“ದಿ ರಾಕ್” ಪ್ರಪಂಚಕ್ಕೆ ನಂಬರ್ 1 ಆದರೆ ಅಕ್ಷಯ್ ಕುಮಾರ್ ಯಾರನ್ನು ಹಿಂದಿಕ್ಕಿದ್ದಾರೆ ಗೊತ್ತಾ .?

0
404

ಸ್ನೇಹಿತರೆ ಡ್ವೇನ್ ಡೌಗ್ಲಾಸ್ ಜಾನ್ಸನ್ ಈ ಹೆಸರು ತುಂಬಾ ಜನಕ್ಕೆ ಪರಿಚಯ ಇರಲ್ಲ ದಿ ರಾಕ್ ಅಂದ್ರೆ ಈ ಪ್ರಪಂಚಕ್ಕೆ ಚಿರಪರಿಚಿತ.
ಈ ಅಜಾನುಬಾಹು ಡ್ವೇನ್ ಡೌಗ್ಲಾಸ್ ಜಾನ್ಸನ್ ಈ ಹಿಂದೆ ಹೆವಿ ವೇಯ್ಟ್ ಎದುರಾಳಿಗಳನ್ನು ಬಗ್ಗು ಬಡಿದು ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಸಿನಿಮಾ ರಂಗಕ್ಕೂ ಪ್ರವೇಶಿಸಿ ಅಲ್ಲೂ ಕೂಡ ಸೂಪರ್ ಸ್ಟಾರ್ ಗಳನ್ನು ಹಿಂದಿಕ್ಕಿ ಅದ್ಭುತ ನಟ ಅನ್ನಿಸಿಕೊಂಡಿದ್ದಾರೆ.
ಇವತ್ತು ಸಿನಿಮಾದ ಗಳಿಕೆಯಲ್ಲಿ ಹಾಲಿವುಡ್ ಸೂಪರ್ ಸ್ಟಾರ್’ಗಳನ್ನು ಹಿಂದಿಕ್ಕಿರುವ ಜಾನ್ಸನ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಕೇಳಿದರೆ ನಿಜಕ್ಕೂ ದಂಗ್ ಆಗ್ತೀರಾ 100 ಕೋಟಿ , 200 ಕೋಟಿ , 300 ಕೋಟಿ ಅಥವಾ 400 ಕೋಟಿ ಇದ್ಯಾವುದೂ ಅಲ್ಲ ಒಂದು ಸಿನಿಮಾಕ್ಕೆ ಅವರು ಪಡೆಯುವ ಸಂಭಾವನೆ ಬರೋಬ್ಬರಿ 640 ಕೋಟಿ ರೂಪಾಯಿ. ಕಳೆದ ಹನ್ನೆರಡು ತಿಂಗಳಲ್ಲಿ ದಿ ರಾಕ್ ಖ್ಯಾತಿ ನಟ 89.3 ದಶಲಕ್ಷ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಡ್ವೇನ್ ಡೌಗ್ಲಾಸ್ ಜಾನ್ಸನ್ ಅಭಿನಯದ ಫಾಸ್ಟ್ ಅಂಡ್ ಪ್ಯೂರಿಯಸ್’ನ “HOBBS and SHAW” ಸಿನಿಮಾ ಇವರೆಗೆ ವಿಶ್ವದ್ಯಂತ 5 ಶತಕೋಟಿ ಡಾಲರ್ ಗಳನ್ನು ಪುಡಿಗಟ್ಟಿದೆ. ಜಾನ್ಸನ್ ಅಭಿನಯದ ಬಹುತೇಕ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದನ್ನು ಮಾಡುತ್ತವೆ.

1999ರಲ್ಲಿ “BEYOND THE MAT” ಎಂಬ ಸಾಕ್ಷ್ಯಚಿತ್ರದ ಮೂಲಕ ಫಿಲಂ ಬ್ಯಾಂಡ್’ಗೆ ಎಂಟ್ರಿಯಾದ ಈ ಫೈಟರ್ 2001 ರಲ್ಲಿ “MUMMY RETURNS” ಸಿನಿಮಾ ಮೂಲಕ ಹಾಲಿವುಡ್ ಪ್ರವೇಶಿಸಿ ಗೆಲುವಿನ ನಾಗಾಲೋಟ ಮುಂದುವರಿಸಿದ್ರು.

“THE SCORPION KING” , “WALKING TALL” , “JOURNEY” , “HERCULES” , “FAST AND FURIOUS” ಈ ರೀತಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್, ಸೈನ್ಸ್ ಪ್ರಿಕ್ಷನ್ , ಕಾಮಿಡಿ ಎಲ್ಲಾ ಪಾತ್ರಗಳನ್ನು ನಿಭಾಯಿಸಬಲ್ಲ ಈ ನಟನಿಗೆ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. “AVENGERS” ಖ್ಯಾತಿಯ ಕ್ರಿಸ್ ಹೇಮ್ಸ್’ವರ್ಥ್ ಹಾಗೂ ಹಾಲಿವುಡ್ನ ಪ್ರಖ್ಯಾತ ನಟರಾದ ಬ್ರಾಡ್ಲಿ ಕೂಪರ್, ರಾಬರ್ಟ್ ಡೌನಿ ಜೂನಿಯರ್ ಮುಂತಾದವರನ್ನು ಜಾನ್ಸನ್ ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ.

ಇದು ರಾಕ್ ಕಥೆ ಆದ್ರೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಭಾರತದ ಏಕೈಕ ನಟ ಅಕ್ಷಯ್ ಕುಮಾರ್ ಅವರು ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅಕ್ಷಯ್ ವಿಶ್ವದ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ 4ನೇ ಸ್ಥಾನದಲ್ಲಿದ್ದಾರೆ ಅನ್ನೋದು ಖುಷಿ ವಿಚಾರ. ಖ್ಯಾತ ನಟ ಜಾಕಿಚಾನ್ ಅವರನ್ನು ಕೂಡ ಹಿಂದಿಕ್ಕಿ ಅಕ್ಷಯ ಕುಮಾರ ಅವರು 4ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಅವರ ವಾರ್ಷಿಕ ಸಂಭಾವನೆ ಒಟ್ಟು ಒಂದು ವರ್ಷಕ್ಕೆ 466 ಕೋಟಿ ರೂಪಾಯಿ. 2ನೇ ಸ್ಥಾನ ಆಸ್ಟ್ರೇಲಿಯಾದ ನಟ ಕ್ರಿಸ್ ಹೆಮ್ಸ್’ವರ್ಥ್ ಪಾಲಾಗಿದೆ, ಅವರ ಒಟ್ಟು ಸಂಭಾವನೆ 547 ಕೋಟಿ ರೂಪಾಯಿ ಅಂದ್ರೆ ಪ್ರಪಂಚದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರು 2ನೇ ಸ್ಥಾನದಲ್ಲಿದ್ದಾರೆ.

ಇನ್ನೂ 473 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ರಾಬರ್ಟ್ ಡೌನಿ ಜೂನಿಯರ್ 3ನೇ ಸ್ಥಾನದಲ್ಲಿದ್ದಾರೆ. ಇನ್ನು 5ನೇ ಸ್ಥಾನ ಬರುವುದು ಜಾಕಿ ಚಾನ್’ಗೆ ಅಂದ್ರೆ ಅವರ ಒಟ್ಟು ಆದಾಯ 415 ಕೋಟಿ ರೂಪಾಯಿ. ಆದರೆ ಇಲ್ಲಿ ಅಕ್ಷಯ್ ಕುಮಾರ್ ಮತ್ತು ಜಾಕಿಚಾನ್ ಇವರಿಬ್ಬರು ಕೂಡ ದುಡಿದ ಬಹುಪಾಲು ಹಣವನ್ನು ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡ್ತಾ ಇರೋದು ನಾವಿಲ್ಲಿ ಗಮನ ಹರಿಸಬೇಕಾದ ವಿಷಯ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here