ಕುಡಿಯುವ ನೀರಿನ ಬಗ್ಗೆ ಈ ಸರಳ ಸೂತ್ರವೇ ಸೂಪರ್..!

0
181

ಆರೋಗ್ಯ ಚೆನ್ನಾಗಿರಬೇಕು, ಆರೋಗ್ಯಕ್ಕೆ ಉತ್ತಮ ಆಹಾರ, ವ್ಯಾಯಾಮಗಳು ಇರಬೇಕು ನಿಜ ಆದರೆ ಇಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಈ ನೀರು ಕುಡಿಯುವುದು ಹೇಗೆ ಮತ್ತು ಯಾವ ನೀರು ಕುಡಿಯಬೇಕು ಅನ್ನೋದು ಕುತೂಹಲದ ವಿಚಾರ.

ರಿವರ್ಸ್ ಆಸ್ಮೋಸಿಸ್ (ಆರ್.ಓ) ಇದು ನೀರಿನ ಶುದ್ಧೀಕರಣದ ಪ್ರಸ್ತುತ ವೈಜ್ಞಾನಿಕ ವಿಧಾನ ಆದರೆ ಈ ಆರ್.ಓ ನೀರು ಶುದ್ಧ ನೀರು ಇದನ್ನು ಕುಡಿಯುವ ಬಗ್ಗೆ ಈಗ ವ್ಯಾಪಕ ಚರ್ಚೆ ಆಗುತ್ತಿದೆ ಆದ್ರೆ ಆರ್.ಓ ನೀರು ಶುದ್ಧ ಅಥವಾ ಅಶುದ್ಧ ಎಂಬ ಚರ್ಚೆ ಇಲ್ಲ ಆದ್ರೆ ಆರ್.ಓ ನೀರು ಕುಡಿಯಲು ಯೋಗ್ಯವೇ ಎಂಬುದೇ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕಾಲ ಕಾಲಕ್ಕೆ ತಂತ್ರಜ್ಞಾನಗಳು ಮತ್ತು ಅವುಗಳಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಕುರಿತು ವರದಿ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತಿಚಿನ ವರದಿಯಲ್ಲಿ ಕುಡಿಯುವ ನೀರಿನ ಬಗ್ಗೆಯೂ ಕುತೂಹಲಕಾರಿಯಾದ ಅಂಶಗಳಿವೆ. ಕುಡಿಯುವ ನೀರು ಸರ್ವರಿಗೂ ಅಮೃತ ಸಮಾನ. ಕುಡಿಯುವ ನೀರು ಅನೇಕ ರೋಗಗಳನ್ನು ನಿವಾರಿಸುವ ಶಕ್ತಿಯಿದೆ. ದೇಹವನ್ನು ಸುಸ್ಥಿಯಲ್ಲಿ ಇಡುವಲ್ಲಿ ಕಾರ್ಯನಿರ್ವಹಿಸುತ್ತೆ. ಹೀಗಿರುವಾಗ ಕುಡಿಯುವ ನೀರಿನ ಮಹತ್ವ ತಿಳಿಯಬೇಕಾದ್ರೆ ಕುಡಿಯುವ ನೀರಿನಲ್ಲಿ ಶುದ್ಧತೆ ಪರಿಶೀಲಿಸಬೇಕು. ಆದರೆ ಶುದ್ಧ ಕುಡಿಯುವ ನೀರು ಅಂದ್ರೆ ಅದರಲ್ಲಿ ಕೇವಲ ನೀರಿನ ಕಣಗಳು ಇಲ್ಲದೆ ಲವಣಾಂಶವೂ ಇರಬೇಕು ಇಲ್ಲದಿದ್ದರೆ ದೇಹಕ್ಕೆ ಬೇಕಾದ ಸೂಕ್ಷ್ಮ ಅಂಶಗಳು ದೊರೆಯುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ವಯ ನೀರು ಕುಡಿಯಲು ಯೋಗ್ಯವಾಗಿರಲು, ಕನಿಷ್ಟ 100 ಮಿಲಿಗ್ರಾಂ ಅಷ್ಟು ಕರಗಿದ ಲವಣಗಳಿರಬೇಕು. ಆದರೆ, ಆರ್.ಓ. ನೀರಿನಲ್ಲಿ ಕರಗಿದ ಲವಣಗಳು 50 ಮಿ.ಗ್ರಾಂಗಿಂತಲೂ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಆರೋಗ್ಯ ಸಂಸ್ಥೆ ಆರ್.ಓ ನೀರಿನ ಬಳಕೆ ಯೋಗ್ಯ ಅಲ್ಲ ಎನ್ನುತ್ತದೆ.

ನಮ್ಮ ಪೂರ್ವಜರು ನೀರನ್ನು ದೇವರಂತೆ ಕಂಡವರು ಅವರ ಆರೋಗ್ಯ ಸರಳ ಸೂತ್ರ ಹೀಗಿತ್ತು ನೀರನ್ನು ಕಾಯಿಸಿ ಆರಿಸಿ ಕುಡಿಯುವುದು. ಇದು ಯಾವುದೇ ಯಂತ್ರ ತಂತ್ರಗಳಿಲ್ಲದೆ ನೀರನ್ನು ಶುದ್ಧ ಮಾಡುವ ವಿಧಾನ, ಇದು ಆರೋಗ್ಯಕ್ಕೆ ಉಪಯುಕ್ತವಾದುದು ಎಂಬುದು ಅವರ ನಂಬಿಕೆ. ಇಂದು ತಾಂತ್ರಿಕತೆ ಬೆಳದಂತೆ ನೀರನ್ನು ಶುದ್ಧಗೊಳಿಸವ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ನೀರಿನ ಅತಿ ಶುದ್ಧೀಕರಣ ದೇಹಕ್ಕೆ ಮಾರಕ ಅನ್ನೋದಾದ್ರೆ ನಮ್ಮ ಪೂರ್ವಿಕರ ಸರಳ ಸೂತ್ರವೇ ಬಹಳ ಸೂಕ್ತ.

LEAVE A REPLY

Please enter your comment!
Please enter your name here