆ ಭಾರತ ಚಿತ್ರರಂಗದಲ್ಲಿ ಅನೇಕ ಸೆಲೆಬ್ರಿಟಿಗಳು ಮೂರ್ನಾಲ್ಕು ಮದುವೆಯನ್ನು ಆಗಿ ಜೀವನ ನಡೆಸುತ್ತಿದ್ದರೆ ಕೆಲವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.. ಅದೇಕೋ ಏನೋ ಹೆಚ್ಚಾಗಿ ಸೆಲಬ್ರಿಟಿಗಳ ಬಾಳಲ್ಲಿ ಈ ರೀತಿಯಾಗುತ್ತದೆ..

LEAVE A REPLY

Please enter your comment!
Please enter your name here