ಮನೆಯಲ್ಲಿ ನಿತ್ಯ ಕಲಹಕ್ಕೆ ಈ ಒಂದು ವಸ್ತುವೇ ಕಾರಣ..! ಯಾವ ವಸ್ತುವನ್ನು ಇಡಲೇ ಬಾರದು ?

0
349

ದಿನನಿತ್ಯ ನಮ್ಮ ಜೀವನದ ಜಂಜಾಟದಲ್ಲಿ ನಾವು ಗಮನಿಸದೆ ಎಷ್ಟೋ ವಸ್ತುಗಳು ನಮ್ಮ ಮೇಲೆ ಪ್ರಭಾವ ಬೀರುತ್ತದೆ . ಸುತ್ತಮುತ್ತ ನಾವೇನು ಪೂಜೆ ಮಾಡುತ್ತಿದ್ದೇವೆ, ಸಂಸ್ಕಾರ ಮಾಡುತ್ತಿದ್ದೇವೆ , ವ್ರತ ಮಾಡುತ್ತಿದ್ದೇವೆ, ಎಲ್ಲ ನಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಮಾಡುತ್ತಿದ್ದೇವೆ. ಆದರೂ ಕುಟುಂಬದಲ್ಲಿ ಒಗ್ಗಟ್ಟು ಬರುತ್ತಿಲ್ಲ,  ಏನೋ ಒಂದು ಸಣ್ಣ ಪುಟ್ಟ ಕಾರಣಗಳಿಂದ ನಮ್ಮ ಕುಟುಂಬದಲ್ಲಿ ಕಿರಿಕಿರಿ ಶುರುವಾಗುತ್ತದೆ. ಒಂದು ಸಣ್ಣ ಮಾತು ಬೆಂಕಿಯಾಗಿ ಜಗಳ, ಕಲಹ, ಮನಸ್ತಾಪ, ದೂರ ದೂರ ಆಗುವ ಸಂದರ್ಭದ ಮಾತುಗಳು ಕೂಡ ಕೌಟುಂಬಿಕ ಜೀವನದಲ್ಲಿ ಬರುತ್ತವೆ. ಈ ಎಲ್ಲ ಸಮಸ್ಯೆಗಳು ಮತ್ತು ತೊಳಲಾಟಕ್ಕೆ ಸೂಕ್ಷ್ಮವಾಗಿ ಗಮನಿಸಿದರೆ ಈ ಒಂದು ವಸ್ತುವೇ ಕಾರಣ. ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ದಿನನಿತ್ಯ ನೀವು ಉಪಯೋಗಿಸುವ ಈ ವಸ್ತು ವನ್ನು ಇಲ್ಲಿ ಇಡಬೇಕು. ಅಲ್ಲಿ ಇಟ್ಟರೆ ಅದು ಉಪಯುಕ್ತವಾಗುತ್ತದೆ.

ಆ ವಸ್ತು ಯಾವುದೆಂದರೆ ನಾವು ದಿನನಿತ್ಯ ಬಳಕೆ ಮಾಡುವಂತಹ ಪರಕೆ. ಕಸ ಗುಡಿಸಿದ ನಂತರ ಪರಕೆಯನ್ನು  ಗೋಡೆಗೆ ನಿಲ್ಲಿಸುವುದು ಅಥವಾ ಕಣ್ಣಿಗೆ ಕಾಣಿಸುವಂತೆ ಇಡುವುದು ಮಾಡುತ್ತೇವೆ. ಕಸ ಎಂದರೆ ರಾಹು ಅದನ್ನು ತೆಗೆದು ಹಾಕುವ ವಸ್ತುವನ್ನು ಕೂಡ ನಾವು ಪದೇ ಪದೇ ಕಣ್ಣಿಗೆ ಕಾಣುವಂತೆ ಇಡಬಾರದು. ನಾವು ಮನೆಯಿಂದ ಹೊರಗೆ ಹೋಗಿದ್ದಾಗ ಪಾಸಿಟಿವ್ ಇರುವಂತಹ ಸ್ಥಳಕ್ಕೂ ಹೋಗಿರುತ್ತೇವೆ ನೆಗೆಟಿವ್ ಇರುವಂತಹ ಸ್ಥಳಕ್ಕೂ ಹೋಗಿರುತ್ತೇವೆ ಆ ನಂತರ ಮನೆಗೆ ಬಂದಿರುತ್ತೇವೆ.

ಆ ನಂತರ ಕಸವನ್ನು ಗುಡಿಸಿ ಪೊರಕೆಯನ್ನು ಕಣ್ಣಿಗೆ ಕಾಣುವಂತೆ ಇಡುತ್ತೇವೆ ಇದರಿಂದ ನೆಗಟಿವ್ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಪೊರಕೆಯನ್ನು ಕಣ್ಣಿಗೆ ಕಾಣುವಂತೆ ಇಡಬಾರದು.  ಎಲ್ಲಿಯಾದರೂ ಅದನ್ನು ಮುಚ್ಚಿಡಬೇಕು ಯಾವುದೇ ಕಾರಣಕ್ಕೂ ಪೊರಕೆಯನ್ನು ಮೂಲೆಯಲ್ಲಿ ನಿಲ್ಲಿಸಬೇಡಿ.

ಮನೆಯಲ್ಲಿ ನಿಮಗೆ ಗೊತ್ತಿಲ್ಲದಂತೆ ಮಾಡುವ ಈ ತಪ್ಪಿನಿಂದಾಗಿ ಮನೆಯಲ್ಲಿ ಕಿರಿಕಿರಿ ಜಗಳ ಕಲಹಗಳು ಉಂಟಾಗುತ್ತವೆ . ಇದರಿಂದ ದಿನನಿತ್ಯ  ಕಲಹಗಳು ದೊಡ್ಡ ಕೌಟುಂಬಿಕ ಸಮಸ್ಯೆಗಳಾಗಿ ನಿಂತು ಬಿಡುತ್ತವೆ . ಆದ್ದರಿಂದ ದಿನನಿತ್ಯ ಬಳಸುವ ಪೊರಕೆಯನ್ನು ತುಂಬಾ ಎಚ್ಚರಿಕೆಯಿಂದ ಬಳಸಿ . ಶುದ್ಧವಾಗಿರುವ ಪೊರಕೆಯನ್ನು ಬಳಸಿ , ಅರ್ಧಂಬರ್ದ ಮಾಡಿದರು ಅಂತಹ ಪೊರಕೆಯನ್ನು ಬಳಸಬೇಡಿ , ಅದನ್ನು ಬಿಸಾಕಿ.  ಚೆನ್ನಾಗಿರುವ  ಪೊರಕೆಯನ್ನು ಬಳಸಿ, ಎಲ್ಲರ ಕಣ್ಣಿಗೆ ಕಾಣುವಂತೆ ಪೊರಕೆಯನ್ನು ಇಡಬೇಡಿ. ಪೊರಕೆಯನ್ನು ಗೋಡೆಗೆ ಒರಗಿಸಿ ನಿಲ್ಲಿಸಬೇಡಿ ಈ ಕೆಲಸಗಳನ್ನು ಮಾಡದೇ ಇದ್ದರೆ ಕೌಟುಂಬಿಕ ಕಲಹಗಳು ಕಡಿಮೆಯಾಗುತ್ತವೆ.


ಮನೆಯಲ್ಲಿ ಯಾವ ವಸ್ತುವನ್ನು ಇಡಲೇ ಬಾರದು ?

ಮನೆಯಲ್ಲಿ ಪದೇಪದೆ ಕಲಹ ಆಗುತ್ತಿದ್ದರೆ , ಅದಕ್ಕೆ ಒಂದು ಕಾರಣವಿದೆ. ಮನೆಯಲ್ಲಿ ಈ ಒಂದು ವಸ್ತುವನ್ನು ಇಟ್ಟಿದ್ದರೆ ಕಲಹ ಅನಾರೋಗ್ಯ ಕಟ್ಟಿಟ್ಟ ಬುತ್ತಿ . ಅದರಲ್ಲೂ ದಂಪತಿಗಳಿಗೆ  ಅನುರಾಗ ಎನ್ನುವುದು ಹತ್ತಿರಕ್ಕೂ ಬರುವುದಿಲ್ಲ. ಅದರಲ್ಲೂ ವಯಸ್ಸಾದವರು ಇದ್ದರೆ ಅವರು ಮಲಗಿರುವ ಜಾಗದಲ್ಲೇ ಮಲಗಿರುತ್ತಾರೆ. ಮನೆಯಲ್ಲಿ ಈ ವಸ್ತುವನ್ನು ಇಟ್ಟರೆ ಅದನ್ನು ಹೆಚ್ಚಾಗಿ ಬಳಸಿದರೆ ಈ ಸಮಸ್ಯೆಗಳು ಉಂಟಾಗುತ್ತವೆ. ಆ ವಸ್ತು ಇನ್ಯಾವುದೂ ಅಲ್ಲ ಕಬ್ಬಿಣದ ವಸ್ತುಗಳು. ಅಪ್ಪಿ ತಪ್ಪಿಯೂ ಕೂಡ ಮನೆಯಲ್ಲಿ ಕಬ್ಬಿಣದ ಮಂಚದ ಮೇಲೆ ಮಲಗಬಾರದು.

ಕಬ್ಬಿಣದ ಮಂಚದ ಮೇಲೆ ಮಲಗಿದ ತಂದೆ ತಾಯಿಗಳು ಯಾವುದೇ ಕಾರಣಕ್ಕೂ ಮೇಲೆ ಏಳುವುದಿಲ್ಲ. ಪುಟ್ಟ ಮಗುವನ್ನು ಕೂಡ ನಾವು ಕಬ್ಬಿಣದ ತೊಟ್ಟಿಲಿನಲ್ಲಿ ತೂಗುವುದಿಲ್ಲ ಮರದ ತೊಟ್ಟಿಲಿನಲ್ಲಿ ತೂಗುತ್ತೇವೆ. ಅಂತಹದ್ದರಲ್ಲಿ ಮನೆಯ ಹಿರಿಯರನ್ನು ಕಬ್ಬಿಣದ ಮಂಚದಲ್ಲಿ ಮಲಗಿಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿ ಯಾವತ್ತೂ ದಾರಿದ್ರ್ಯವೇ. ಶನಿ ಪ್ರವೇಶವಾಗುತ್ತದೆ ಆದಷ್ಟು ಮನೆಯಲ್ಲಿ ಕಬ್ಬಿಣದ ವಸ್ತುಗಳು ಮತ್ತು ಕಬ್ಬಿಣದ ಮಂಚವನ್ನು ಬಳಸಲೇಬೇಡಿ, ಬಳಸಲೇ ಕೂಡದು ಜಾಗ್ರತೆ.

ಹಿರಿಯರ ಫೋಟೋಗಳನ್ನು ದಕ್ಷಿಣದ ಗೋಡೆಗೆ ಹಾಕಿ, ಉತ್ತರಕ್ಕೆ ಅಭಿಮುಖವಾಗಿ ಇಟ್ಟು ಪೂಜೆ ಮಾಡಬೇಕು

ಪ್ರತಿನಿತ್ಯ ನಾವು ಮನೆಯಲ್ಲಿ ಪೂಜೆಯನ್ನು ಮಾಡುತ್ತೇವೆ. ಕೆಲವರಿಗೆ ನಾವು ಪೂಜೆಯನ್ನು ಏಕೆ ಮಾಡುತ್ತೇವೆ ಎಂಬುದೇ ಗೊತ್ತಿರುವುದಿಲ್ಲ. ನಮಗೆ ಮಾರ್ಗದರ್ಶನವಾಗಿ ನಮ್ಮ ಗುರು ಹಿರಿಯರು ಶಕ್ತಿ ನಮ್ಮ ಜೊತೆಗೆ ಯಾವಾಗಲೂ ಇರುತ್ತದೆ. ಅವರ ಮಾತು ಜ್ಞಾನ ಅನುಭವ ನಮಗೆ ದಾರಿದೀಪವಾಗಿ ನಮ್ಮನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಸುತ್ತದೆ. ದೇವರನ್ನು ಹೇಗೆ ಒಂದು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಪೂಜೆ ಮಾಡುತ್ತೇವೆಯೋ ಹಾಗೆಯೇ ಹಿರಿಯರನ್ನು ಕೂಡ ಒಂದು ಪ್ರತ್ಯೇಕವಾದ ಜಾಗದಲ್ಲಿ ಇಟ್ಟು ಪೂಜೆ ಮಾಡಬೇಕು. ಹಿರಿಯರ ಫೋಟೋಗಳನ್ನು ಮುಖ್ಯವಾಗಿ ಯಾವ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿಲ್ಲ.

ನಿಯಮಗಳ ಪ್ರಕಾರ ಹಿರಿಯರ ಫೋಟೋಗಳನ್ನು ದಕ್ಷಿಣದ ಗೋಡೆಗೆ ಹಾಕಿ ಅಂದರೆ ಉತ್ತರಕ್ಕೆ ಅಭಿಮುಖವಾಗಿ ಇಟ್ಟು ಪೂಜೆ ಮಾಡಬೇಕು. ನಮ್ಮ ಭೂತಿ ಜ್ಞಾನ ಸುಜ್ಞಾನ ಎಲ್ಲವೂ ಕೂಡ ಹಿರಿಯರಿಂದ ಬಳುವಳಿಯಾಗಿ ಬಂದಿರುವುದು ಆದ್ದರಿಂದ ಅವರನ್ನು ನೇಮಿಸಿಕೊಳ್ಳದೆ ದಿನವೇ ಆರಂಭವಾಗುವುದಿಲ್ಲ. ನಮ್ಮಗೆ ದೇಹ ಹೆಸರು ಸಂಸ್ಕಾರ  ಜ್ಞಾನ ಎಲ್ಲವೂ ಹಿರಿಯರಿಂದಲೇ ಬಂದಿದ್ದು, ಹಿರಿಯರನ್ನು ನೆನೆಸದೆ ನಾವು ಯಾವ ಕಾರ್ಯವನ್ನು ಕೂಡ ಮಾಡುವುದಿಲ್ಲ.

ಅದಕ್ಕಾಗಿಯೇ ಪಿತೃಗಳನ್ನು  ಮರೆಯದೇ ಅವರನ್ನು ಪೂಜಿಸಲಿ ಎಂದು ಹದಿನೈದು ದಿನಗಳ ಕಾಲ ಪಿತೃಪಕ್ಷವನ್ನಾಗಿ ಆಚರಿಸಲಾಗುತ್ತದೆ. ನಿತ್ಯ ದಕ್ಷಿಣದ ದಿಕ್ಕಿನಲ್ಲಿ ಪಿತೃಗಳ ಫೋಟೋ ಮುಂದೆ ಒಂದು ದೀಪ ಬೆಳಗುತ್ತಿರಬೇಕು.

ಒಂದು ಪುಟ್ಟದಾದ ನೈವೇದ್ಯ ನ್ನಿಟ್ಟು ಪುಷ್ಪವನ್ನು ಅರ್ಪಿಸಿ ಪೂಜೆ ಮಾಡಬೇಕು. ಯಾರ ಜಾತಕದಲ್ಲಿ  ಶನಿ ರಾಹು ಸಂಧಿ ಇದೆಯೋ ಅಥವಾ ಶನಿ ಕೇತು ಸಂದಿ ಇದೆಯೊ ಅಲ್ಲಿ ಪಿತೃ ದೋಷವಿರುತ್ತದೆ. ಆಗ ನೀವು ಮಾಡುವ ಯಾವುದೇ ಕೆಲಸಗಳು ಕೂಡ ಪರಿಪೂರ್ಣವಾಗುವುದಿಲ್ಲ ನಿಮ್ಮ ಬಳಿ ಎಷ್ಟೇ ಟಾಲೆಂಟ್ ಇದ್ದರೂ ಎಷ್ಟೇ ಶ್ರಮಪಟ್ಟು ದುಡಿದರೂ ಕೂಡ ಅದು ವ್ಯರ್ಥವಾಗಿ ಹೋಗುತ್ತದೆ.

ಆದ್ದರಿಂದ  ಹಿರಿಯರ ಫೋಟೊವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಅಲ್ಲೊಂದು ದೀಪ ಪ್ರತಿನಿತ್ಯ ಉರಿಯುತ್ತಿರುವ ಹಾಗೆ ನೋಡಿಕೊಳ್ಳಿ. ಬೇರೆ ಯಾವುದೇ ದಿಕ್ಕಿಗೆ ಇಟ್ಟು ಪೂಜೆ ಮಾಡಲು ಹೋಗಬೇಡಿ. ಇದರಿಂದ ಪಿತೃದೋಷ ಕಡಿಮೆಯಾಗಿ ನಿಮ್ಮಲ್ಲಿ ತೇಜಸ್ಸು ವೃದ್ಧಿಸುತ್ತದೆ

LEAVE A REPLY

Please enter your comment!
Please enter your name here