24 ಗಂಟೆಗಳ ಕಾಲವೂ ದೇಹ ತನ್ನ ಕಾರ್ಯವನ್ನು ನಿರ್ವಹಿಸಲು ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಕಾಲ ಕಾಲಕ್ಕೆ ಸೂಕ್ತ ಶಕ್ತಿಯನ್ನು ನೀಡಬೇಕು. ಆಹಾರ ಶಕ್ತಿಯ ಮೂಲವಾಗಿ ಸಏರಿದ್ರೆ ನೀರು ದೇಹಕ್ಕೆ ಅತ್ಯಾವಶ್ಯಕ ನೀರಿನ ಬಳಕೆ ತುಂಬಾ ಮುಖ್ಯ ಹಾಗಿದ್ರೆ ನೀರನ್ನು ಹೇಗೆ ಕುಡಿಯಬೇಕು..?

ನೀರು ದೇಹದ ಮುಕ್ಕಾಲು ಪಾಲು ಆವರಿಸಿಕೊಂಡಿರುತ್ತದೆ, ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ನೀರು ದೇಹದೊಳಗಿನ ಡಾಕ್ಟರ್ ಇದ್ದಂತೆ. ಹಲವಾರು ಸಮಸ್ಯೆಗಳಿಗೆ ನೀರು ಪರಿಹಾರ ಅಷ್ಟೆ ಏಕೆ ನೀರೆ ಔಷಧ. ನೀರು ಕುಡಿಯುವುದು ಎಷ್ಟು ಮುಖ್ಯವೋ ಅದರ ನಿರ್ಧಿಷ್ಟ ಬಳಕೆಯೂ ಅಷ್ಟೆ ಮುಖ್ಯ.
ಕೆಲವರು ಪ್ರತಿ ಬಾರಿಯೂ ಬಿಸಿ ನೀರನ್ನು ಕುಡಿಯಲು ಬಯಸುತ್ತಾರೆ, ಇನ್ನೂ ಕೆಲವರು ನೀರು ತಣ್ಣಗೆ ಇರಬೇಕು. ನೀರು ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಂತಹ ಸಮಸ್ಯೆಗಳಿಗೆ ಉಪಶಮನ ನೀಡಬಲ್ಲದು. ಬಿಸಿ ನೀರು ಕುಡಿಯುವುದು ಒಳ್ಳೆಯದು ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

ನೆರೆಯ ಚೀನಾ ಮತ್ತು ಜಪಾನ್ನಲ್ಲಿ ಒಂದು ಅಭ್ಯಾಸವಿದೆ ಊಟದ ನಂತರ ಬಿಸಿ ಪಾನೀಯ ಕುಡಿಯುವುದು. ಅಲ್ಲಿ ಸ್ವಲ್ಪವೇ ಗ್ರೀನ್ ಟೀ ಹಾಕಿದ ಬಿಸಿ ನೀರನ್ನು ಸೇವಿಸುತ್ತಾರೆ. ಜಪಾನಿನಲ್ಲಿ ದಿನವೂ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಹಲ್ಲುಜ್ಜುವ ಮುನ್ನ ಬಿಸಿ ನೀರು ಕುಡಿಯುವುದು ಅಭ್ಯಾಸ ಇದು ಅವರಿಗೆ ಒಂದು ರೀತಿಯ ಥೆರಪಿಯಿದ್ದಂತೆ.
ಸಾವಿರ ವರ್ಷಗಳ ನಿರಂತರ ಬಳಕೆಯಲ್ಲಿರುವ ಭಾರತೀಯ ಆಯುರ್ವೇದ ಪದ್ದತಿಯಲ್ಲೂ ಬಿಸಿನೀರಿಗೆ ಮಹತ್ವ ನೀಡಲಾಗಿದೆ. ಊಟದ ಬಳಿಕ ಬಿಸಿ ನೀರು ಕುಡಿಯಲು ಇಲ್ಲಿಯೂ ಸೂಚಿಸಲಾಗುತ್ತೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಬಿಸಿನೀರು ಕುಡಿಯುವುದರಿಂದ ಮಲಬದ್ಧತೆ ಬರುವುದಿಲ್ಲ, ಹೊಟ್ಟೆ ಊದಿಕೊಳ್ಳುವುದು ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂಬುದು ಜನಜನಿತವಾಗಿದೆ.

ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರದಬ್ಬಲು ಬಿಸಿ ನೀರು ಪ್ರೇರಕ ಶಕ್ತಿಯಂತೆ ಕೆಲಸ ಮಾಡುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸಿ, ಟಾಕ್ಸಿಕ್ ಅಂಶವನ್ನು ಹೊರಹಾಕುತ್ತದೆ. ದೇಹ ಸುಸ್ಥಿತಿಯಲ್ಲಿರುವ ಪ್ರಮುಖವಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯಬೇಕು. ಬಿಸಿನೀರು ಕುಡಿಯುವುದರಿಂದ ಸಹಜವಾಗಿ ದೇಹದೊಳಗಿನ ಅಂಗಾಂಶಗಳು ಕ್ರಿಯಾಶೀಲಗೊಂಡು ಕ್ರಿಯೆಗಳು ಸುಗಮವಾಗಿ ಪಚನ ಕ್ರಿಯೆ ಅಚ್ಚುಕಟ್ಟಾಗಿ ನಡೆಯುತ್ತದೆ. ಗಂಟಲು ಕೆರೆತ, ಶೀತ ಸದಾ ಕಾಡುವ ಸಮಸ್ಯೆಗಳು ಇವುಗಳನ್ನೂ ದೂರವಿಡಲು ಬಿಸಿ ನೀರು ಬಹಳ ಯೋಗ್ಯ ಎಂಬುದು ಪರಿಣಿತರ ಸಲಹೆ. ಆರೋಗ್ಯ ಸುಧಾರಣೆಯ ಬಗ್ಗೆ ಯೋಚಿಸುವ ಪ್ರತಿಯೊಬ್ಬರು ಬಿಸಿ ನೀರು ಕುಡಿಯಲು ಆರಂಭಿಸಿದ್ರೆ ಒಳ್ಳೆಯದು.