ಮುಖದ ಹೊಳಪಿಗೆ ಇದನ್ನ ಉಪಯೋಗಿಸಿದರೆ ಚೆಂದ

0
391

ಹೊಳಪಿನ ಚರ್ಮಕ್ಕಾಗಿ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಹೊಳೆಯುವ ಚರ್ಮ ನಿಮ್ಮದಾಗಬಹುದು.

ಗ್ಲಿಸರಿನ್: ಗ್ಲಿಸರಿನ್‌ ಚರ್ಮದ ಆರೋಗ್ಯವನ್ನ ಹೆಚ್ಚಿಸುವಂಥ ಉತ್ಪನ್ನ. ಇದನ್ನ ಆಯ್ಲಿ, ಡ್ರೈ, ಸೀವಿಯರ್‌ ಡ್ರೈ ಹೀಗೆ ಎಲ್ಲಾ ತರಹದ ಚರ್ಮಗಳಿಗೂ ಬಳಸಬಹುದು. ಮೊಡವೆಗಳು, ಕಲೆಗಳು, ಸುಕ್ಕು ತೊಡೆದುಹಾಕಲು ಗ್ಲಿಸರಿನ್‌ ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಹತ್ತಿಯ ಉಂಡೆಯನ್ನ ಗ್ಲಿಸರಿನ್‌ ನಲ್ಲಿ ಅದ್ದಿ ಮೃದುವಾಗಿ ಚರ್ಮದ ಮೇಲೆ ಮಸಾಜ್‌ ಮಾಡಿಕೊಳ್ಳಿ. ರಾತ್ರಿ ಮಲಗುವ ಮುಂಚೆ ಮುಖವನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಗ್ಲಿಸರಿನ್‌ ಲೇಪಿಸಿಕೊಂಡು ಮಲಗಬೇಕು.

ಆಲೀವ್‌ ಆಯಿಲ್: ಶುದ್ಧ ಆಲಿವ್ ಎಣ್ಣೆಯನ್ನ ಅಂಗೈಗೆ ಹಾಕಿಕೊಂಡು ಹದವಾಗಿ ತಿಕ್ಕಿದ ನಂತರ ಮುಖಕ್ಕೆ ಮೃದುವಾಗಿ ಮಸಾಜ್‌ ಮಾಡಿಕೊಳ್ಳಬೇಕು. ಮುಖ ಮತ್ತು ಕತ್ತಿನ ಭಾಗಗಳಿಗೆ ಮಸಾಜ್ ಮಾಡುವುದರಿಂದ ಚರ್ಮ ಕಪ್ಪಾಗುವುದನ್ನ ತಡೆಗಟ್ಟಬಹುದು.

ಹಾಲು: ಹಾಲಿನಿಂದ ಚರ್ಮದ ಮೃದುತ್ವ ಹೆಚ್ಚಬಲ್ಲದು ಮತ್ತು ಚರ್ಮದ ರಂಧ್ರಗಳನ್ನು ಆಳವಾಗಿ ಶುದ್ಧೀಕರಿಸಬಲ್ಲದು. ರಾತ್ರಿ ಮಲಗುವುದಕ್ಕೂ 10-15 ನಿಮಿಷಗಳ ಮುಂಚೆ ಕಚ್ಚಾ ಹಾಲನ್ನು ಮುಖಕ್ಕೆ ಲೇಪಿಸಿಕೊಳ್ಳಿ. ನಂತರ ಲೇಪಿಸಿಕೊಂಡ ಹಾಲು ಸಂಪೂರ್ಣ ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ರೋಸ್ ವಾಟರ್: ರೋಸ್‌ವಾಟರ್‌ ದಿನನಿತ್ಯ ಬೇಕೆಂದಾಗಲೆಲ್ಲ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಲ್ಲದು.

ಜೇನುತುಪ್ಪ: ಚರ್ಮದ ಆರೋಗ್ಯವನ್ನ ಹೆಚ್ಚಿಸುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ಅದ್ಭುತ ಸೌಂದರ್ಯ ಪೂರಕ ವಸ್ತುವಾಗಿರುವ ಜೇನುತುಪ್ಪವನ್ನ ದಿನನಿತ್ಯ ಸ್ನಾನಕ್ಕೂ ಮುಂಚೆ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ ಯೌವ್ವನ ಸಿಗಬಲ್ಲದು.

LEAVE A REPLY

Please enter your comment!
Please enter your name here