ಯುವ ಬ್ರಿಗೇಡ್ ತಂಡ ಮಾಡಿದ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.!

0
134

ಯುವ ಬ್ರಿಗೇಡ್ ಎಂಬ ಯುವ ಉತ್ಸಾಹಿ ತಂಡವೊಂದು ರಾಜ್ಯದ ಜನರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರವಾಗಿದೆ. ಏನಪ್ಪಾ.? ಇದು ಎಲ್ಲರೂ ಮೆಚ್ಚುವಂತ ಕೆಲಸ ಮಾಡಿರುವುದೂ ಏನ್ನಿರಬಹುದು ಎಂಬ ಆಲೋಚನೆ ನಿಮಲ್ಲಿ ಖಂಡಿತ ಬಂದಿರುತ್ತದೆ.

 

 

ಹೌದು, ಯುವ ಉತ್ಸಾಹಿ ತಂಡವಾದ ಯುವ ಬ್ರಿಗೇಡ್ ಸಾರ್ವಜನಿಕರು, ಪಾದಚಾರಿಗಳು ನಡೆದಾಡುವ ಜಾಗವನ್ನು ಸ್ವಚ್ಚಗೊಳಿಸಿ ನೈರ್ಮಲ್ಯತೆ ಮಾಡಿದ್ದಾರೆ. ಇದಲ್ಲದೆ ಈ ಒಂದು ತಂಡ ಬಸ್ ನಿಲ್ದಾಣಗಳ ಗೋಡೆಗಳು ಮತ್ತು ಜನರು ಓಡಾಡುವ ಜಾಗದಲ್ಲಿ ಆನೇಕರು ಮೂತ್ರವಿಸರ್ಜನೆ ಮಾಡುವ ಮೂಲಕ ಸ್ಥಳವನ್ನು ಹದಗೆಡಿಸಿದ್ದರು. ಆ ಗೋಡೆಗಳ ಜಾಗವನ್ನು ಸ್ವಚ್ಚಗೊಳಿಸಿ, ಅಲ್ಲಿ ಸುಂದರವಾದ ಕಲೆಗಳ ಚಿತ್ರಣವನ್ನು ಪೈಂಟ್ ಮಾಡಿದ್ದಾರೆ. ಈ ಒಂದು ಘಟನೆ ರಾಯಚೂರಿನಲ್ಲಿ ನೆಡದಿದೆ. ಜನರು ಗೋಡೆಗಳ ಮೇಲೆ ಮೂತ್ರವಿಸರ್ಜಿಸಿ ಹೋಗುತ್ತಿದ್ದರು.

 

 

ಗೋಡೆಗಳ ಮೇಲೆ ದಪ್ಪ ಅಕ್ಷರಗಳಲ್ಲಿ “ಇಲ್ಲಿ ಯಾರೂ ಮೂತ್ರವಿಸರ್ಜಿಸಬಾರದು” ಎಂದು ಬರೆದರೂ ಕೂಡ ಜನ ಕ್ಯಾರೆ ಏನ್ನುತ್ತಿರಲಿಲ್ಲ. ಸಾರ್ವಜನಿಕ ಸ್ಥಳವನ್ನು ಹೀಗೆ ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಯುವ ಬ್ರಿಗೇಡ್ ತಂಡ ಗೋಡೆಗಳ ಮೇಲೆ ಬೃಹತ್ ಚಿತ್ರಗಳನ್ನು ಸುಂದರವಾಗಿ, ಒಂದರ ನಂತರ ಒಂದು ಎನ್ನುವ ಹಾಗೆ ಚಿತ್ರಿಸಿ ಪೋಣಿಸಿದ್ದಾರೆ.

 

 

ರಾಯಚೂರಿನ ಪ್ರಮುಖ ಸ್ಥಳವಾಗಿರುವ ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಇರುವ ಗೋಡೆಗಳನ್ನು ಯುವ ಬ್ರಿಗೇಡ್ ತಂಡ ಅಲಂಕರಿಸಿರುವ ಕಾರಣ ಜನರು ಅಲ್ಲಿ ಮೂತ್ರವಿಸರ್ಜನೆ ಮಾಡುವ ಬದಲು ವಾಪಸ್ ಶೌಚಾಲಯಕ್ಕೆ ತೆರಳುತ್ತಿದ್ದಾರೆ.

 

 

ಮೂತ್ರವಿಸರ್ಜನೆಯಿಂದ ಸದಾ ನಾರುತ್ತಿದ್ದ ಜಾಗ ಇಂದು ಸ್ವಚ್ಚವಾಗಿರುವುದನ್ನು ಕಂಡು ಜನರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಯುವ ಬ್ರಿಗೇಡ್ ತಂಡದಲ್ಲಿ ಹತ್ತು ಜನರು ಯುವ ಉತ್ಸಾಹಿ ಯುವಕರು ಇದ್ದು, ತಮ್ಮ ದಿನ ನಿತ್ಯದ ಕೆಲಸಗಳನ್ನು ಮುಗಿಸಿ, ವಾರಂತ್ಯದ ದಿನಗಳಾದ ಶನಿವಾರ ಮತ್ತು ಬಾನುವಾರದ ದಿನಗಳಂದು ಈ ಯುವಕರು ಬಂದು ಸ್ವಚ್ಚತೆಯ ಬಗ್ಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಪ್ರತಿ ಬಾನುವಾರದ ದಿನ ಬಂದು ಯುವಕರು ತಮ್ಮ ಸಮಯ ಹಾಗೂ ಶ್ರಮವನ್ನು ಈ ಒಂದು ಕೆಲಸಕ್ಕಾಗಿ ಮೂಡಿಪಾಗಿಟ್ಟು ಜನಸಾಮಾನ್ಯರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.

 

ಯುವಾ ಬ್ರಿಗೇಡ್ ರಾಯಚೂರು ವತಿಯಿಂದ ಸ್ವಚ್ಛ ಮಾಡಿದ್ದ ಕೇಂದ್ರ ಬಸ್ ನಿಲ್ದಾಣದ ಸುತ್ತಲೂ ಸುಂದರ ಕಲಾಕೃತಿಗಳನ್ನು ರಚಿಸಲಾಯಿತು.#ಸ್ವಚ್ಛನಗರ #ಸ್ವಚ್ಛತೆಯೇಆರೋಗ್ಯ#ನನ್ನಕನಸಿನಕರ್ನಾಟಕ #ಯುವಾಬ್ರಿಗೇಡ್_ರಾಯಚೂರು#YuvaBrigade #YB2019

Yuva Brigade ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಡಿಸೆಂಬರ್ 16, 2019

 

ಈ ಒಂದು ಕೆಲಸದ ಮೂಲಕ ಪರಿಸರ ಹಾಗೂ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವ ಬ್ರಿಗೇಡ್ ತಂಡ ಕೇವಲ ರಾಯಚೂರಿನ ಪ್ರಾಂತ್ಯದಲ್ಲಿ ಮಾತ್ರವಲ್ಲದೇ ರಾಜ್ಯದ ಆನೇಕ ಜಿಲ್ಲೆಗಳಲ್ಲಿ ತಮ್ಮ ತಂಡವೊಂದನ್ನು ಬಲಿಷ್ಟವಾಗಿ ಕೋಟೆಯಂತೆ ಕಟ್ಟಿದ್ದು, ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅವರ ಕೆಲಸಕ್ಕೆ ಬೇಕಿರುವ ಅತ್ಯಗತ್ಯ ಸಹಾಯಗಳ ಬಗ್ಗೆ ತಮ್ಮ ಪೇಜ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

ಈ ವಿಚಾರವಾಗಿ ಆಸಕ್ತಿಯುಳ್ಳ ಜನರು ಅವರ ಪೇಜ್ ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಯುವ ಬ್ರಿಗೇಡ್ ಮಾಡುತ್ತಿರುವ ಅದ್ಭುತ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆಗಳು ಕೇಳಿಬರುತ್ತಿವೆ. ಯುವ ಬ್ರಿಗೇಡ್ ತಂಡದ ಮತ್ತಷ್ಟು ಸಾಮಾಜಿಕ, ಸಮಾಜಮುಖಿ ಕೆಲಸಗಳು ಮತ್ತಷ್ಟು ಮುಂದುವರೆಯಲ್ಲಿ ಹಾಗೂ ಹಲವರಿಗೆ ಸೂರ್ತಿಯಾಗಲಿ ಎಂಬುದು ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here