ಮೆಕ್ಕೆಜೋಳ ಅಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಅದು ಎಲ್ಲರಿಗೂ ಇಷ್ಟವಾದ ತಿಂಡಿ, ನಾವು ಸಿನೆಮಾ ನೋಡಲು ಹೋದಾಗ ಅಲ್ಲಿ ತಪ್ಪದೆ ತಿನ್ನುವುದು ಇದೆ ಮೆಕ್ಕೆ ಜೋಳದಿಂದ ಮಾಡಿದ ಪಾಪ್ ಕಾರ್ನ್. ಅದು ಸಮಯವನ್ನು ಮುಂದೂಡಲು ಆಗಿರಬಹುದು ಇಲ್ಲವೇ ಅದು ನಮ್ಮ ನಾಲಿಗೆಗೆ ಕೊಡುವ ಒಂದು ರುಚಿಯೂ ಆಗಿರಬಹುದು. ಅಂತಹ ಈ ಮೆಕ್ಕೆ ಜೋಳದಲ್ಲಿ ತುಂಬಾ ಆರೋಗ್ಯಕರ ಅಂಶಗಳು ಅಡಗಿವೆ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ ಅನ್ಸುತ್ತೆ.
ಮೆಕ್ಕೆಜೋಳದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಕಾರ್ಬೋ ಹೈಡ್ರೇಟ್ ಗಳು ನಾರಿನಂಶ ಹೆಚ್ಜಿನ ಪ್ರಮಾಣದಲ್ಲಿ ನಮಗೆ ಸಿಗುತ್ತದೆ. ಈ ಮೆಕ್ಕೆ ಜೋಳದಲ್ಲಿ ವಿಟಮಿನ್ಸ್ ಬೀಟಾ ಕ್ಯಾರೋಟಿನ್ ಪ್ರೋಟಿನಗಳು ಜಿಂಕ್ ತಾಮ್ರ ಮತ್ತು ಕಬ್ಬಿಣಾಂಶಗಳು ಹೇರವಾಗಿ ಸಿಗುತ್ತದೆ.
ಮೆಕ್ಕೆಜೋಳದ ಸೇವನೆಯಿಂದ ನಮ್ಮ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಮೆಕ್ಕೆಜೋಳ ಉತ್ತಮ ರಾಮಬಾಣದಂತೆ ಕೆಲಸ ಮಾಡುತ್ತದೆ. ಇಂತಹ ಒಂದು ಮೆಕ್ಕೆಜೋಳದಲ್ಲಿ ನಮ್ಮ ಆರೋಗ್ಯಕ್ಕೆ ಸಿಗುವ ಅಂಶಗಳ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಯೋಣ. ಮೆಕ್ಕೆಜೋಳದಲ್ಲಿರುವ ಪ್ರೋಟೀನ್ ಗಳು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದನ್ನು ಮಾಡುತ್ತದೆ ಹಾಗೇನೇ ಈ ಮೆಕ್ಕೆಜೋಳದಲ್ಲಿರುವ ಪಾಸ್ಪರಸ್ ಅಂಶವು ಮೂಳೆಗಳನ್ನು ಗಟ್ಟಿಯಾಗಿಸಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ನಮ್ಮ ಶರೀರದ ಬೆಳವಣಿಗೆಗೆ ಇದು ತುಂಬಾ ಸಹಕರಿಸುತ್ತದೆ.
ಹಸಿಯಾದ ಮೆಕ್ಕೆಜೋಳಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ನಾವು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದು ಮೆಕ್ಕೆಜೋಳದಲ್ಲಿ ವಿಟಮಿನ್ ಎ ವಿಟಮಿನ್ ಈ ಮತ್ತು ಫೋಲಿಕ್ ಆಮ್ಲಗಳು ಹೆಚ್ಚಾಗಿ ಇರುವುದರಿಂದ ಇದು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಬೇಯಿಸಿದ ಮೆಕ್ಕೆಜೋಳವನ್ನು ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಬರುವುದನ್ನು ಇದು ತಡೆಗಟ್ಟುತ್ತದೆ ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹೆಚ್ಚಾಗಿ ಮೆಕ್ಕೆಜೋಳವನ್ನು ತಿನ್ನುವುದರಿಂದ ನರಗಳು ಸದೃಢವಾಗುತ್ತವೆ ಹಾಗೇನೇ ದೇಹದಲ್ಲಿ ಕೊಬ್ಬಿನಂಶ ಕರಗುತ್ತದೆ ಜೀರ್ಣಕ್ರಿಯೆಗೆ ಇದು ಸಹಕರಿಸುತ್ತದೆ ಪ್ರತಿದಿನ ಮೆಕ್ಕೆಜೋಳವನ್ನು ತಿನ್ನುವುದರಿಂದ ರ ಕ್ತಹೀನತೆ ಕಡಿಮೆಯಾಗುತ್ತದೆ ಮತ್ತು ರ ಕ್ತ ವೃದ್ಧಿಯಾಗುತ್ತದೆ.
ಮೆಕ್ಕೆ ಜೋಳದ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯ ಅಂಶಗಳು ಸಿಗುತ್ತವೆ ಇದರಲ್ಲಿರು ಆಂಟಿ ಆಕ್ಸಿಡೆಂಟಗಳು ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳಿಂದ ನಮ್ಮನ್ನು ಕಾಪಾಡುತ್ತದೆ ಗರ್ಭಿಣಿಯರು ಇದನ್ನು ಸೇವಿಸಿದರೆ ಫೋಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು ಫೋಲಿಕ್ ಆಸಿಡ್ ಕೊರತೆ ಉಂಟಾದರೆ ಗರ್ಭಿಣಿಯರಲ್ಲಿ ಕೈ ಕಾಲು ಊತ ಅಧಿಕ ರ ಕ್ತದೊತ್ತಡ ಕಂಡುಬರುತ್ತದೆ.
ಕಡಿಮೆ ಫೋಲಿಕ್ ಆಸಿಡ್ ಇದ್ದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಮೆಕ್ಕೆ ಜೋಳ ತುಂಬಾ ಒಳ್ಳೆಯದು ಅಂತ ವೈದ್ಯರು ಸಹ ಹೇಳುತ್ತಾರೆ ಈ ಒಂದು ಮೆಕ್ಕೆಜೋಳ ನಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಹೊರಗೆ ಹಾಕುತ್ತದೆ ಜೊತೆಗೆ ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ ಆದ್ದರಿಂದ ಒಳ್ಳೆಯ ಕೊಬ್ಬಿನಂಶ ನಮ್ಮ ದೇಹಕ್ಕೆ ಬೇಕೆಂದರೆ ಈ ಒಂದು ಮೆಕ್ಕೆ ಜೋಳವನ್ನು ನಾವು ತಿನ್ನಬೇಕು.
ಈ ಮೆಕ್ಕೆ ಜೋಳದಲ್ಲಿ ಅಂಟಿ ಆಕ್ಸಿಡೆಂಟ್ ಗಳ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ಚರ್ಮ ಸುಕ್ಕು ಗಟ್ಟುವುದನ್ನು ಇದು ತಡೆಯುತ್ತದೆ ಹಾಗೇನೇ ಚರ್ಮಕ್ಕೆ ಬರುವ ಅಲರ್ಜಿ ಕೆಂಪುಗುಳ್ಳೆ ಇಂತವುಗಳಿಂದ ತಕ್ಕ ಮಟ್ಟಿಗೆ ನಮಗೆ ಪರಿಹಾರವನ್ನು ನೀಡುತ್ತದೆ ಈ ಮೆಕ್ಕೆಜೋಳ. ನೋಡಿದಿರೆಲ್ಲ ಸ್ನೇಹಿತರೆ ಕೇವಲ ಬಾಯಿರುಚಿಕೆ ಅಂತ ತಿನ್ನುತ್ತಿದ್ದ ಈ ಮೆಕ್ಕೆಜೋಳದಲ್ಲಿ ಎಷ್ಟೆಲ್ಲ ಲಾಭಗಳಿವೆ ಅಂತ ಹಾಗಾದರೆ ಇನ್ನು ಮುಂದೆ ನೀವು ಸಹ ಈ ಮೆಕ್ಕೆಜೋಳವನ್ನು ತಿಂದು ಆರೋಗವನ್ನು ವೃದ್ಧಿಸಿಕೊಳ್ಳಿ.