ಸೋಮವಾರ ದಿಢೀರ್ ನಾಪತ್ತೆಯಾಗಿದ್ದ ಕಾಫಿ ಉದ್ಯಮಿ ಸಿದ್ಧಾರ್ಥ್ ಅವರ ಶವ ಇಂದು ನೇತ್ರಾವತಿ ನದಿಯಲ್ಲಿ ದೊರೆತಿದೆ. ನೇತ್ರಾವತಿಯ ನದಿಯ ಸೇತುವೆ ಮೇಲೆ ಮೊನ್ನೆ ಸಂಜೆ ಆರು ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದ ವಿಜಿ ಸಿದ್ದಾರ್ಥ್ರ ಮೃತದೇಹ ಸುಮಾರು 36 ಗಂಟೆಗಳ ಕಾರ್ಯಾಚರಣೆಯ ಬಳಿಕ ಹೊಯ್ಗೆಬಜಾರ್ ಎಂಬಲ್ಲಿ ಪತ್ತೆಯಾಗಿದೆ.
ಬೋಟ್ಗಳಲ್ಲಿ ಹುಡುಕಾಟ ನಡೆಸ್ತಿದ್ದ ತಂಡಕ್ಕೆ ಮೃತದೇಹ ಪತ್ತೆಯಾಗಿದೆ. ಮೃತ ದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಚಿಕ್ಕಮಂಗಳೂರಿನಲ್ಲಿರುವ ಅವರ ಕಾಫಿ ಎಸ್ಟೇಟ್ನಲ್ಲಿ ಸಿದ್ದಾರ್ಥ್ ಅಂತ್ಯಕ್ರಿಯೆ ನಡೆಯಲಿದೆ.