ಯಾವ ಪ್ರತಿಫಲವನ್ನು ಅಪೇಕ್ಷಿಸದೆ ನಿವೃತ್ತಿಯ ನಂತರವೂ ವಿದ್ಯಾದಾನ ಮಾಡುತ್ತಿದ್ದಾರೆ ಈ ಮಹಾಗುರುಗಳು.!

0
189

ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗಲು ನಿರಾಸಕ್ತಿಯನ್ನು ತೋರುತ್ತಿರುವ ಲಕ್ಷಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಂದಿನ ಆನೇಕ ವಿದ್ಯಾರ್ಥಿಗಳು ಸಾಕಷ್ಟು ದೂರದ ಊರಿನಿಂದ ಪ್ರಯಾಣ ಮಾಡಿ ವಿದ್ಯಾಭ್ಯಾಸವನ್ನು ಪಡೆಯಲು ಬರುತ್ತಾರೆ.

 

 

ಆದರೆ ಇಂದು ಸರ್ಕಾರಿ ಮಟ್ಟದ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಅಭಾವ ಕಂಡು ಬರುತ್ತಿರುವುದು ಬೇಸರದ ಸಂಗತಿ ಹಾಗೂ ಸರ್ಕಾರ ಈಗಾಗಲೇ ಹಲವು ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ನಾನಾ ಯೋಜನೆಗಳನ್ನು ಅನುಷ್ಟಾನಗೊಳಿಸಲು ಮುಂದಾಗುತ್ತಿದೆ. ಆದರೆ ಇದಕ್ಕೆ ದೊಡ್ಡ ಸಮಸ್ಯೆಯಾಗಿ ಎದುರಾಗುತ್ತಿರುವುದು ಶಿಕ್ಷಕರ ಅಭಾವ.!

 

 

ಈ ಒಂದು ಮುಖ್ಯ ಕಾರಣದಿಂದ ಆನೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಮೆಟ್ಟಿಲು ಹತ್ತಲು ಹತ್ತು ಬಾರಿ ಯೋಚನೆ ಮಾಡುವ ಮೂಲಕ ಶಾಲೆಯ ಮೆಟ್ಟಿಲು ಕಡೆ ತಿರುಗಿ ನೋಡುತ್ತಿಲ್ಲ. ಇಂಥದ್ದೊಂದು ಕಾಲಘಟ್ಟದಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ತಮ ಗಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂಬ ಆಲೋಚನೆಯಿಂದ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ಬಳಿಕವೂ ಉಚಿತವಾಗಿ ಶಿಕ್ಷಣದ ಮಹಪೂರವನ್ನೇ ಹರಿಸುತ್ತಿದ್ದಾರೆ.

 

 

ಹೌದು, ರಾಯಚೂರಿನ ದೇವದುರ್ಗ ಅರಕೇರ ಗ್ರಾಮದ ಮುದುಕಪ್ಪ ಎಂಬ ಹಿರಿಯ ಶಿಕ್ಷಕರು ನಿವೃತ್ತಿಯನ್ನು ಪಡೆದ ನಂತರವೂ 22 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 80 ವರ್ಷದ ಮುದುಕಪ್ಪ ಅವರು 1997ರಲ್ಲಿ ನಿವೃತ್ತಿಯನ್ನು ಹೊಂದಿದ್ದರು, ಆ ಬಳಿಕ 22 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬ ಯೋಚನೆಯಿಂದ ನಿಸ್ವಾರ್ಥ ಸೇವೆಯನ್ನು ವಿದ್ಯಾಧ್ಯಾನ ಮಾಡುವ ಮೂಲಕ ಸಲ್ಲಿಸುತ್ತಿದ್ದಾರೆ.

 

 

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರೆತೆ ಇರುವುದು ಹಾಗೂ ಮಕ್ಕಳು ಕಲಿಕೆಯಲ್ಲಿ ಹಿಂದಿರುವುದರಿಂದ ಇವರು ತಮ್ಮ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಆಂಗ್ಲ ಭಾಷೆ ಶಿಕ್ಷಕರಾಗಿದ್ದ ಮುದುಕಪ್ಪ ಅವರು ಶ್ರೀ ಸಿದ್ದಯ್ಯ ಬಾಲಕರ ಸರಕಾರಿ ಫ್ರೌಡ ಶಾಲೆ, ಬಾಲಕೀಯರ ಸರಕಾರಿ ಫ್ರೌಡ ಶಾಲೆ ಅರಕೇರ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಇಂಗ್ಲೀಷ್ ಮಾತ್ರವಲ್ಲದೇ ಗಣಿತವನ್ನು ಕೂಡ ಹೇಳಿಕೊಡುತ್ತಿದ್ದಾರೆ.

 

 

ಇದರ ಜೊತೆಗೆ ವಿದ್ಯಾರ್ಥಿಗಳೊಡನೆ ಉತ್ತಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಬಾಷೆಯನ್ನು ಸಂಪೂರ್ಣವಾಗಿ ಮಾತನಾಡಲು ಶ್ರಮಿಸುತ್ತಾರೆ ಹಾಗಾಗಿ ಅವರು ಸುಲಭವಾಗಿ, ಸುಲಲಿತವಾಗಿ ಆಂಗ್ಲ ಭಾಷೆಯನ್ನು ಮಾತನಾಡಬೇಕು ಎಂಬ ಆಲೋಚನೆಯಿಂದ ಅವರು ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ತರಭೇತಿಯನ್ನು ಕೂಡ ನೀಡುತ್ತಿದ್ದಾರೆ.

 

 

ಮುದುಕಪ್ಪ ಅವರ ಗರಡಿಯಲ್ಲಿ ಶಿಕ್ಷಣ ಪಡೆದ ಅವರ ಶಿಷ್ಯರು ಇಂದು ಆನೇಕ ಉನ್ನತ ಹುದ್ದೆಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 80ನೇ ವಯಸ್ಸಿನಲ್ಲೂ ಅವರ ಶಿಕ್ಷಣದ ಮಾದರಿ, ಗತ್ತು, ಶಿಸ್ತನ್ನು ನೋಡಿದರೆ ಇಂದಿನ ಉತ್ಸಾಹಿ ಯುವಕರು ಸೇರಿದಂತೆ ಎಲ್ಲರೂ ನಾಚಬೇಕು ಅಂತ ಒಂದು ಸಾಮಥ್ರ್ಯವನ್ನು ಗಳಿಸಿಕೊಂಡಿದ್ದಾರೆ. ಅವರ ಸಮಯ ಪ್ರಜ್ಞೆ, ಸರಳ ಗುಣ ಮತ್ತು ಅದರ್ಶ ಗುಣಗಳ ಬಗ್ಗೆ ಅವರ ವಿದ್ಯಾರ್ಥಿಗಳು ಬಹಳ ಕೊಂಡಾಡುತ್ತಾರೆ.

 

 

ಈ ಬಗ್ಗೆ ಮುದುಕಪ್ಪ ಅವರ ಬಳಿ ಕೇಳಿದಾಗ ಅವರು ನನಗೆ ಮಕ್ಕಳಿಗೆ ವಿದ್ಯಾದಾನ ಮಾಡುವುದು ಎಂದರೆ ಬಹಳ ಖುಷಿಯಾಗುತ್ತದೆ. ನನ್ನ ಜೀವನದ ಪಯಣ ಯಾವಾಗ ಅಂತ್ಯವಾಗುತ್ತೊ ನನಗೆ ಗೊತ್ತಿಲ್ಲ.! ಹಾಗಾಗಿ ಅದಕ್ಕೂ ಮುನ್ನು ನನ್ನಲಿರುವ ಆನೇಕ ವಿಷಯಗಳನ್ನು ಈ ಮಕ್ಕಳಿಗೆ ಧಾರೆಯೆಳೆದು ಹೋಗಬೇಕು ಎಂಬ ಆಸೆ. ಈ ಗ್ರಾಮೀಣ ಮಕ್ಕಳು ದೊಡ್ಡ ಹುದ್ದೆಗಳಿಗೆ ಸೇರಿಕೊಂಡು ವಿದ್ಯಾವಂತರಾದರೆ ಅದೇ ನನಗೆ ಫಲ, ಖುಷಿ ಎಂದು ಹೇಳುತ್ತಾರೆ.

 

 

ಇವತ್ತಿಗೂ ಕೂಡ ಸರ್ಕಾರ ಹಾಗೂ ಅಲ್ಲಿನ ಸಂಸ್ಥೆ ಹಣವನ್ನು ಕೊಡುತ್ತೀವಿ ಎಂದರು ಕೂಡ ಯಾವ ಫಲಾಪೇಕ್ಷೆಯನ್ನು ಬಯಸದೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿರುವುದು ಮೆಚ್ಚಬೇಕಾದ ವಿಚಾರವೂ ಹೌದು. ಮುದುಕಪ್ಪ ಶಿಕ್ಷಕರ ದೃಢ ನಿರ್ಧಾರ ಹಾಗೂ ಸರಳ ಜೀವನಕ್ಕೆ ನಮ್ಮದೊಂದು ಸಲಾಂ.

LEAVE A REPLY

Please enter your comment!
Please enter your name here