ಭಾರತದ ಮೊದಲ ವೇಶ್ಯೆ ಅಮ್ರಾಪಾಲಿಯ ಕಥೆ, ಅಮ್ರಾಪಾಲಿ ಮತ್ತು ಬುದ್ಧನಿಗೆ ಸಂಬಂಧವೇನು?

0
341

ದೇಶದಲ್ಲಿ ವೇಶ್ಯೆಯರಲ್ಲೇ ಅತ್ಯಂತ ಹೆಸರು ಗಳಿಸಿದಾಕೆ. ದೇಶದ ಪ್ರಪ್ರಥಮ ವೇಶ್ಯೆ ಎಂದು ಕೆಲ ಇತಿಹಾಸಕಾರರು ಬರೆದುಕೊಂಡಿದ್ದಾರೆ. ಈಕೆ ಸೌಂದರ್ಯದ ಗಣಿ. ಪುರಾಣದಲ್ಲಿ ಬರುವ ರಂಬೆ, ಊರ್ವಶಿ, ಮೇನಕೆಯನ್ನೂ ಮೀರಿದ ಸೌಂದರ್ಯ ಈಕೆಯದ್ದು. ಈಕೆಯ ಸೌಂದರ್ಯವನ್ನು ನೋಡಿ ಮೈಮರೆತ ಗಂಡಸರಿಗೆ ಲೆಕ್ಕವಿಲ್ಲ. ಕ್ರಿಪೂ 500-600ರ ವೇಳೆ ಅದೆಷ್ಟೋ ರಾಜ ಮಹಾರಾಜರು ಈಕೆ ಮೋಹದ ಪಾಶಕ್ಕೆ ಬಲಿಯಾಗಿದ್ದಾರೆ. ಆಕೆಯ ಹೆಸರು ಅಮ್ರಾಪಾಲಿ.
ಅಮ್ರಾಪಾಲಿ ವೈಶಾಲಿ ಪ್ರಾಂತ್ಯದವಳು. ವೈಶಾಲಿ ಪ್ರಾಂತ್ಯವು ಲಿಚ್ಛಾವಿ ಕ್ಷತ್ರಿಯ ವಂಶದ ರಾಜರ ರಾಜಧಾನಿಯಾಗಿತ್ತು. ಪ್ರಸ್ತುತ ಇದು ಬಿಹಾರದಲ್ಲಿದೆ. ವೈಶಾಲಿ ಪ್ರಾಂತ್ಯದಲ್ಲಿ ಅಮ್ರಾಪಾಲಿ ಒಂದು ಮಾವಿನ ಮರದ ಕೆಳಗೆ ಚಿಕ್ಕ ಮಗುವಿದ್ದಾಗ ಸಿಕ್ಕಳು. ಸಿಕ್ಕ ಮಗುವನ್ನು ತೆಗೆದುಕೊಂಡು ಹೋದವರು ಅಮ್ರಾಪಾಲಿ ಎಂದು ಹೆಸರಿಡುತ್ತಾರೆ. ಅಮ್ರಾ ಎಂದರೆ ಮಾವು, ಪಾಲಿ ಎಂದರೆ ಮಾವಿನ ಮರದ ಚಿಗುರಿನ ಸುವಾಸನೆ.
ವೈಶಾಲಿ ಪ್ರಾಂತ್ಯದಲ್ಲಿ ಅದಾಗಲೇ ಸುಂದರವಾದ ಹೆಣ್ಣು ಮಕ್ಕಳನ್ನು ಅದೆಷ್ಟು ಗಂಡಸರು ಬೇಕಾದರೂ ಮದುವೆ ಮಾಡಿಕೊಳ್ಳಲು ಅವಕಾಶವಿತ್ತು. ಅಲ್ಲದೇ ತಮಗೆ ಇಷ್ಟವಾದ ಗಂಡಸರ ಜೊತೆಗೆ ಶಾರೀರಿಕವಾಗಿ ಸಂಬಂಧವನ್ನು ಇಟ್ಟುಕೊಳ್ಳಬಹುದಾಗಿತ್ತು. ಇಂತಹ ನೀಜ ವ್ಯವಸ್ಥೆಯೊಳಗೆ ಬೆಳೆದ ಅಮ್ರಾಪಾಲಿ ಸಂಗೀತ, ನೃತ್ಯಗಳಲ್ಲಿ ನೈಪುಣ್ಯತೆಯನ್ನು ಪಡೆದುಕೊಂಡಿದ್ದರು. ಬೆಳೆದು ಯೌವನಾಸ್ಥೆಗೆ ಬಂದ ನಂತರ ಆ ಪ್ರಾಂತ್ಯದಲ್ಲಿರುವ ಹೆಣ್ಣು ಮಕ್ಕಳಿಗಿಂತ ಹೆಚ್ಚು ಸುಂದರವಾಗಿದ್ದಳು.
ಈಕೆಯ ಸೌಂದರ್ಯವನ್ನು ಕಂಡು ಶಾರೀರಿಕವಾಗಿ ಅನುಭವಿಸಬೇಕು ಎಂದುಕೊಳ್ಳದ ರಾಜ ಮಹಾರಾಜರೇ ಇರಲಿಲ್ಲ. ಹೀಗಿರುವಾಗ ಅಮ್ರಾಪಾಲಿ ಮನುದೇವನ ಆಸ್ಥಾನದಲ್ಲಿ ನಾಟ್ಯ ಮಾಡುತ್ತಿದ್ದಳು. ಆಕೆಯ ಸೌಂದರ್ಯ ನೋಡಿ ಅವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಯೋಚನೆ ಮಾಡುತ್ತಿದ್ದ. ಇದೇ ವೇಳೆ ತನ್ನ ಬಾಲ್ಯ ಸ್ನೇಹಿತ ಕುಮಾರವರ್ಮನನ್ನು ಮದುವೆಯಾಗುತ್ತಿರುವುದಾಗಿ ಪ್ರಕಟಿಸುತ್ತಾಳೆ.

ಈ ಮಾತನ್ನು ಕೇಳಿದ ಮನುದೇವ ತುಂಬಾ ಕೋಪ ಮತ್ತು ಬೇಜಾರು ಪಟ್ಟುಕೊಳ್ಳುತ್ತಾನೆ. ಇದಾದ ಸ್ವಲ್ಪ ಸಮಯದ ನಂತರ ಅಮ್ರಾಪಾಳಿ ಮತ್ತು ಕುಮಾರ ವರ್ಮಾ ಮದುವೆ ಮಾಡಿಕೊಳ್ಳುತ್ತಿರುವಾಗ ಮನುದೇವ ತನ್ನ ಸೈನ್ಯದೊಂದಿಗೆ ದಾಂಗುಡಿಯಿಟ್ಟು ಕುಮಾರವರ್ಮನ ತಲೆಯನ್ನು ಕತ್ತರಿಸಿ ಸಾಯಿಸುತ್ತಾನೆ. ನಂತರ ಅಮ್ರಾಪಾಲಿಯನ್ನು ನಗರ ವಧು ಎಂದು ಪ್ರಕಟಿಸುತ್ತಾನೆ.
ನಗರ ವಧು ಎಂದರೆ ಆ ನಗರದಲ್ಲಿರುವ ಗಂಡಸರಿಗೆ ಪತ್ನಿ ಇದ್ದ ಹಾಗೆ. ಹೀಗೆ ಪ್ರಕಟಿಸಿದ ನಂತರ ಮನುದೇವ ಅಮ್ರಾಪಾಲಿಯನ್ನು ಶಾರೀರಿಕವಾಗಿ ಅನುಭವಿಸುತ್ತಾನೆ. ಇದಾದ ನಂತರ ಆ ನಗರದ ಧನಿಕರು, ಯುವರಾಜರು, ಕಾಮಾಂಧರು ಈಕೆಯನ್ನು ಅನುಭವಿಸುತ್ತಿರುತ್ತಾರೆ. ಹೀಗೆ ನಗರ ವೇಶ್ಯೆಯಾಗಿ ಪರಿವರ್ತನೆಗೊಳ್ಳುತ್ತಾಳೆ. ಅನುಭವಿಸಿದ ಜನರು ಈಕೆಗೆ ಒಂದಷ್ಟು ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಹೀಗೆ ಈಕೆಯನ್ನು ಅನುಭವಿಸಿದ ರಾಜರು, ಯುವರಾಜರು ಒಂದು ರಾತ್ರಿಗೆ 150 ಪವನಾರ್‍ಗಳನ್ನು ನೀಡುತ್ತಿದ್ದರು. ಪವನ್‍ ಎಂದರೆ ಈಗಿನ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವಂತಹದ್ದು.
ಅಮ್ರಾಪಾಲಿಯ ಬಗ್ಗೆ ಬೇರೆ ರಾಜ್ಯದ ರಾಜರುಗಳಿಗೂ ತಿಳಿಯುತ್ತದೆ. ಒಂದು ದಿನ ಮಗದ ದೇಶದ ರಾಜ ಬಿಂದುಸಾರ ವೈಶಾಲಿ ರಾಜ್ಯದ ಮೇಲೆ ದಂಡೆತ್ತಿ ಬಂದು ಅಮ್ರಾಪಾಲಿಯನ್ನು ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಬಿಂದುಸಾರನನ್ನು ಮನಸಾರೆ ಮೆಚ್ಚಿ ಆತನನ್ನೇ ಮದುವೆ ಮಾಡಿಕೊಳ್ಳುತ್ತಾಳೆ. ಅಮ್ರಾಪಾಲಿಯ ಸೌಂದರ್ಯಕ್ಕೆ ಮನಸೋತ ಬಿಂದುಸಾರ ಆಕೆಯನ್ನು ಎಂದಿಗೂ ಬಿಟ್ಟುಕೊಟ್ಟು ಮಾತನಾಡುತ್ತಿರಲಿಲ್ಲ. ಅಮ್ರಾಪಾಲಿಯ ಮಾತನ್ನು ಕೇಳಿ ಬೇರೆ ರಾಜ್ಯದ ಮೇಲೆ ಯುದ್ಧ ಮಾಡುವುದನ್ನು ಬಿಟ್ಟು ಬಿಟ್ಟನು.
ಇವರ ದಾಪಂತ್ಯದ ಫಲವಾಗಿ ಭೀಮನಕೊಂಡ ಎಂಬ ಗಂಡು ಮಗುವಿನ ಜನನವಾಗುತ್ತದೆ. ಬಿಂದುಸಾರನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲನೇ ಹೆಂಡತಿಗೆ ಅಜಾತಶತ್ರು ಎಂಬ ಗಂಡು ಮಗನಿರುತ್ತಾನೆ. ಬಿಂದುಸಾರನ ನಿಧನಾನಂತರ ಅಮ್ರಾಪಾಲಿಯನ್ನು ವೈಶಾಲಿ ನಗರಕ್ಕೆ ಮತ್ತೆ ತಂದು ಬಿಡುತ್ತಾರೆ. ಇದನ್ನರಿತ ಅಜಾತಶತ್ರು ವೈಶಾಲಿ ರಾಜ್ಯದ ಮೇಲೆ ಯುದ್ಧ ಮಾಡಿ ಅಲ್ಲಿರುವ ಎಲ್ಲರನ್ನು ಸದೆ ಬಡಿಯುತ್ತಾನೆ. ಇದನ್ನು ಕೇಳಿ ಕೋಪಗೊಂಡ ಅಮ್ರಪಾಲಿ ಹೇಳದೆ ಕೇಳದೇ ಬೇರೆ ರಾಜ್ಯಕ್ಕೆ ತೆರಳುತ್ತಾಳೆ.

ಇದೇ ವೇಳೆ ಭಗವಾನ್‍ ಬುದ್ಧ ವೈಶಾಲಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸುತ್ತಾನೆ. ಅಮ್ರಾಪಾಲಿಯೂ ಈ ಸಭೆಯಲ್ಲಿ ಭಾಗವಹಿಸುತ್ತಾಳೆ. ಬುದ್ಧ ತನ್ನ ದಿವ್ಯದೃಷ್ಟಿಯಿಂದ ಅರಿತು ಅಮ್ರಾಪಾಲಿಯ ಹೆಸರಿಟ್ಟು ಕರೆಯುತ್ತಾನೆ. ಇದರಿಂದ ಅಮ್ರಾಪಾಲಿ ಈತ ಸಾಕ್ಷಾತ್‍ ದೇವನೇ ಎಂದು ಅರಿತು ತನ್ನ ಮನೆಗೆ ಭೋಜನಕ್ಕೆಂದು ಕರೆಯುತ್ತಾಳೆ. ಆಕೆಯ ಮಾತಿಗೆ ಮನ್ನಿಸಿ ಭೋಜನಕ್ಕೆ ತೆರಳುತ್ತಾಳೆ. ತನಗೆ ಶಾಂತಿ ಮತ್ತು ಸಮಾಧಾನ ಬೇಕು. ಅದಕ್ಕಾಗಿ ಏನು ಮಾಡಬೇಕು ಎಂದು ಕೇಳುತ್ತಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ಬುದ್ಧ ಪ್ರಪಂಚವನ್ನು ಪ್ರಪಂಚದಂತೆ ಗ್ರಹಿಸು. ಆಗ ನಿನಗೆ ಶಾಂತಿ, ಸಮಾಧಾನ ಸಿಗುತ್ತದೆ. ಅಲ್ಲದೇ ನಿತ್ಯ ರಾಜಭೋಗಗಳನ್ನು ತ್ಯಜಿಸಿ ಸರಳ ಮಾರ್ಗದಲ್ಲಿ ನಡೆಯುವಂತೆ ಹೇಳುತ್ತಾನೆ. ಬುದ್ಧನ ಮಾತಿನಂತೆ ಅಮ್ರಾಪಾಲಿ ತನ್ನೆಲ್ಲಾ ಆಸ್ತಿಯನ್ನು ತ್ಯಜಿಸಿ ಸಂಸ್ಯಾಸ ಸ್ವೀಕರಿಸುತ್ತಾಳೆ. ಇದಾದ ನಂತರ ಆಕೆಯ ಮಗ ಭೀಮನಕೊಂಡ ಕೂಡ ಸಂನ್ಯಾಸ ಸ್ವೀಕರಿಸುತ್ತಾನೆ. ಹೀಗೆ ಬದುಕಿನಲ್ಲಿ ಸುಖ-ಶಾಂತಿಗಾಗಿ ತನ್ನಲ್ಲೇ ವೈಭೋಗಗಳನ್ನು ತ್ಯಜಿಸಿ ಬುದ್ಧನ ಮಾರ್ಗದಲ್ಲಿ ನಡೆಯುತ್ತಾಳೆ.

LEAVE A REPLY

Please enter your comment!
Please enter your name here