ಸುಳ್ಳು ಹೇಳಿಸಿದ ಈ ವಸ್ತು ಈಗ ಲಂಚ ಕೊಡಲು ಪ್ರಚೋದಿಸುತ್ತಿದೆ..!

0
250

ಲಂಚವಿಲ್ಲದ ಸಮಾಜ ಎಲ್ಲರ ಕನಸು ಆದರೆ ಲಂಚ ಯಾರನ್ನೂ ಬಿಟ್ಟಿಲ್ಲ ಅನ್ನೋದು ನಿಜ ಸತ್ಯ. ಈ ಲಂಚ ಜಾಗತಿಕ ಸಮಸ್ಯೆ, ಯಾವುದೇ ತಾರತಮ್ಯ ವಿಲ್ಲದೇ ಲಂಚ ತನ್ನ ಬೇರು ಬಿಟ್ಟಿದೆ. ಈ ಲಂಚ ಸಮಾಜವನ್ನು ಹಾಳುಮಾಡುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಆದರೆ ಈ ಹೊಸ ಲಂಚಾವತಾರ ಜನರೇಷನ್ ಹಾಳು ಮಾಡತ್ತಿದೆ.

ಈಗೀಗ ಲಂಚ ಕೊಡುತ್ತಿರುವುದು ಕಾರ್ಯ ಮಾಡಿಸಿಕೊಳ್ಳಲು ಅಲ್ಲ, ಅಧಿಕಾರಿ ವರ್ಗಕ್ಕೂ ಅಲ್ಲ. ಬದಲಿಗೆ ಪೋಷಕರು ಮಕ್ಕಳಿಗೇ ಲಂಚ ಕೊಡುತ್ತಿದ್ದಾರೆ. ಎಲ್ಲೆಡೆ ಪೋಷಕರು ಮಕ್ಕಳಿಗೆ ಭವಿಷ್ಯ ಉಜ್ವಲವಾಗಲಿ ಅಂತ ಹರಸುತ್ತಾರೆ, ಶಿಕ್ಷಣ ಕೊಡುತ್ತಾರೆ, ನೆರವು ನೀಡುತ್ತಾರೆ ಆದರೆ ಈಗ ಲಂಚ ಕೊಡದೆ ವಿಧಿಯಿಲ್ಲ.

ಜಗತ್ತಿನ ಮುಮದುವರೆದ ದೇಶ ಲಂಡನ್ ಈಗ ಇಂತಹ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಹೆಲಿಕ್‍ಸ್ ಎಂಬ ಸಂಸ್ಥೆ ನಡೆಸಿರುವ ಸರ್ವೆ ಶೇ.23ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳಿಗೆ ಲಂಚ ಕೊಡುತ್ತಿದ್ದಾರೆ ಅದುವೇ ಆ ಒಂದು ವಸ್ತು ಮುಟ್ಟದಿರಲು. ಆ ವಸ್ತು ಅಷ್ಟೊಂದು ಪ್ರಭಾವಶಾಲಿಯಾ ಎಂಬ ನಿಮ್ಮ ಪ್ರಶ್ನೆಗೆ ನೀವೆ ಮುಂದೆ ಉತ್ತರ ಕೇಳಿಕೊಳ್ಳಿ.

ಸಮಪರ್ಕ ಸಾಧನಗಳಲ್ಲಿ ಕ್ರಾಂತಿ ಎಬ್ಬಸಿರುವ ಸ್ಮಾರ್ಟ್ ಫೋನ್‍ಗಳನ್ನು ಮುಟ್ಟದಂತೆ ಮಾಡಲು ಮಾತಾಪಿತರು ಹಣಕೊಡುತ್ತಿದ್ದಾರೆ ಎಂಬ ವರದಿ ನೀಡಿದೆ. ಹೀಗೆ ಹಣಕೊಡುವುದರಿಂದ ಮಕ್ಕಳು ಬೇರೆ ಎಲ್ಲಾದರೂ ಹೋಗಿ ಬರಲಿ, ಆಟ ಆಡಲಿ ಅನ್ನೋದು ಪೋಷಕರ ಲೆಕ್ಕ. ಮಕ್ಕಳು ಸ್ಮಾರ್ಟ್ ಫೋನ್ ದೂರವಿರಿಸಿ ಆಟ, ಮನೆ ಶುಚಿಗೊಳಿಸುವುದು, ನೀರು ಹಾಕುವುದು ಹೀಗೆ ಮುಂತಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಪೋಷಕರ ಉದ್ದೇಶವಂತೆ.

ಇದರಲ್ಲೂ ಸೋಜಿಗದ ವಿಚಾರಗಳಿವೆ ಪೋಷಕರು ಕೊಟ್ಟ ಹಣದಲ್ಲಿ ಏನು ಮಾಡುತ್ತೀರಿ ಎಂದು ಮಕ್ಕಳಿಗೆ ಕೇಳಿದಾಗ ಸಮಾಧಾನಕರ ಸಂಗತಿಯೆಂದರೆ ಶೇ.70ರಷ್ಟು ಮಂದಿ ಹಣವನ್ನು ಕೂಡಿಡುವುದಾಗಿ ಹೇಳಿದ್ದಾರೆ. ಕೆಲವರು ನಾವು ಫೋನ್ ಆ್ಯಪ್ ಮತ್ತು ಟೀವಿ ವಿಡಿಯೋ ಗೇಮ್, ಮ್ಯೂಸಿಕ್ ಕೊಳ್ಳುವುದಾಗಿ ಹೇಳಿದ್ದಾರೆ. ಉಳಿದಂತೆ ಶೇ.40ರಷ್ಟು ಮಕ್ಕಳು ಪೋಷಕರು ಕೊಟ್ಟ ಹಣ ಬಳಸಿ ಸಿಹಿ ಕೊಳ್ಳುವುದಾಗಿ ಹೇಳಿದ್ದಾರೆ.

ಸ್ಮಾರ್ಟ್‍ಫೊನ್‍ಗಳು ಸ್ಮಾರ್ಟ್ ಆಗಿ ಸುಳ್ಳು ಹೇಳಿದ್ದು ಕಲಿಸಿದ್ದು ಆಗಿದೆ, ಈಗ ಒಂದು ಜನರೇಷನ್ ಕ್ರಿಯಾಶೀಲವಾಗಿಸಲು ಪೋಷಕರೇ ಮಕ್ಕಳಿಗೆ ಲಂಚ ಕೊಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here