ಜಗತ್ತಿನ 10 ಪವರ್ ಫುಲ್ ಭಾಷೆಗಳಲ್ಲಿ ಭಾರತದ ಈ ಭಾಷೆಯೂ ಒಂದು..!

0
266

ಜಗತ್ತಿನ 10 ಫವರ್‍ಫುಲ್ ಭಾಷೆಗಳಲ್ಲಿ ಭಾರತದ ಒಂದು ಭಾಷೆಯೂ ಸ್ಥಾನ ಪಡೆದಿದೆ. ಜಗತ್ತಿನ ಪವರ್ ಫುಲ್ ಭಾಷೆಗಳ ಸರ್ವೇಯಲ್ಲಿ ಭಾರತದ ಭಾಷೆ ಕೂಡ ಸ್ಥಾನ ಪಡೆದುಕೊಂಡಿದೆ ಎಂಬುದು ಹೆಮ್ಮೆಯ ವಿಚಾರವಾಗಿದೆ.

ಇನ್ನು ಜಗತ್ಯಿನ ಪವರ್ ಫುಲ್ ಭಾಷೆಗಳಲ್ಲಿ ಸ್ಥಾನ ಪಡೆದ ಭಾರತದ ಭಾಷೆ ಹಿಂದಿ. ಫವರ್‍ಫುಲ್ ಸ್ಥಾನದ ಮೂಲಕ ಹಿಂದಿ ಭಾಷೆಗೆ ಜಾಗತಿಕ ಮನ್ನಣೆ ದೊರೆತಿದೆ. ಇನ್‍ಸ್ಟಿಯಡ್ ನಡೆಸಿದ ಸಮೀಕ್ಷೆ, ಜಗತ್ತಿನ 10 ಫವರ್‍ಫುಲ್ ಭಾಷೆಗಳನ್ನು ಪಟ್ಟಿ ಮಾಡಿತ್ತು.

ಪ್ರಪಂಚದಾದ್ಯಂತ ನಡೆದ ಸರ್ವೇಯಲ್ಲಿ ಇಂಗ್ಲಿಷ್ ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಫ್ರೆಂಚ್ (2), ಮ್ಯಾಂಡರಿನ್(3), ಸ್ಪ್ಯಾನಿಶ್(4), ರಷ್ಯನ್(5), ಅರೇಬಿಕ್(6), ಜರ್ಮನ್(7), ಜಪಾನಿಸ್(8) ಮತ್ತು ಪೊರ್ಚುಗೀಸ್ (9)ನೇ ಸ್ಥಾನದಲ್ಲಿವೆ. ಹಾಗೂ 10 ನೇ ಸ್ಥಾನದಲ್ಲಿ ಭಾರತೀಯ ಭಾಷೆ ಹಿಂದಿ ಇದೆ.

LEAVE A REPLY

Please enter your comment!
Please enter your name here