ಕಲಾವಿದರ ಬದುಕೇ ಹಾಗೆ, ಅವಕಾಶಗಳು ಇದ್ದಾಗ ಹಣ ಪಡೆದು ಕೂಡಿಟ್ಟುಕೊಳ್ಳಬೇಕು. ಇಂದು ಸ್ಟಾರ್ ಆಗಿರುವವರು ನಾಳೆ ಏನೂ ಇಲ್ಲದ ಪರಿಸ್ಥಿತಿಗೆ ಬರಬಹುದು. ಅದೇ ರೀತಿ ಒಂದು ಹೊತ್ತಿನ ಊಟಕ್ಕೂ ಇಲ್ಲದವರು ನಾಳೆ ಅದೃಷ್ಟ ಒಲಿದು ಸ್ಟಾರ್ ಆಗಬಹುದು.
ಈ ಫೋಟೋದಲ್ಲಿರುವ ನಟನನ್ನು ನೀವು ಧಾರಾವಾಹಿಗಳಲ್ಲಿ ನೋಡೇ ಇರುತ್ತೀರ. ಇವರ ಹೆಸರು ಸಂಜೀವ್ ಕುಲಕರ್ಣಿ. ಅವರಿಗೆ ಈಗ 49 ವರ್ಷ ವಯಸ್ಸು. ಆದರೆ ಕಳೆದ 15 ವರ್ಷಗಳಿಂದ ಸಂಜೀವ್, ಕಾರ್ಡಿಯೋಮಿಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ಅವರು ಅಂದಿನಿಂದ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಆದರೆ ಇದೀಗ ಅವರ ಸ್ಥಿತಿ ಇನ್ನೂ ಬಿಗಡಾಯಿಸಿದೆ. ಈ ಚಿಕಿತ್ಸೆಗೆ ಸುಮಾರು 40 ಲಕ್ಷ ರೂಪಾಯಿ ಅಗತ್ಯವಿದೆಯಂತೆ. ಆದರೆ ಸಂಜೀವ್ ಕುಲಕರ್ಣಿ ಅವರ ಕುಟುಂಬ ಇಷ್ಟು ಹಣವನ್ನು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಇವರ ಕುಟುಂಬ ಜನತೆಯ ನೆರವಿನ ಹಸ್ತ ಚಾಚಿದೆ.
ಈ ಮನವಿಗೆ ಸ್ಪಂದಿಸಿದ ಸಾಕಷ್ಟು ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 10 ಲಕ್ಷ ಹಣ ಸಂಗ್ರಹವಾಗಿದ್ದು ಇನ್ನೂ 30 ಲಕ್ಷ ರೂಪಾಯಿ ಹಣದ ಅವಶ್ಯಕತೆಯಿದೆ. ಕಿಚ್ಚ ಸುದೀಪ್ ಕೂಡಾ ಸಂಜೀವ್ ಅವರಿಗೆ ಸಹಾಯ ಮಾಡುವಂತೆ ಟ್ವಿಟ್ಟರ್ನಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ ಕೂಡಾ ನಟರೇ. ಪಾಪಾ ಪಾಂಡು ಧಾರಾವಾಹಿಯಲ್ಲಿ ಪಾಂಡುವಿನ ಎರಡನೇ ಪುತ್ರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ವೇಳೆ ನೀವೂ ಕೂಡಾ ಸಂಜೀವ್ ಕುಲಕರ್ಣಿ ಅವರ ಚಿಕಿತ್ಸೆಗೆ ನೆರವು ನೀಡಬೇಕು ಎಂದು ಬಯಸ್ಸಿದ್ದಲ್ಲಿ ಸೌರಭ್ ಫೇಸ್ಬುಕ್ ಅಕೌಂಟ್ ಅಥವಾ ಈ ಕೆಳಗಿನ ಲಿಂಕ್ ಸಂಪರ್ಕಿಸಬಹುದು.
https://www.facebook.com/sourabh.kulkarni.9693
https://milaap.org/fundraisers/support-sanjeev-kulkarni
ಸಂಜಯ್ ಕುಲಕರ್ಣಿ ಅವರ ಚಿಕಿತ್ಸೆ ಫಲಿಸಿ ಅವರು ಶೀಘ್ರ ಗುಣಮುಖರಾಗಿ ಮತ್ತೆ ನಟನಾ ಪಯಣ ಆರಂಭಿಸಲಿ ಎಂದು ಹಾರೈಸೋಣ.