ಈ ಐದು ಪ್ರದೇಶಗಳಿಗೆ ಹೋಗಲು ಅನುಮತಿಯಿಲ್ಲ

0
219

ಸಾಮಾನ್ಯವಾಗಿ ಮನುಷ್ಯರಿಗೊಂದು ಆಸೆ ಇರುತ್ತದೆ. ಪ್ರಪಂಚದ ಅತ್ಯಂತ ಪ್ರಸಿದ್ಧ ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡಬೇಕೆಂಬ ಆಸೆ ಇರುತ್ತದೆ. ಈ ರೀತಿ ನಾನಾ ಪ್ರದೇಶಗಳಿಗೆ ಭೇಟಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದುಡ್ಡಿದ್ದರೆ ಸಾಕು ಎಂದುಕೊಳ್ಳುತ್ತೇವೆ. ಆದರೆ ಕೇವಲ ದುಡ್ಡಿದ್ದರೆ ಮಾತ್ರ ಸಾಲದು. ಕೆಲವು ರಹಸ್ಯ ಐಲ್ಯಾಂಡ್‍ಗಳು ಕೂಡ ನಮ್ಮ ಜಗತ್ತಿನಲ್ಲಿದೆ. ಅವುಗಳನ್ನು ನೀವು ಜೀವನದಲ್ಲಿ ಒಮ್ಮೆಯೂ ನೋಡಲು ಸಾಧ್ಯವಿಲ್ಲ.
ಪ್ರಪಂಚದಲ್ಲಿ ಯಾರಿಗೂ ಅನುಮತಿಯಿಲ್ಲದ ಭೇಟಿ ನೀಡಲು ನಿಷೇಧವಿರುವ ಕೆಲವು ಐಲ್ಯಾಂಡ್‍ಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಸೆಂಟಿನೇಲ್‍ ಐಲ್ಯಾಂಡ್: ಇದು ಅಂಡಮಾನ್‍ ಮತ್ತು ನಿಕೋಬಾರ್‍ ದ್ವೀಪ ಪ್ರದೇಶದ ಬಳಿ ಇದೆ. ನೋಡಲು ಬಹಳ ಸುಂದರವಾಗಿದೆ. ಆದರೆ ಇಲ್ಲಿ ವಾಸ ಮಾಡುವ ಕಾಡು ಜನರು ತುಂಬಾ ಅಪಾಯಕಾರಿ. ಅಲ್ಲಿಗೆ ಯಾರು ಬಂದರೂ ಬಾಣ ಬಿಟ್ಟು ಸಾಯಿಸಲು ಪ್ರಯತ್ನ ಮಾಡುತ್ತಾರೆ. ಈ ಐಲ್ಯಾಂಡ್‍ ನಲ್ಲಿ ಈ ಕಾಡು ಜನರು 60,000 ವರ್ಷಗಳಿಂದ ವಾಸವಿದ್ದಾರಂತೆ. ಅವರ ಜೊತೆ ಸಂಪರ್ಕ ಸಾಧಿಸಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತದಾದರೂ ಆ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ. ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತು ಅವರಿಗೆ ಇಷ್ಟ ಬಂದ ರೀತಿಯಲ್ಲಿ ಬದುಕಿಕೊಳ್ಳಲಿ ಎಂದು ಬಿಟ್ಟು ಬಿಡಲಾಗುತ್ತದೆ. ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದರೆ ಕಾಡು ಜನರು ಮತ್ತು ಅಲ್ಲಿನ ನಾಗರಿಕರಿಗೂ ತೊಂದರೆ. ಹಾಗಾಗಿ ಅವರನ್ನು ಅವರ ಪಾಡಿಗೆ ಬದುಕಲು ಬಿಟ್ಟು ಬಿಡಲಾಗುತ್ತದೆ. ಹಾಗಾಗಿ ಈ ಪ್ರದೇಶದ ಮೂರು ಕಿಮೀ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುತ್ತದೆ. ಒಂದು ವೇಳೆ ಅಲ್ಲಿಗೆ ಯಾರಾದರೂ ಹೋಗಲು ಪ್ರಯತ್ನಿಸಿದರೆ, ಭಾರತೀಯ ನೌಕಪಡೆಯ ಅಧಿಕಾರಿಗಳು ಅವರನ್ನು ಬಂಧಿಸುತ್ತಾರೆ. 2006ರಲ್ಲಿ ಇಬ್ಬರು ಮೀನುಗಾರರು ಅಲ್ಲಿಗೆ ಹೋಗುತ್ತಾರೆ. ಅಲ್ಲಿಗೆ ತಲುಪಿದ ತಕ್ಷಣ ಅವರನ್ನು ಕಲ್ಲು ಮತ್ತು ಬಾಣಗಳಿಂದ ಕೊಂದು ಬಿಡುತ್ತಾರೆ. ಆದರೆ ಆ ಕಾಡು ಜನರ ಫೋಟೊಗಳನ್ನಾಗಲೀ, ವಿಡಿಯೋಗಳನ್ನಾಗಲಿ ಸ್ಪಷ್ಟವಾಗಿ ತೆಗೆಯಲು ಸಾಧ್ಯವಾಗುವುದಿಲ್ಲ.
ಸರ್ಟ್‍ಸೇ ಐಲ್ಯಾಂಡ್‍: ಇದು ಐಸ್‍ಲ್ಯಾಂಡ್‍ಗೆ ಸಮೀಪವಿದೆ. 1963ರಲ್ಲಿ ಒಂದಷ್ಟು ಜನ ಮೀನು ಹಿಡಯಲು ಸಮುದ್ರಕ್ಕೆ ಹೋಗುತ್ತಾರೆ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಬೆಂಕಿ ಬರುವುದನ್ನು ಗಮನಿಸುತ್ತಾರೆ. ಬೋಟ್‍ನಲ್ಲಿ ಯಾರಾದರೂ ಸಮಸ್ಯೆಗೆ ಸಿಲುಕಿರಬಹುದು, ಅವರನ್ನು ರಕ್ಷಣೆ ಮಾಡುವ ಸಲುವಾಗಿ ಹತ್ತಿರಕ್ಕೆ ಹೋಗುತ್ತಾರೆ. ಆದರೆ ಅದು ಬೋಟ್‍ ಅಲ್ಲ, ಸಮುದ್ರದೊಳಗೆ ಇರುವ ಅಗ್ನಿಪರ್ವತ. ಆಗತಾನೇ ಸ್ಪೋಟಗೊಂಡು ಲಾವಾರಸ ಹೊರಗೆ ಬರುತ್ತಿರುತ್ತದೆ. 1967ರಲ್ಲಿ ಲಾವಾರಸ ಹೊರಗೆ ಬರುವುದು ನಿಂತು ಹೋಗುತ್ತದೆ. ನಂತರ ಅದೊಂದು ಐಲ್ಯಾಂಡ್‍ ಆಗಿ ಬದಲಾಗುತ್ತದೆ. ಇದು 2.8 ಚದರ ಕಿಮೀಯಷ್ಟು ವಿಸ್ತಾರವನ್ನು ಹೊಂದಿದೆ. 174 ಮೀಟರ್‍ ಎತ್ತರವಿದೆ. ಸಮುದ್ರ ಮಧ್ಯದಲ್ಲಿ ಐಲ್ಯಾಂಡೊಂದು ಸೃಷ್ಟಿಯಾಗುವುದನ್ನು ನೋಡಿದ್ದು ಅದೇ ಮೊದಲು. ಸ್ಪಲ್ಪ ಸಮಯದ ನಂತರ ಅಲ್ಲಿ ಸಸಿಗಳು ಬೆಳೆಯುತ್ತವೆ. ಇಲ್ಲಿ ವಿಜ್ಞಾನಿಗಳನ್ನು ಹೊರತುಪಡಿಸಿ ಮತ್ತಾರಿಗೂ ಅಲ್ಲಿಗೆ ಹೋಗಲು ಅನುಮತಿಯಿಲ್ಲ. ನಮ್ಮ ಭೂಮಿ ಹೇಗೆ ಉದ್ಭವವಾಯಿತು ಎಂಬುದಕ್ಕೆ ಇದೊಂದು ಉದಾಹರಣೆ.
ಗ್ರುನಾಡ್‍ ಐಲ್ಯಾಂಡ್‍: ಇದು ಸ್ಕಾಟ್‍ಲ್ಯಾಂಡ್‍ಗೆ ಒಂದು ಕಿಮೀ ಅಂತರದಲ್ಲಿದೆ. ಇದನ್ನು ಐಲ್ಯಾಂಡ್‍ನ ಡೆತ್‍ ಅಂತಲೂ ಕರೆಯುತ್ತಾರೆ. ಇಲ್ಲಿ ಯಾರಾದರೂ ಹೆಜ್ಜೆ ಇಟ್ಟರೆ ಅಲ್ಲೇ ಸುಟ್ಟು ಹೋಗುತ್ತಾರೆ. ಏಕೆಂದರೆ ಆ ಐಲ್ಯಾಂಡ್ನಲ್ಲಿ ಆಂತ್ರಾಕ್ಸ್ ಎಂಬ ಕೆಮಿಕಲ್‍ ಇದೆ. 2ನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ, ಜರ್ಮನಿಗೆ ಭಯ ಹುಟ್ಟಿಸುವ ಸಲುವಾಗಿ ಒಂದು ಬಯೋಲಾಜಿಕಲ್‍ ಆಯುಧವೊಂದನ್ನು ತಯಾರು ಮಾಡಲು ಮುಂದಾಗುತ್ತದೆ. ಆ ಕೆಲಸವನ್ನು ಕೆಲ ವಿಜ್ಞಾನಿಗಗಳಿಗೆ ನೀಡಲಾಗುತ್ತದೆ. ವಿಜ್ಞಾನಿಗಳು ಆಂತ್ರಾಕ್ಸ್‍ ಎಂಬ ಕೆಮಿಕಲ್‍ ಬಾಂಬನ್ನು ಕಂಡುಹಿಡಿಯುತ್ತಾರೆ. ಅದನ್ನು ಪರೀಕ್ಷೆ ಮಾಡುವ ಸಲುವಾಗಿ ಗ್ರುನಾಡ್‍ ಐಲ್ಯಾಂಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಅಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ. ನಂತರ ಆ ಐಲ್ಯಾಂಡ್‍ಗೆ 80 ಕುರಿಗಳನ್ನು ತೆಗೆದುಕೊಂಡು ಹೋಗಿ ಬಿಡುತ್ತಾರೆ. ಅಲ್ಲದೇ ಆಂತ್ರಾಕ್ಸ್‍ ಎಂಬ ಬಾಂಬನ್ನು ಪ್ರಯೋಗಿಸುತ್ತಾರೆ. ಆಗ ಅಲ್ಲಿರುವ ಕುರಿಗಳೆಲ್ಲವೂ ಸತ್ತು ಹೋಗುತ್ತದೆ. ಅವರ ಪ್ರಯೋಗ ಯಶಸ್ವಿಯಾಗುತ್ತದೆ. ಆದರೆ ಈ ಪ್ರಯೋಗದಲ್ಲಿ ಒಂದು ಮಹತ್ತರವಾದ ವಿಷಯವೊಂದನ್ನು ತಿಳಿದುಕೊಳ್ಳುತ್ತಾರೆ. ಈ ಬಾಂಬನ್ನು ಯಾವ ಪ್ರದೇಶದ ಮೇಲೆ ಪ್ರಯೋಗ ಮಾಡುತ್ತೇವೋ ಆ ಪ್ರದೇಶದ ಜನರೆಲ್ಲರೂ ಸತ್ತು ಹೋಗುತ್ತಾರೆ. ಅಲ್ಲದೇ, 60 ವರ್ಷಗಳವರೆಗೆ ಒಂದು ಚಿಕ್ಕ ಸಸಿಯೂ ಅಲ್ಲಿ ಬೆಳೆಯುವುದಿಲ್ಲ ಎಂಬುದನ್ನು ಅರಿತುಕೊಳ್ಳುತ್ತಾರೆ. ಪರೀಕ್ಷೆಯ ಫಲಿತಾಂಶ ತಿಳಿದ ಬಳಿಕ ಆ ಐಲ್ಯಾಂಡನ್ನು ಸ್ವಚ್ಛ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ನಂತರ ಆ ಐಲ್ಯಾಂಡ್‍ಗೆ ಯಾರೂ ಹೋಗದಂತೆ ನಿಷೇಧ ಹೇರುತ್ತಾರೆ. ನಂತರ 1990ರಲ್ಲಿ ಅದನ್ನು ಯಶಸ್ವಿಯಾಗಿ ಸ್ವಚ್ಛ ಮಾಡಲಾಗುತ್ತದೆ. ಪ್ರವಾಸಿಗರು ಭೇಟಿ ನೀಡಲು ಅನುಮತಿಯನ್ನು ನೀಡಲಾಗುತ್ತದೆ.
ಪೊವಿಗ್ವಿಲಾ ಐಲ್ಯಾಂಡ್‍: ಇದು ಇಟಲಿಯ ವೆನಿಸೀಯಾ ಐಲ್ಯಾಂಡ್ ನಗರದ ಸಮೀಪವಿರುತ್ತದೆ. ಇದು ನೋಡಲು ಬಹಳ ಸುಂದರವಾಗಿ ಕಾಣತ್ತಿದ್ದರೂ ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ಪ್ರದೇಶ. ಮೀನುಗಾರರು ಅಪ್ಪಿತಪ್ಪಿಯೂ ಕೂಡ ಪ್ರದೇಶದ ಬಳಿ ಸುಳಿಯುವುದಿಲ್ಲ. ಏಕೆಂದರೆ ಇಲ್ಲಿ ಮೂನಗಳ ಬದಲಾಗಿ ಮನುಷ್ಯರ ಮೂಳೆಗಳೇ ಸಿಗುತ್ತವೆ. ನೂರಾರು ವರ್ಷಗಳ ಹಿಂದೆ ಪ್ಲೇಗ್‍ ಕಾಯಿಲೆ ಬಂದವರನ್ನೆಲ್ಲಾ ಕರೆದುಕೊಂಡು ಬಿಡುತ್ತಿದ್ದರು. ಒಂದು ವೇಳೆ ಸಾವನ್ನಪ್ಪಿದರೆ ಅಲ್ಲಿಯೇ ಮುಚ್ಚುವ ಅಥವಾ ಸುಟ್ಟು ಬಿಡುವ ಕೆಲಸ ಮಾಡುತ್ತಿದ್ದರು. ಆಗಿನ ಕಾಲದಲ್ಲಿ 1,60,000 ಜನರು ಈ ಐಲ್ಯಾಂಡ್‍ನಲ್ಲಿ ಸತ್ತು ಹೋಗಿದ್ದಾರೆ. ಹಾಗಾಗಿ ಈ ಐಲ್ಯಾಂಡ್‍ನಲ್ಲಿ ಎಲ್ಲಿ ನೋಡಿದರೂ ಮನುಷ್ಯರ ಮೂಳೆಗಳೇ ಕಾಣಸಿಗುತ್ತದೆ. 1922ರಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡುವ ಸಲುವಾಗಿ ಒಂದು ಆಸ್ಪತ್ರೆಯೊಂದನ್ನು ಕಟ್ಟಿಸಲಾಗುತ್ತದೆ. ಈ ಆಸ್ಪತ್ರೆಯ ರೋಗಿಗಳು ಪ್ರತಿ ರಾತ್ರಿ ತಮಗೆ ದೆವ್ವಗಳ ಕೂಗು ಕೇಳಿಸುತ್ತದೆ ಎನ್ನುತ್ತಾರೆ. ಆದರೆ ಅವರು ಮಾನಸಿಕ ಅಸ್ವಸ್ಥರಾದ್ದರಿಂದ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿದ್ದ ವೈದ್ಯ ಮಾನಸಿಕ ರೋಗಿಯಾಗಿ ಬದಲಾಗಿ ಅಲ್ಲಿದ್ದ ರೋಗಿಗಳಿಗೆ ಚಿತ್ರಹಿಂಸೆ ಕೊಡಲು ಪ್ರಾರಂಭಿಸುತ್ತಾರೆ. ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾರೆ. ಕೆಲ ದಿನಗಳ ನಂತರ ದೆವ್ಚಗಳು ಕಾಣಲು ಆರಂಭಿಸುತ್ತದೆ. ನಂತರ ಆ ವೈದ್ಯ ಆಸ್ಪತ್ರೆ ಮೇಲಿಂದ ಬಿದ್ದು ಸಾವನ್ನುಪ್ಪುತ್ತಾರೆ. ಅವರು ಆತ್ಯಹತ್ಯೆ ಮಾಡಿಕೊಂಡರಾ ಅಥವಾ ಅಲ್ಲಿದ್ದ ರೋಗಿಗಳು ಕೊಲೆ ಮಾಡಿದರಾ ಅಥವಾ ದೆವ್ವಗಳು ಸಾಯಿಸಿದವಾ ಎಂಬುದು ಯಾರಿಗೂ ತಿಳಿಯುವುದಿಲ್ಲ. ಆ ವೈದ್ಯರು ಸಾವನ್ನಪ್ಪಿದ ನಂತರ ಇಟಲಿ ಸರ್ಕಾರ ಆ ಅಸ್ಪತ್ರೆಯನ್ನು ಮುಚ್ಚುತ್ತದೆ. ಇತ್ತೀಚೆಗೆ ಆ ಐಲ್ಯಾಂಡ್‍ಗೆ ಫೋಟೊ ತೆಗೆಯಲು ಹೋದ ವ್ಯಕ್ತಿಗೆ ಇಲ್ಲಿಂದ ಹೊರಟು ಹೋಗು ಮತ್ತೆ ಇಲ್ಲಿಗೆ ಬರಬೇಡ ಎಂಬ ಶಬ್ದ ಕೇಳುತ್ತದೆ. ಇದೇ ಕಾರಣಕ್ಕಾಗಿ ಈ ಪ್ರದೇಶವನ್ನು ಅತ್ಯಂತ ಭಯಂಕರವಾದ ಪ್ರದೇಶ ಎಂದು ಕರೆಯಲಾಗುತ್ತದೆ.
ಕ್ಯುಮದಾ ಗ್ರಂದೆ ಐಲ್ಯಾಂಡ್‍: ಈ ಐಲ್ಯಾಂಡ್‍ ಬ್ರೆಜಿಲ್‍ಗೆ ಸಮೀಪದಲ್ಲಿದೆ. ಇದು ನೋಡಲು ಬಹಳ ಅದ್ಭುತವಾಗಿರುತ್ತದೆ. ಅಲ್ಲಿನ ಪ್ರಕೃತಿ ಸೌಂದರ್ಯ ನಮ್ಮನ್ನು ಸೆಳೆಯುತ್ತದೆ. ಆದರೆ ಅಲ್ಲಿಗೆ ಹೋದರೆ ಪ್ರಾಣ ಕಳೆದುಕೊಳ್ಳುವುದು ಮಾತ್ರ ಗ್ಯಾರೆಂಟಿ. ಏಕೆಂದರೆ ಈ ಐಲ್ಯಾಂಡ್‍ ಸಂಪೂರ್ಣವಾಗಿ ಹಾವುಗಳಿಂದಲೇ ಕೂಡಿದೆ. ಇದೇ ಕಾರಣಕ್ಕಾಗಿ ಇದನ್ನು ಸ್ನೇಕ್‍ ಐಲ್ಯಾಂಡ್‍ ಎಂದು ಕರೆಯಲಾಗುತ್ತದೆ. ಈ ಐಲ್ಯಾಂಡ್‍ ನಲ್ಲಿ ಪ್ರಪಂಚದಲ್ಲಿ ಅತ್ಯಂತ ವಿಷಪೂರಿತವಾದ ಹಾವುಗಳಿವೆ. ಇದೇ ಕಾರಣಕ್ಕಾಗಿ ಈ ಐಲ್ಯಾಂಡ್‍ಗೆ ಹೋಗುವುದನ್ನು ನಿಷೇಧಿಸಿದೆ. ಆದರೆ ಬಹುತೇಕ ಜನರು ಇಲ್ಲಿಗೆ ಭೇಟಿ ನೀಡಿ ನಿಧಿ ಆಸೆಗಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇವು ಪ್ರಪಂಚದಲ್ಲಿ ಭೇಟಿ ನೀಡಲು ಅನುಮತಿಯಿಲ್ಲದ ಐಲ್ಯಾಂಡ್‍ಗಳಾಗಿವೆ.

LEAVE A REPLY

Please enter your comment!
Please enter your name here