ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಬೆಲೆ ಬಾಳುವ ನಾಯಿ ಕಳುವಾಗಿದ್ದ ಪ್ರಕರಣ : ಕೊನೆಗೂ ಸುಖಾಂತ್ಯ, ಕದ್ದವರು ಯಾರು ಗೊತ್ತಾ ?

0
190

ಬರೋಬ್ಬರಿ 8 ಕೋಟಿ ರೂಪಾಯಿ ಬೆಲೆ ಬಾಳುವ ನಾಯಿ ಕಳ್ಳತನಗೊಂಡ ಘಟನೆ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಲೆಬ್ರಿಟಿ ಬ್ರೀಡರ್ ಎಂದೇ ಖ್ಯಾತಿ ಪಡೆದಿರುವ ಸತೀಶ್ ಎಂಬುವವರಿಗೆ ಸೇರಿದ ನಾಯಿ ಇದಾಗಿದ್ದು ಕಳ್ಳತನವಾಗಿದೆ.

 

 

ಈ ನಾಯಿಯ ವಿಶೇಷತೆಯ ಹಾಗಿದೆ. ಕೆಂಪು ಮತ್ತು ಬಿಳಿ ಬಣ್ಣವಿರುವ ನಾಯಿಗೆ 3 ವರ್ಷ ಪ್ರಾಯವಾಗಿದ್ದು, ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಚೈನ ತಳಿ ಇದಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಘಟನೆ ನಡೆದಿದ್ದು ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.

 

 

ಕಳೆದು ಹೋದ ಈ ಶ್ವಾನ ಯಾಕಂದರೆ ಇದು ಅಂತಿಂಥ ಶ್ವಾನವಲ್ಲ. ಇದರ ಬೆಲೆ ಯಾವುದೋ BMW, ಆಡೀ, ಮರ್ಸಿಡಿಸ್ ಬೆಂಜ್ ಕಾರಿಗೂ ಅಧಿಕ ಎಂದೇ ಹೇಳಬಹುದು. ಸದ್ಯ ನಾಯಿ ಮಾಲೀಕ ಸತೀಶ್ ಮನೆ ಮುಂದೆಯೇ ಆ ನಾಯಿಯನ್ನು ಬಿಟ್ಟು ಹೋಗಿದ್ದು, ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಅನುಮಾನ ಹೆಚ್ಚಿದೆ.

LEAVE A REPLY

Please enter your comment!
Please enter your name here