ಮನೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಮಾಡುವ ಬದಲು ಶಿವಲಿಂಗ ಸ್ಥಾಪನೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಿ. ನಮ್ಮ ಪುರಾತನ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವ ಮೊದಲು ನಿಯಮ ಪಾಲಿಸುವುದು ಬಹಳ ಮುಖ್ಯ.
• ಶಿವಲಿಂಗ ಸ್ಥಾಪನೆ ಮಾಡುವಾಗ ಗಾತ್ರದ ಬಗ್ಗೆ ಗಮನವಿರಲಿ. ದೊಡ್ಡ ಗಾತ್ರದ ಶಿವಲಿಂಗವನ್ನು ಎಂದೂ ಸ್ಥಾಪನೆ ಮಾಡಬೇಡಿ.
• ಶಿವಲಿಂಗವೊಂದನ್ನೇ ಎಂದೂ ಸ್ಥಾಪನೆ ಮಾಡಬೇಡಿ. ಅದ್ರ ಜೊತೆ ಗಣೇಶ ಹಾಗೂ ಗೌರಿಯನ್ನೂ ಸ್ಥಾಪನೆ ಮಾಡಿ.
• ಶಿವನಿಗೆ ಪೂಜೆ ಮಾಡಲು ಸಾಧ್ಯವಾಗದ ಸ್ಥಳದಲ್ಲಿ ಎಂದೂ ಶಿವಲಿಂಗ ಸ್ಥಾಪನೆ ಮಾಡಬೇಡಿ. ಶಿವಲಿಂಗಕ್ಕೆ ಸರಿಯಾಗಿ ಪೂಜೆ ಮಾಡುವ ಸ್ಥಳದಲ್ಲಿ ಮಾತ್ರ ಸ್ಥಾಪನೆ ಮಾಡಿ.
• ಶಿವಲಿಂಗದ ಸ್ಥಾಪನೆಯನ್ನು ಎಂದೂ ತುಳಸಿ ಜೊತೆ ಮಾಡಬೇಡಿ. ತುಳಸಿ ಜೊತೆ ಕೇವಲ ಸಾಲಿಗ್ರಾಮವನ್ನು ಮಾತ್ರ ಸ್ಥಾಪನೆ ಮಾಡಬೇಕು.
• ಶಿವಲಿಂಗವನ್ನು ಎಂದೂ ಮುಚ್ಚಿರುವ ಜಾಗದಲ್ಲಿ ಮಾಡಬೇಡಿ. ಕೇವಲ ತೆರೆದ ಸ್ಥಳಗಳಲ್ಲಿ ಮಾತ್ರ ಶಿವಲಿಂಗವನ್ನು ಸ್ಥಾಪಿಸಿ.