ಬಾವಿಯಲ್ಲಿ ಅಡಗಿದ್ದ ಈ ದೇವರು ಮೇಲೆದ್ದು ಬಂದಿದ್ದು ದಶಕಗಳ ಬಳಿಕ

0
216

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿತ್ತು ಎಂದರೆ ಯಾರಿಗೂ ನಂಬಲು ಸಾಧ್ಯವೇ ಇಲ್ಲ. ಹೌದು ದೇವಾಲಯದ ಮೇಲೆ ನಡೆಯಬಹುದಾದ ದಾಳಿಗೆ ಹೆದರಿ ದೇವಾಲಯದ ಪ್ರಮುಖರು ಮೂಲ ವಿಗ್ರಹವನ್ನೇ ಬಾವಿಯಲ್ಲಿ ಬಚ್ಚಿಟ್ಟಿದ್ದರು.

ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಚತುರ್ಭಜನಾದ ದೇವರಿಗೂ ಸಂಕಷ್ಟ ಬಂದಿತ್ತು. ಈ ದೇವರನ್ನು ರಕ್ಷಿಸಲು ಬೇರೆ ದಾರಿಯಿಲ್ಲದೆ ದೇವಾಲಯದ ಪ್ರಮುಖರು ಮೂಲ ವಿಗ್ರಹವನ್ನೇ ಬಾವಿಯಲ್ಲಿ ಅಡಗಿಸಿಟ್ಟು ದಾಳಿಯಿಂದ ತಪ್ಪಿಸಿದ್ರು.

ಅಷ್ಟಕ್ಕೂ ಈ ದೇವರು ನೆಲೆ ನಿಂತಿರೋದು ದೇವರ ಸ್ವಂತನಾಡು ಕೇರಳದ ಗುರುವಾಯೂರಿನಲ್ಲಿ. ಕೇರಳೀಯ ದೇವಾಲಯಗಳ ಶೈಲಿಯಲ್ಲಿಯೇ ನಿರ್ಮಿಸಲಾಗಿರುವ ದೇಗುಲ ದ್ರಾವಿಡ ಶೈಲಿಗಿಂತ ವಿಭಿನ್ನವಾಗಿದೆ. ದೇವಾಲಯದ ಮುಂಭಾಗ 110 ಅಡಿಯ ಸುವರ್ಣ ಧ್ವಜಸ್ಥಂಭ ಇದ್ದು ಆಕರ್ಷಣೀಯವಾಗಿದೆ. ದೇವಾಲಯ ಪ್ರವೇಶಿಸುತ್ತಿದ್ದಂತೆ ಕಾಣಸಿಗುವ ಕಂಬಗಳು ಗಮನಸೆಳೆಯುತ್ತದೆ. ದೇವಾಲಯದ ಒಳ ಪ್ರಾಂಗಣದಲ್ಲಿನ ಗೋಡೆಗಳ ಮೇಲೆ ಶ್ರೀಕೃಷ್ಣ ಲೀಲೆಯ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದೆ.

ಭಾರತಕ್ಕೆ ವ್ಯಾಪರಕ್ಕೆ ಬಂದಿದ್ದ ಡಚ್ಚರು 1740ರ ಸುಮಾರಿಗೆ ದೇವಾಲಯದ ಮೇಲೆ ದಾಳಿ ಮಾಡಿ ಲೂಟಿ ಮಾಡಿದ್ದರು ಎಂದು ದಾಖಲೆಗಲು ಹೇಳುತ್ತದೆ. ಆಗ ಅಲ್ಲಿ ಕಲ್ಲಿಕೋಟೆಯ ಸಾಮೂದಿರಿ ರಾಜ ದೇಗುಲದ ಆಡಳಿತ ನೋಡಿಕೊಳ್ಳುತ್ತಿದ್ದ, 18 ನೇ ಶತಮಾನದ ಅಂತ್ಯದಲ್ಲಿ ಟಿಪ್ಪು ಸುಲ್ತಾನನೂ ದಾಳಿ ಮಾಡಿ ದೇವಾಲಯವನ್ನು ನಾಶಗೊಳಿಸಿದ್ದ ಎನ್ನಲಾಗಿದೆ. ಆಗ ಮೂಲ ವಿಗ್ರಹವನ್ನು ಬಾವಿಯಲ್ಲಿ ಹುಟುಗಿಸಿಟ್ಟು, ಉತ್ಸವ ಮುರ್ತಿಯನ್ನು ಅಂಲಿಪುರಕ್ಕೆ ರವಾನಿಸಲಾಗಿತ್ತು, ಮುಂದೆ ಮಲ್ಲಿಸ್ಸೆರಿ ನಂಬೂದಿರಿಪಾದರ ನೇತೃತ್ವದಲ್ಲಿ ದೇವಾಲಯದ ಮರುನಿರ್ಮಾಣ ಮಾಡಲಾಗಿತ್ತು.
1931 ರಲ್ಲಿಯೂ ಒಂದು ಸತ್ಯಾಗ್ರಹಕ್ಕೆ ನಡುಗಿದ ದೇವಾಲಯ ಒಂದು ತಿಂಗಳು ಮುಚ್ಚಿತ್ತು. ಅದುವೇ ಶ್ರೀಕೇಳಪ್ಪನ್ ಸತ್ಯಾಗ್ರಹ ಎಲ್ಲಾ ಹಿಂದೂಗಳ ಪ್ರವೇಶಕ್ಕೆ ಆಗ್ರಹಿಸಿದ್ದ ಶ್ರೀಕೇಳಪ್ಪನ್ ಭಾರೀ ಪ್ರತಿಭಟನೆ ನಡೆಸಿದ್ದು. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಮಹಾತ್ಮಾ ಗಾಂಧೀಜಿ ಹೇಳಿದ ಬಳಿಕ ಶ್ರೀಕೇಳಪ್ಪನ್ ಸತ್ಯಾಗ್ರಹ ಬಿಟ್ಟರು ಅಲ್ಲಿಂದ ಮುಂದೆ ಎಲ್ಲಾ ಹಿಂದೂಗಳಿಗೂ ದೇವಾಲಯದಲ್ಲಿ ಪ್ರವೇಶ ಒದಗಿಬಂತು.

ಈ ಗುರುವಾಯೂರು ಆನೆಗಳಿಗೂ ಪ್ರಸಿದ್ಧಿ, ದೇವರನ್ನು ಆರಾಧಿಸುವ ಭಕ್ತರು ಈ ದೇಗುಲಕ್ಕೆ ಆನೆಗಳನ್ನು ಕಾಣಿಕೆ ನೀಡುವುದು ಬಹಳ ವಿಶೇಷ. ದೇವಾಲಯದಲ್ಲಿ ಸೇವೆ ಮಾಡುತ್ತಿದ್ದ ಕೇಶವನ್ ಎಂಬ ಆನೆ ಬಹಳ ಗಮನ ಸೆಳೆದಿತ್ತು, ಇದು 54 ವರ್ಷಗಳ ಕಾಲ ಬದುಕಿದ್ದು ನಂತರ ಕಾಲವಾಯ್ತು. ಕೇಶವನ್ ಎಂಬ ಆನೆಗೆ ಭಕ್ತರು ಗಜರಾಜ ಎಂದು ಬಿರುದುಕೊಟ್ಟು, ಈ ಆನೆಯ ಪ್ರತಿಮೆ ಮಾಡಿಸಿ ಗೆಸ್ಟ್ ಹೌಸ್ ಮುಂದೆ ಪ್ರತಿಷ್ಟಾಪಿಸಿದ್ರು.

LEAVE A REPLY

Please enter your comment!
Please enter your name here