ನಾಲ್ಕು ರೋಗಿಗಳನ್ನು ಐದು ಕಿಲೋಮೀಟರ್ ದೂರ ಹೆಗಲ ಮೇಲೆ ಹೊತ್ತು ಬಂದ ಸೇನಾಪಡೆ

0
127

ಗುಡ್ಡ ಕುಸಿತದಿಂದಾಗಿ ಗ್ರಾಮದಲ್ಲಿ ಮಾರ್ಗವೆಲ್ಲ ಹಾಳಾಗಿ ಹೋಗಿ ಗ್ರಾಮದಲ್ಲಿ ಮಾರ್ಗವೇ ಇರಲಿಲ್ಲ. ಸುಮಾರು ಆರು ತಿಂಗಳುಗಳಿಂದ ಹತ್ತಕ್ಕೂ ಹೆಚ್ಚು ಮಂದಿ ಜನರು ಈ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು ಇವರನ್ನೆಲ್ಲ ಸೇನಾ ಪಡೆಯು ರಕ್ಷಿಸಿದೆ.
ವಾಹನ ವ್ಯವಸ್ಥೆ ಇಲ್ಲದ ಕಾರಣ ನಾಲ್ಕು ರೋಗಿಗಳನ್ನು ಐದು ಕಿಲೋಮೀಟರ್ ದೂರದವರೆಗೂ ಹೆಗಲ ಮೇಲೆ ಹೊತ್ತು ಸಾಗಿ ಸೇನಾಪಡೆ ರಕ್ಷಣೆ ಮಾಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಹಲಗಡಕ ಗ್ರಾಮದಲ್ಲಿಯೇ ಘಟನೆ ನಡೆದಿದ್ದುಆ ಜಿಲ್ಲೆಯಲ್ಲಾದ ಭಾರಿ ಮಳೆಯಿಂದ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿದು ಹೋಗಿದೆ. ಹೀಗಾಗಿ ಮನೆಯಿಂದ ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗಲು ಆಗದೆ ತುಂಬಾ ಕಂಗಾಲಾಗಿದ್ದಾರೆ
ಆರು ತಿಂಗಳಿನಿಂದ ಹತ್ತಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಈ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ರಕ್ಷಣಾ ಸಿಬ್ಬಂದಿಗಳು ಬೆಳಗ್ಗೆ 7:30 ಕ್ಕೆ ಯೋಧರು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ.
ಕಷ್ಟಪಟ್ಟು ಸೇನಾಪಡೆ ಹತ್ತಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದೆ.
ಅವರೊಂದಿಗೆ ಸ್ಥಳೀಯ ಯುವಕರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದ್ದಾರೆ
ಸಂತ್ರಸ್ತರಲ್ಲಿ ನಾಲ್ಕು ಜನರು ಅನಾರೋಗ್ಯ ಕ್ಕೆ ಒಳಗಾಗಿದ್ದಾರೆ.

ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೂಡ ವಾಹನ ವ್ಯವಸ್ಥೆ ಇಲ್ಲ ಆ ವೇಳೆಯಲ್ಲಿ ಸೇನಾ ಪಡೆಗೆ ಏನು ಮಾಡಬೇಕೆಂದು ತೋಚದೆ ಸುಮಾರು ಐದು ಕಿಲೋಮೀಟರ್ ದೂರದವರೆಗೆ ರೋಗಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರ ಜೀವ ಉಳಿಸಿದ ಸೇನಪಡೆಗೆ ಚಿರಋಣಿ ಎಂದು ಗ್ರಾಮಸ್ಥರು ಹೇಳಿದ್ದಾರೆ
ಹಾಗೂ ಅವರನ್ನು ರಕ್ಷಿಸಿದ ಸೇನಾ ಪಡೆಯ ಯೋಧರಿಗೆ ಗ್ರಾಮಸ್ಥರು ನಮನಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here