ಬಾಹುಬಲಿ ಪ್ರಭಾಸ್ ಹಾಗೂ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಅಭಿನಯದ ಸಾಹೋ ಚಿತ್ರ ಕೊನೆಗೂ ಈ ವಾರ ಬಿಡುಗಡೆಯಾಗುತ್ತಿದೆ!
ಆರಂಭದಿಂದಲೂ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿರುವ ಸಾಹೋ ಬರೋಬ್ಬರಿ 300 ಕೋಟಿ ಬಜೆಟ್ ನಲ್ಲಿ ರೆಡಿಯಾಗಿದೆ..

ಈ ಸಿನಿಮಾ ಬಗ್ಗೆ ಕೇವಲ ಟಾಲಿವುಡ್ ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗವೇ ನಿರೀಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಶ್ರದ್ಧಾ ಅವರು ಗನ್ ಹಿಡಿದು ನಿಂತಿದ್ದ ಪೋಸ್ಟರ್ ಭಾರೀ ವೈರಲ್ ಆಗಿತ್ತು. ಹಾಗೆ ಚಿತ್ರದ ಟ್ರೈಲರ್ ಸಹಿತ ಇಡೀ ವಿಶ್ವಾದ್ಯಂತ ಭಾರೀ ಸದ್ದು ಮಾಡುತ್ತಿದೆ..ಎರಡು ವರ್ಷಗಳ ಬಳಿಕ ಡಾರ್ಲಿಂಗ್ ಪ್ರಭಾಸ್ ,ಸಾಹೋ ಎಂಬ ಚಿತ್ರದಲ್ಲಿ ಮತ್ತೆ ರಿ ಎಂಟ್ರಿ ತೆಗೆದುಕೊಂಡಿದ್ದಾರೆ ! ಇನ್ನು ಸಾಹೋ ದೊಡ್ಡ ಬಜೆಟ್ನ ಸಿನಿಮಾ! ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯುಳ್ಳ ಸಾಹೋ , ತೆಲುಗು ,ತಮಿಳು ಹಿಂದಿ ಸೇರಿದಂತೆ ಮೂರು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ!
ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾಗೆ , ಸುಜಿತ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ !
ಇನ್ನು ಈ ಚಿತ್ರಕ್ಕೆ ಬಾಹುಬಲಿ ಪ್ರಭಾಸ್ 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ! ಈ ಮೂಲಕ ಬಾಲಿವುಡ್ ತಾರೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ!

ಇನ್ನು ಸಾಹೋ, ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದ್ದು ತೆಲುಗು ತಮಿಳು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ ! ಹಾಗೆಯೇ ಮಲಯಾಳಂನಲ್ಲೂ ಬಿಡುಗಡೆಯಾಗುವ ಸಾಧ್ಯತೆಯೂ ಇದೆ .. ಇನ್ನು ಈ ಚಿತ್ರದ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆಯುವ ನಿರಿಕ್ಷೇಯಲ್ಲಿದ್ದೆ.. ಇನ್ನು ಈ ಚಿತ್ರದ ಅಬ್ಬರದಿಂದ ಕನ್ನಡ ಚಿತ್ರಗಳ ಪಾಲಿಗೆ ಕಂಟಕವಾಗುತ್ತಿದೆ ಎನ್ನುವುದು ಬೇಸರದ ಸಂಗತಿ.
ಇನ್ನು ಮಿರ್ಚಿ, ಬಾಹುಬಲಿ ನಂತರ ಪ್ರಭಾಸ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ ! ಇದರ ಲಾಭವನ್ನು ಪಡೆದುಕೊಳ್ಳಲು ಹಂಚಿಕೆದಾರರು ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿದ್ದಾರೆ !
ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಮೊದಲ ದಿನ 600 ಶೋಗಳನ್ನು ಏರ್ಪಡಿಸಲಾಗುತ್ತಿದೆ!

ಕನ್ನಡ ಸಿನಿಮಾ ಹೊರತು, ಬೇರೆ ಯಾವ ಚಿತ್ರಕ್ಕೂ ಈ ಮಟ್ಟದ ಈ ಹೈಪ್ ಇಲ್ಲಿಯವರೆಗೆ ಬಂದಿರಲಿಲ್ಲ ! ಆದುದರಿಂದ ಬೆಂಗಳೂರಿನ ಸಾಕಷ್ಟು ಥಿಯೇಟರ್ ಗಳು ಸಾಹೋ ಪಾಲಾಗಲಿದೆ !
ಇನ್ನು ಇದೇ ವರ ಮಹಾಲಕ್ಷ್ಮಿ ಹಬ್ಬದಂದು ಕನ್ನಡದ ಬಹುಕೋಟಿ ವೆಚ್ಚದ ಹಾಗೂ ದೊಡ್ಡ ತಾರಾ ಬಳಗವೇ ಹೊಂದಿರುವಂತಹ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿತ್ತು ..
ಇನ್ನು ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾಗಿದೆ.. ಒಂದು ತಿಂಗಳಲ್ಲಿ ನೂರು ಕೋಟಿ ಕಲೆ ಹಾಕಿರುವುದು ಚಿತ್ರತಂಡಕ್ಕೆ ಭಾರಿ ಸಂತಸ ತಂದಿದೆ !
ಈಗ ‘ಸಾಹೋ’ದಿಂದಾಗಿ ಅನೇಕ ಕಡೆಗಳಲ್ಲಿ ‘ಕುರುಕ್ಷೇತ್ರ’ ಥಿಯೇಟರ್ ಕಳೆದುಕೊಳ್ಳುತ್ತಿದೆ. ಹಾಗಾಗಿ ದರ್ಶನ್ ಸಿನಿಮಾ ಗಳಿಕೆಗೆ ಪ್ರಭಾಸ್ ಹೊಡೆತ ನೀಡಲಿದ್ದಾರೆ…

ಇನ್ನು ಸಾಹೋ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಕನ್ನಡದ ಸಣ್ಣ ಬಜೆಟ್ ಸಿನಿಮಾಗಳು ತತ್ತರಿಸುತ್ತಿವೆ…. ಇನ್ನು ಈ ಸಿನಿಮಾ ತೆರೆಗೆ ಬರುತ್ತಿರುವುದರಿಂದ ಹೊಸ ಸಿನಿಮಾಗಳು ಥಿಯೇಟರ್ನಿಂದ ಹೊರ ಬರುತ್ತಿವೆ.. .. ಈ ವಾರ ಬಿಡುಗಡೆ ಮಾಡಬೇಕೆಂದುಕೊಂಡಿದ್ದ ಹೊಸಬರ ಸಿನಿಮಾಗಳು ಚಿತ್ರಮಂದಿರಗಳು ಸಿಗದೇ ತತ್ತರಿಸಿ ಹೋಗುತ್ತಿವೆ! ಒಂದೊಮ್ಮೆ ‘ಸಾಹೋ’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಒಂದು ತಿಂಗಳ ಕಾಲ ಸಣ್ಣ ಬಜೆಟ್ನ ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿ ತಲೆ ಎತ್ತುವುದು ಕಷ್ಟವಾಗಬಹುದು! ಹಾಗಾಗಿ ‘ಸಾಹೋ’ ಕನ್ನಡ ಸಿನಿಮಾಗಳಿಗೆ ದೊಡ್ಡ ಹೊಡೆತ ನೀಡಲಿದೆ ಎಂಬುದು ಕನ್ನಡ ಪಂಡಿತರ ಲೆಕ್ಕಾಚಾರ…
ಇನ್ನು ಕನ್ನಡ ಸಿನಿ ಪ್ರೇಕ್ಷಕರ ಬೇಸರದ ಸಂಗತಿ ಏನೆಂದರೆ ತೆಲುಗಿನ ಈ ಸಾಹೋ ತಮಿಳು ಹಿಂದಿ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.. ಆದರೆ ಈ ಚಿತ್ರ ಕನ್ನಡಕ್ಕೆ ಮಾತ್ರ ಡಬ್ ಆಗಿಲ್ಲ..ಕನಿಷ್ಠ ಪಕ್ಷ ಚಿತ್ರ ಕನ್ನಡಕ್ಕೆ ಡಬ್ ಆಗಿ ಬೆಂಗಳೂರಿನಲ್ಲಿ ತೆರೆಕಂಡರೆ ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ತೆಲುಗು ಭಾಷೆಯ ಸಿನಿಮಾ ಬೆಂಗಳೂರಿನಲ್ಲಿ ಇಷ್ಟು ಬೇಡಿಕೆ ಸೃಷ್ಟಿಸಿಕೊಳ್ಳುತ್ತಿರುವುದು ಕನ್ನಡ ಸಿನಿಮಾಗಳಿಗೆ ಮುಂದೆ ಎದುರಾಗುವ ಸಂಚಕಾರದ ಮುನ್ಸೂಚನೆ ಎನ್ನಬಹುದು.