ಎಕ್ಕದ ಗಿಡದ ಬಗ್ಗೆ ಯಾರಿಗೂ ತಿಳಿಯದ ರಹಸ್ಯ….!

0
530

ಹಲವರಿಗೆ ಮನೆ ಅಥವಾ ರಸ್ತೆಯಲ್ಲಿ ಕಾಣಿಸುವ ಎಕ್ಕದ ಗಿಡ ಒಂದು ಔಷಧಿಯ ಗಿಡ ಅಂತ ತುಂಬಾ ಜನರಿಗೆ ಗೊತ್ತಿಲ್ಲ. ನಮ್ಮಲ್ಲಿ ಈಗಲೂ ಸಹ ಇದನ್ನು ಔಷಧಿಯಾಗಿ ಹಳ್ಳಿಗಳಲ್ಲಿ ಬಳಸುತ್ತಿದ್ದಾರೆ. ಎಕ್ಕದ ಗಿಡಗಳಲ್ಲಿ ಎರಡು ಪ್ರಭೇದಗಳಿವೆ, ಅವು ಬಿಳಿ ಮತ್ತು ಕೆಂಪು ಗಿಡಗಳು.ಈ ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿಗೆ ಬೇಕಾದ ಶ್ರೇಷ್ಠ ಎಲೆ. ಈ ಒಂದು ಗಿಡ ‘ಅಪೋಸೈನೇಸಿ’ ಎಂಬ ಕುಟುಂಬಕ್ಕೆ ಸೇರಿದ್ದು,ಇದರ ಶಾಸ್ತ್ರಿಯ ನಾಮ ‘ಕಾಲೋಟ್ರೊಫಿಸ್ ಓಸಾರ’ ಎಂದು ಕರೆಯುತ್ತಾರೆ. ನಮ್ಮ ಕನ್ನಡದಲ್ಲಿ ಎಕ್ಕದ ಗಿಡ ಎಂದು ಕರೆಯಲಾಗುತ್ತದೆ, ಇದರಲ್ಲಿ ಬಿಳಿ ಎಕ್ಕದ ಗಿಡ ಕಾಣಿಸುವುದು ತುಂಬಾ ಕಡಿಮೆ. ರಥಸಪ್ತಮಿಯ ದಿನದಂದು ಎಕ್ಕದ ಎಲೆಗಳನ್ನು ಧರಿಸಿ ನದಿಯ ಸಾನ್ನ ಮಾಡಿದರೆ ತುಂಬಾ ಒಳ್ಳೆಯ ಪುಣ್ಯ ಬರುತ್ತದೆ ಎಂದು ನಮ್ಮ ಹಿಂದೂ ಪುರಾಣದಲ್ಲಿ ಹೇಳಲಾಗಿದೆ.

ಈ ಒಂದು ಗಿಡವನ್ನು ಆಗಿನ ಕಾಲದಲ್ಲಿ ಆರ್ಯುವೇದದ ಔಷಧಿಯಾಗಿ ಬಳಸಲಾಗುತ್ತಿತು. ಇದು ಶರೀರದ ಚರ್ಮ ಮತ್ತು ಮೂಳೆಗಳ ಸಮಸ್ಯಗೆ ರಾಮಬಾಣವಿದಂತೆ. ನೆನಪಿನಲ್ಲಿಡಬೇಕಾದ ಒಂದು ಸಂಗತಿಯೆಂದರೆ ಎಕ್ಕದ ಗಿಡದ ಎಲೆಯನ್ನು ಕುಯ್ಯುವಾಗ, ಆ ಎಕ್ಕದ ಗಿಡದ ಹಾಲು ಕಣ್ಣಿಗೆ ಬಿಳದಂತೆ ಹುಷಾರಾಗಿ ಇರಬೇಕಾಗುತ್ತದೆ. ಏಕೆಂದರೆ ಎಕ್ಕದ ಗಿಡದ ಹಾಲು ವಿಷಪೂರಿತ. ಆದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ಉಪ್ಪು ಬೆರಸಿ ಪೇಸ್ಟ್ ಮಾಡಿಕೊಂಡು ಮೂಳೆ ನೋವು ಇರುವ ಜಾಗದಲ್ಲಿ ಹಚ್ಚಿದರೆ ನೋವು ಕಡಿಮೆ ಆಗುತ್ತದೆ. ಎಷ್ಟೇ ಗಾಯಗಳಾದರು ಇದರ ಎಲೆಗಳನ್ನು ಒಣಗಿಸಿ ಪೌಡರ್ ಮಾಡಿಕೊಂಡು ಗಾಯಗಳ ಮೇಲೆ ಹಚ್ಚಿದರೆ ಅವು ಬೇಗ ವಾಸಿ ಆಗುತ್ತದೆ.

ಮತ್ತೊಂದು ವಿಷಯವೆನೆಂದರೆ ಭಯ ಬಿಳಿಸುವಂತಹ ಕನಸುಗಳು ಬಂದರೆ ಈ ಗಿಡದ ಬೇರನ್ನು ತಲೆದಿಂಬಿನ ಕೆಳಕ್ಕೆ ಇಟ್ಟು ಮಲಗುತ್ತಿದ್ದರು ಆಗಿನ ಕಾಲದವರು. ಹೀಗೆ ಮಾಡುವುದರಿಂದ ಗ್ರಹದೋಷಗಳು ಸಹ ನಿವಾರಣೆ ಆಗುತ್ತದೆ ಎಂದು ನಂಬುತ್ತಿದ್ದರು.ಬಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಅಂತ ನಮ್ಮ ಹಿಂದೂ ಪುರಾಣಗಳ ನಂಬಿಕೆ.ಅಷ್ಟೇ ಅಲ್ಲದೆ ಎಕ್ಕದ ಗಣಪತಿ ಪ್ರತಿಮೆಯನ್ನ ಅರಿಶಿನದಿಂದ ನೆನಿಸಿ ಪ್ರತಿ ಬುಧವಾರ ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿರುವ ದುಷ್ಟಶಕ್ತಿ, ಕಣ್ಣುದೃಷ್ಟಿಯನ್ನ ಹೋಗಲಾಡಿಸುತ್ತದೆ ಎಂಬ ನಂಬಿಕೆಯಿದೆ.ಈಗಲೂ ಸಹ ಇದು ಚಾಲ್ತಿಯಲ್ಲಿದೆ.ನಮ್ಮ ದೇಹದ ಮೇಲೆ ನೀರುಗುಳೆಗಳು ಬಂದರೆ ಈ ಎಕ್ಕದ ಗಿಡದ ಹಾಲನ್ನು ಮುಟ್ಟಿಸಿದರೆ ಆ ಗುಳೆಗಳು ಒಣಗಿ ಹೋಗುತ್ತಂತೆ.

ಈ ಗಿಡದ ಹಾಲು ವಿಷವಾದರೂ ಮುಖದ ಸೌಂದರ್ಯಕ್ಕೆ ಒಳ್ಳೆಯದು.ಈ ಗಿಡದ ಹಾಲಿನಲ್ಲಿ ಅರಿಶಿನ ಬೆರಸಿ ಕಣ್ಣಿಗೆ ಬೀಳದ ಹಾಗೆ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿರುವ ಕಪ್ಪು ಮಚ್ಚೆ ಮಾಯಾವಾಗುತ್ತದೆ.ಇದು ನೂರರಷ್ಟು ಸತ್ಯ.ನಮಗೆ ಗಾಯವಾಗಿ ಗಾಯದ ಜಾಗದಲ್ಲಿ ರಕ್ತ ಜಾಸ್ತಿ ಬರುತ್ತಿದರೆ ಕೂಡಲೇ ಈ ಗಿಡದ ಹಾಲನ್ನು ಹಚ್ಚಿದರೆ ರಕ್ತ ಹೊರಬರದಂತೆ ತಡೆಯುತ್ತದೆ,ಆದರೆ ಯಾವುದೇ ಕಾರಣಕ್ಕೂ ಎಕ್ಕದ ಗಿಡದ ಹಾಲು ಕಣ್ಣಿಗೆ ಬೀಳದಂತೆ ನೋಡಿಕೊಳಬೇಕಾಗುತ್ತದೆ,ಏಕೆಂದರೆ ಎಕ್ಕದ ಗಿಡದ ಹಾಲು ಕಣ್ಣಿಗೆ ಹಾನಿಕಾರಕ.

LEAVE A REPLY

Please enter your comment!
Please enter your name here