‘ಇಡೀ ಜಗತ್ತೇ ಈಗ ಭಾರತದತ್ತ ನೋಡುತ್ತಿದೆ’ ಎಂದ ನಾಸಾ..!

0
387

ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ. ಭಾರತದ ಹೆಮ್ಮೆಯ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆ ತನ್ನ ಗುರಿ ತಲುಪುವ ದಿನ ಸಮೀಪಿಸುತ್ತಿದೆ. ಅದಕ್ಕಾಗಿ ಇಡೀ ಜಗತ್ತು ಕಾದು ಕುಳಿತಿದೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭಾರತದ ಇಸ್ರೋ ಸಾಧನೆಗೆ ಮೆಚ್ಚುಗೆ ಸೂಚಿಸಿದೆ.

ಇನ್ನು ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಶೋಧನಾ ನೌಕೆಯೊಂದು ಇಳಿಯುತ್ತಿದೆ. ಜಗತ್ತಿನ ಯಾವ ಬಾಹ್ಯಾಕಾಶ ಸಂಸ್ಥೆಯೂ ಮಾಡದ ಸಾಧನೆ ಇದು. ಇದನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ನಾಸಾದ ಮಾಜಿ ಗಗನಯಾನಿ ಡೊನಾಲ್ಡ್ ಎ ಥಾಮಸ್ ಶ್ಲಾಘಿಸಿದ್ದಾರೆ. ಇನ್ನು ಚಂದ್ರನ ಈ ಭಾಗದ ಮೇಲ್ಮೈ ಯಾವ ರೀತಿ ಇದೆ, ಅಲ್ಲಿ ಇರುವ ಖನಿಜಗಳು ಹಾಗೂ ರಾಸಾಯನಿಕಗಳು ಮತ್ತು ಹಿಮದ ಅಸ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಕಾತರವಾಗಿದೆ.

ನಾಸಾ ಮಾತ್ರವಲ್ಲ, ಇಡೀ ಜಗತ್ತೇ ಚಂದ್ರಯಾನ-2 ನೌಕೆಯು ಚಂದ್ರನ ಕುರಿತು ಕಂಡುಕೊಳ್ಳುವ ಸಂಗತಿಗಳನ್ನು ತಿಳಿಯಲು ಆಸಕ್ತವಾಗಿದೆ” ಎಂದು ಹೇಳಿದ್ದಾರೆ. ಇನ್ನು ಚಂದ್ರಯಾನ-2 ನೌಕೆಯು ಚಂದ್ರನ ಸುತ್ತಲಿನ ಮತ್ತೊಂದು ಕಕ್ಷೆಯ ಒಳಪ್ರವೇಶಿಸಿದೆ. ಈ ಮೂಲಕ ಚಂದ್ರನಿಗೆ ಮತ್ತಷ್ಟು ಸಮೀಪಿಸಿದೆ.

LEAVE A REPLY

Please enter your comment!
Please enter your name here