ಫ್ರೆಂಡ್ಸ್ ಜೊತೆ ಪ್ರವಾಸಕ್ಕೆ ಹೋಗಲು ಈ ಸ್ಥಳಗಳು ಬೆಸ್ಟ್..!

0
291

ಕಾಲೇಜು ದಿನಗಳಲ್ಲಿ ಗೆಳೆಯರನ್ನು ಕಟ್ಟಿಕೊಂಡು ಪ್ರವಾಸಕ್ಕೆ ಹೋಗುವುದು ನಿಜಕ್ಕೂ ಅದೊಂದು ಸುಂದರ ಅನುಭವ. ಖುಷಿ ಖುಷಿಯಾಗಿ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಬೇಕು ಎನ್ನುವರು ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಿದ್ರೆ, ವಿಶೇಷ ಅನುಭವ ಪಡೆಯಬಹುದು. ಅದ್ಭುತ ಎನಿಸುವ ಈ ಸುಂದರ ತಾಣಗಳು ಗೆಳೆಯರೊಂದಿಗೆ ಸಮಯ ಕಳೆಯಲು ಅತ್ಯುತ್ತಮ ಆಯ್ಕೆ. ಭಾರತದಲ್ಲಿರುವ ಆ ಪ್ರಮುಕ ಸ್ಥಳಗಳೆಂದರೆ,

ಕಸೋಲ್
ಈ ಸ್ಥಳಕ್ಕೆ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಲೇಬೇಕು. ಅಲ್ಲಿಗೆ ಒಮ್ಮೆ ಹೋದರೆ ಜೀವನದುದ್ದಕ್ಕೂ ನೆನಪುಗಳೊಂದಿಗೆ ಹಿಂದಿರುಗುತ್ತಾರೆ. ಇಲ್ಲಿ ಸುಂದರವಾದ ಬೆಟ್ಟ, ಗುಡ್ಡ, ಪರ್ವತಗಳನ್ನು ನೀವು ಕಾಣಬಹುದು. ಇದು ಶಾಂತಿಯುತ ಪ್ರದೇಶವಾಗಿದೆ. ಚಾರಣ ಮಾಡಲು ಕೂಡಾ ಅವಕಾಶವಿದೆ.

ಗೋವಾ
ಇದು ಯುವ ಜನತೆಗೆ ಇಷ್ಟವಾಗುವ ಸ್ಥಳ ಇದು. ಪಾರ್ಟಿ ಹಬ್ ಆಗಿರುವ ಗೋವಾದಲ್ಲಿ ಪೋರ್ಚುಗೀಸ್ ಕಲ್ಚರ್ ಕಾಣಬಹುದು. ಪ್ರತಿಯೊಬ್ಬರು ಬೀಚ್, ಚರ್ಚ್, ನೈಟ್ ಬಾರ್, ಕ್ಲಬ್, ಕೋಟೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ಅದ್ಭುತ ರಾತ್ರಿಗಳನ್ನು ಇಲ್ಲಿ ಕಳೆಯಬಹುದು.

ಶ್ರೀನಗರ
ಕಾಶ್ಮೀರದಲ್ಲಿರುವ ಶ್ರೀನಗರ ಬೆಟ್ಟಗಳಿಂದ ಆವೃತವಾಗಿರುವ ಪ್ರದೇಶ. ಇಲ್ಲೂ ಕೂಡ ಎಂಜಾಯ್ ಮಾಡಬಹುದು. ದಾಲ್ ಸರೋವರ ಇಲ್ಲಿಯ ಮುಖ್ಯ ಆಕರ್ಷಣೆ. ಕೈಗೆಟುಕುವ ದರದಲ್ಲಿ ಇಲ್ಲಿ ಎಲ್ಲವೂ ಲಭ್ಯ.

ಮನಾಲಿ
ಮಂಜಿನ ಬೆಟ್ಟಗಳ ನಡುವೆ ಇರುವ ಈ ಸ್ಥಳವು ಹಿಮಾಚಲ ಪ್ರದೇಶದ ಹೃದಯಭಾಗ. ಪರ್ವತಪ್ರದೇಶ, ದೇವಾಲಯ, ಸಾಹಸಕ್ರೀಡೆಗಳು ಎಲ್ಲವೂ ಒಂದೇ ಪ್ರದೇಶದಲ್ಲಿ ಸಿಗುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆ ರೋಹತಂಗ್ ಪಾಸ್. ಮನಾಲಿಯಿಂದ 51 ಕಿಮೀ ದೂರದಲ್ಲಿರುವ ಇದು ಸಮುದ್ರಮಟ್ಟಕ್ಕಿಂತ 3979 ಮೀಟರ್ ಎತ್ತರದಲ್ಲಿದೆ. ಬೆಟ್ಟ ಪ್ರದೇಶ ಪೂರ್ತಿಯಾಗಿ ಹಿಮದಿಂದ ಆವೃತವಾಗಿದೆ. ಇಲ್ಲಿ ಸ್ನೋ ಸ್ಕೂಟರ್, ಸ್ಕೀಯಿಂಗ್, ಮೌಂಟೆನ್ ಬೈಕ್ ರೈಡಿಂಗ್‍ಗೆ ಅವಕಾಶವಿದೆ.

ಕೊಡಗು
ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ಕೊಡಗು ಜನಪ್ರಿಯ ಪ್ರವಾಸಿ ತಾಣ. ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ಕೋಟೆಗಳು, ಪುರಾತನ ದೇವಸ್ಥಾನಗಳು, ಪಾರ್ಕ್‍ಗಳು, ಜಲಪಾತಗಳು ಮತ್ತು ಅಭಯಾರಣ್ಯಗಳಂತಹ ಆಕರ್ಷಕ ಸ್ಥಳಗಳು ಕೊಡಗಿನಲ್ಲಿವೆ. ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್, ನಾಲ್ಕ್ನಾಡ್ ಅರಮನೆ ಮತ್ತು ಗದ್ದಿಗೆ, ಕೊಡಗಿನಲ್ಲಿ ಚೆಲವಾರ ಜಲಪಾತ, ಹಾರಂಗಿ ಡ್ಯಾಮ್, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್, ಹೊನ್ನಮ್ಮನ ಕೆರೆ ಮತ್ತು ಮಂಡಲಪಟ್ಟಿ ಪ್ರದೇಶಗಳಂತ ನಿಸರ್ಗ ತಾಣಗಳನ್ನು ನೋಡಬಹುದು. ಕಾಫಿ ತೋಟಕ್ಕೆ ಫೇಮಸ್ ಆಗಿರುವ ಈ ಪ್ರದೇಶ ಯಾವಾಗಲೂ ಕೂಲ್ ಆಗಿರುತ್ತದೆ.

LEAVE A REPLY

Please enter your comment!
Please enter your name here