ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಯ್ತು ಈ ತಾಣ

0
168

ಯೂರೋಪ ಖಂಡದ ಪ್ರಮುಖ ಆಕರ್ಷಣೆಯಾಗಿದ್ದ, ಐಸ್‍ಲ್ಯಾಂಡಿನ ‘ವ್ಯಾಟ್ನಾಜೊಕುಲ್ ರಾಷ್ಟ್ರೀಯ ಉದ್ಯಾನವ’ನವನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಗೆ ಸೇರಿದ ಐಸ್‍ಲ್ಯಾಂಡಿನ ಮೂರನೇ ತಾಣ ಇದಾಗಿದೆ.

ಇನ್ನು ಈ ತಾಣದ ವೈಶಿಷ್ಟ್ಯವೆಂದರೆ ಈ ಪ್ರದೇಶ ಜ್ವಾಲಾಮುಖಿಗಳಿಂದ ರಚಿಸಲ್ಪಟ್ಟಿದ್ದು ಲಾವಾ ಫೀಲ್ಡ್‍ಗಳಿಂದ ಸುತ್ತುವರೆದಿದೆ. ಅಷ್ಟೇ ಅಲ್ಲದೇ ಯುರೋಪಿನ ಅತ್ಯಂತ ದೊಡ್ಡ ಗ್ಲೇಸಿಯರ್ ಅಂದರೆ ಹಿಮನದಿ ಇದೆ ಉದ್ಯಾನದಲ್ಲಿದೆ. ಈ ತಾಣವನ್ನು ಬೆಂಕಿ ಹಾಗೂ ಹಿಮದ ಮಿಲನದ ಅತ್ಯುತ್ತಮ ಉದಾಹರಣೆ. ಈ ತಾಣವು 14,500 ಚದರ ಕಿಮೀ ಅಷ್ಟು ಸುತ್ತಳತೆ ಹೊಂದಿದ್ದು, ಐಸ್‍ಲ್ಯಾಂಡಿನ ಶೇಕಡ 14ರಷ್ಟಿದೆ. ಈ ಉದ್ಯಾನವನ ಯೂರೋಪಿನ ಅತ್ಯಂತ ಪ್ರಮುಖ ಪ್ರದೇಶಗಳಲ್ಲಿ ಒಂದು.

LEAVE A REPLY

Please enter your comment!
Please enter your name here