ಈ ಮಹಿಳೆ ಗರ್ಭ ಧರಿಸಿ 17 ತಿಂಗಳಾಯ್ತು ಇನ್ನು ಮಗು ಆಗಿಲ್ಲ

0
104

ಸಾಮಾನ್ಯವಾಗಿ ಗರ್ಭಿಣಿಯರು 9 ತಿಂಗಳಿಗೆ ತಮ್ಮ ಮಗುವಿಗೆ ಜನ್ಮ ನೀಡುತ್ತಾರೆ ಆದರೆ ಈಕೆಗೆ 17 ತಿಂಗಳಾದ್ರೂ ಇನ್ನು ಮಗು ಜನಿಸಿಲ್ಲವಂತೆ.
ಎಲ್ಲ ತಾಯಂದಿರು ತಮ್ಮ ಮಗುವಿಗೆ ನಿನ್ನನ್ನು 9 ತಿಂಗಳು ಹೊತ್ತು ಹೆತ್ತು ಸಾಕಿದೇ ಎಂದು ಬೈಯುತ್ತಿದ್ದರು ಆದರೆ ಈ ತಾಯಿ ಆ ಡೈಲಾಗನ್ನು 17 ತಿಂಗಳಿಗೆ ಬದಲಾಯಿಸಬೇಕಾಗಿದೆ.
ಈಕೆ ಚೀನಾದ ನಿವಾಸಿ ಈಕೆಯ ಹೆಸರು ವಾಂಗ್
ಈಕೆ 2015 ರಲ್ಲಿ ಗರ್ಭ ಧರಿಸಿದ್ದಳು ವೈದ್ಯರಲ್ಲೂ ಮೊದಲನೇ ತಿಂಗಳಲ್ಲೇ ತೋರಿಸಿದ್ದಳು ವೈದ್ಯರು ಈಕೆಗೆ 2015ರ ಕೊನೆಯಲ್ಲಿ ಮಗು ಜನಿಸುತ್ತದೆ ಎಂದು ಹೇಳಿದ್ದರು.
ಆದರೆ ಅವರ ಮಾತು ಸುಳ್ಳಾಯಿತು ಡೇಟ್ ಮುಗಿದರೂ ಕೂಡ ಆಕೆಗೆ ಹೆರಿಗೆ ಆಗಲೇ ಇಲ್ಲ.
ವಾಂಗ್ ಮತ್ತೆ ವೈದ್ಯರಿಗೆ ತೋರಿಸಿದ್ದಾಳೆ ಆದರೆ, ವೈದ್ಯರು 9 ತಿಂಗಳಿಗೆ ಮಗುವಿಗೆ ಸರಿಯಾದ ಬೆಳವಣಿಗೆ ಆಗಿಲ್ಲ ಎಂದು ಹೇಳಿದ್ದಾರೆ.ಈಗಲೇ ಹೆರಿಗೆ ಮಾಡಿಸಿದರೆ ತೊಂದರೆ ಆಗುತ್ತದೆ ಎಂದು ಸಹ ಹೇಳಿದ್ದಾರೆ.
18 ತಿಂಗಳಾದ ನಂತರ ಆ ಮಗು ಪೂರ್ತಿಯಾಗಿ ಬೆಳವಣಿಗೆ ಹೊಂದುತ್ತದೆ ಆಗ ಹೆರಿಗೆ ಮಾಡಿಸುತ್ತೇನೆ ಎಂದು ವೈದ್ಯರು ಹೇಳಿದ್ದಾರೆ.
ಅತಿ ದೀರ್ಘಾವಧಿಯ ಕಾಲ ಗರ್ಭ ಧರಿಸಿದ ಮಹಿಳೆ ಎಂಬಾ ದಾಖಲೆಗೆ ಈಕೆ ಭಾಜನಳಾಗಿದ್ದಾಳೆ.
ವಿಶ್ವದ ನಾನಾಭಾಗದ ವೈದ್ಯರು ಇದನ್ನು ಒಪ್ಪಲು ಸಿದ್ಧವಿಲ್ಲ ಗರ್ಭದಲ್ಲಿ ಮಗು ಇರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ.
ವಾಂಗ್ ತನ್ನ ಬಳಿ ಮೊದಲನೇ ತಿಂಗಳಿಂದ ಇಲ್ಲಿಯವರೆಗಿನ ಎಲ್ಲ ದಾಖಲೆಗಳು ಇವೆ ಎಂದು ಹೇಳುತ್ತಿದ್ದಾರೆ
ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಆದ್ದರಿಂದ ಇದರ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇಲ್ಲ.

LEAVE A REPLY

Please enter your comment!
Please enter your name here