ಖ್ಯಾತ ನಟಿಯ ತಂದೆ-ತಾಯಿ ಮದುವೆ ಫೋಟೋ ಇದು…ಕರ್ನಾಟಕದ ಆ ನಟಿ ಯಾರು..?

0
766

ನಾವು ಎಷ್ಟೇ ದೊಡ್ಡವರಾದರೂ, ಎಷ್ಟು ಸಾಧನೆ ಮಾಡಿದರೂ, ಎಷ್ಟು ದೊಡ್ಡ ಸೆಲಬ್ರಿಟಿ ಎನಿಸಿದರು ನಮಗೆ ಜನ್ಮ ನೀಡಿದ ತಂದೆ-ತಾಯಿಗಳ ಮುಂದೆ ಏನೇನೂ ಅಲ್ಲ. ನಮ್ಮನ್ನು ಆ ಸ್ಥಾನಕ್ಕೆ ತರುವುದರಲ್ಲಿ ಅವರ ಪಾತ್ರ ಸಮುದ್ರದಷ್ಟಿರುತ್ತದೆ.

 

 

 

ಐಶ್ವರ್ಯ ರೈ ವಿಶ್ವಸುಂದರಿ, ಖ್ಯಾತ ನಟಿ ಕೂಡಾ. ಐಶ್ವರೈ ರೈ ಹುಟ್ಟಿದ್ದು ಮಂಗಳೂರಿನಲ್ಲಾದರೂ ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಮುಂಬೈನಲ್ಲಿ. ಚಿಕ್ಕಂದಿನಲ್ಲೇ ಮಾಡೆಲಿಂಗ್‍ನತ್ತ ಒಲವು ಹೊಂದಿದ್ದ ಐಶ್ವರ್ಯ 1994 ರಲ್ಲಿ ವಿಶ್ವಸುಂದರಿ ಕಿರೀಟ ಪಡೆದರು.

 

 

ಅವರ ಈ ಸಾಧನೆಗೆ ಪ್ರೋತ್ಸಾಹ ನೀಡಿದ್ದು ತಂದೆ ಕೃಷ್ಣರಾಜ ರೈ, ತಾಯಿ ಬೃಂದಾ. ಐಶ್ವರ್ಯ ತಂದೆ ಈಗ ಇಲ್ಲ. ಇಂದು ಅವರ ತಂದೆ ತಾಯಿ ಮದುವೆಯಾದ ದಿನ. 50 ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ತಮ್ಮ ಹೆತ್ತವರ ಮದುವೆ ದಿನ ತೆಗೆದ ಫೋಟೋವನ್ನು ತಮ್ಮ ಇನ್ಸ್‍ಟಾಗ್ರಾಮ್‍ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.

 

 

ಸದ್ಯಕ್ಕೆ ಐಶ್ವರ್ಯ, ಮಣಿರತ್ನಂ ನಿರ್ದೇಶನದ ತಮಿಳು ಐತಿಹಾಸಿಕ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ.

LEAVE A REPLY

Please enter your comment!
Please enter your name here