ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಮತ್ತು ನೈಜ ಘಟನೆ ಆಧಾರಿತ ಸಿನಿಮಾಗಳು ಬರುತ್ತಲೇ ಇವೆ. ಹಾಗೆಯೇ ಸಾಕಷ್ಟು ಸದ್ದು ಸಹ ಮಾಡುತ್ತಿವೆ! ಈಗ ಈ ಲಿಸ್ಟ್ ನಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ‘ರಾಂಚಿ’ ಎಂಬುವ ಚಿತ್ರವನ್ನು ತಯಾರು ಮಾಡಿದ್ದಾರೆ ..
ಜಾರ್ಖಂಡ್ ನ ರಾಜಧಾನಿ ‘ರಾಂಚಿ’!
ಏನಿದು ಊರಿನ ಹೆಸರಿನಲ್ಲಿ ಸಿನಿಮಾ ಇದೆಯಾ ಎಂದೆನಿಸಬಹುದು..ಹೌದು ಚಿತ್ರದ ಟೈಟಲ್ ಗೂ ಮತ್ತು ಆ ಊರಿಗೂ ಸಂಬಂಧ ಇದೆಯಂತೆ !
2009ರಲ್ಲಿ ರಾಂಚಿಯ ವ್ಯಕ್ತಿಯೊಬ್ಬ “ನಾನು ಸರ್ಕಾರದ ಕಡೆಯವನು, ನಾನು ಒಂದು ಸಾಕ್ಷಿ ಚಿತ್ರ ತಯಾರಿಸಲು ಆಸಕ್ತಿ ಹೊಂದಿದ್ದೇನೆ ಎಂದು ನಿರ್ದೇಶಕರಿಗೆ ಕರೆ ಮಾಡಿದ್ದರಂತೆ, ನಂತರ ನಿರ್ದೇಶಕರು ಭೇಟಿ ನೀಡಿದ್ದಾರೆ.. ಆದರೆ ಅವರು ಆಘಾತಕ್ಕೊಳಗಾಗುತ್ತಾರೆ.. ಯಾಕೆಂದರೆ ನಿರ್ದೇಶಕರು ಭೇಟಿ ಮಾಡಿದವರು ಯಾವ ಸರ್ಕಾರದ ಪರದವರು ಅಲ್ಲ, ಅವರು ನಿಜವಾದ ದರೋಡೆಕೋರರು ! ಅಲ್ಲಿಂದ ನಿರ್ದೇಶಕರು ಹೇಗೆ ಪಾರಾಗುತ್ತಾರೆ? ಮತ್ತು ದರೋಡೆಕೋರರನ್ನು ಪೊಲೀಸರಿಗೆ ಸೆರೆ ಹಿಡಿದು ಕೊಡಲು ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ಚಿತ್ರದ ಮುಖಾಂತರ ತೋರಿಸಲು ಹೋಗಿದ್ದಾರೆ ನಿರ್ದೇಶಕ ‘ಶಶಿಕಾಂತ್ ಕಟ್ಟಿ’!
ಈ ಹಿಂದೆ ಶಶಿಕಾಂತ್ ಕಟ್ಟಿದವರು ‘ಬಾಲ್ ಪೆನ್’ ಎನ್ನುವ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದೊಂದು ಮಕ್ಕಳ ಸಿನಿಮಾವಾಗಿದ್ದು, ಸಾಹಸ ಮನೋಭಾವ ಮತ್ತು ಮಕ್ಕಳಲ್ಲಿನ ಭಾವನೆಗಳನ್ನು ಚಿತ್ರಿಸಿದ್ದರು.ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತೆರೆಯ ಮೇಲೆ ಭಾವನಾತ್ಮಕವಾಗಿ ತೋರಿಸಿದ್ದರು !
ಚಿತ್ರದ ನಾಯಕ ನಟನಾಗಿ ‘ಪ್ರಭು ಮಂಡ್ಕೂರ್’
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುಲವಧು’, ಧಾರಾವಾಹಿಯ ಮುಖಾಂತರ ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ಪ್ರಭು, ಪ್ರದೀಪ್ ವರ್ಮಾ ಅವರ ಸ್ತ್ರೀ ಆಧಾರಿತ ಚಲನಚಿತ್ರ ‘ಊರ್ವಿ’ ಸಿನಿಮಾದಿಂದ ಬೆಳ್ಳಿ ತೆರೆಗೆ ಪಾದಾರ್ಪಣೆ ಪಡೆದುಕೊಂಡರು. ಈ ಚಿತ್ರವು ನ್ಯೂಯಾರ್ಕ್ ಇಂಡಿ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವೆಂದು ಮತ್ತು ಅತ್ಯುತ್ತಮ ಚಿತ್ರಕ್ಕಾಗಿ ಫಿಲಂಫೇರ್ ಅವಾರ್ಡ್ ಗಳನ್ನು ಮುಡಿಗೇರಿಸಿಕೊಂಡಿತ್ತು!
ನಂತರ ರಿಲ್ಯಾಕ್ಸ್ ಸತ್ಯ, ಡಬ್ಬಲ್ ಇಂಜಿನ್ ,ಮಾಯಾ ಕನ್ನಡಿ, ಡಾಟರ್ ಆಫ್ ಪಾರ್ವತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದುಕೊಂಡ ನಟ ಪ್ರಭು ಮುಂಡ್ಕೂರು, ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ !..
ಇನ್ನು ಈ ಚಿತ್ರದಲ್ಲಿ ಪ್ರಭು ನಿರ್ದೇಶಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.
” ಇನ್ನು ಇದೊಂದು ನೈಜ ಘಟನೆ ಆಧಾರಿತ ಚಿತ್ರ , ಹಾಗಾಗಿಯೇ ಈ ಪಾತ್ರವು ತುಂಬಾ ಜವಾಬ್ದಾರಿಯುತವಾದುದ್ದು! ಹಾಗೂ ನಿರ್ದೇಶಕ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಈಗ ನನಗೆ ತಿಳಿದಿದೆ.! ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಇದೆ. ಹಾಗಾಗಿ ಚಿತ್ರಕ್ಕೆ ‘ರಾಂಚಿ’ ಎಂದು ಹೆಸರಿಡಲಾಗಿದೆ ಎಂದು ಪ್ರಭು ಹೇಳಿದ್ದಾರೆ !
ಚಿತ್ರಕ್ಕೆ ನಾಯಕಿಯಾಗಿ ಹುಲಿರಾಯ ಖ್ಯಾತಿಯ ‘ದಿವ್ಯ ಉರುದುಗ ‘
ದಿವ್ಯಾ ಉರುದುಗ, ಚಂದನವನದ ಪ್ರತಿಭಾವಂತ ನಟಿ ಮತ್ತು ಮುದ್ದು ಚೆಲುವೆ! 2017 ರಲ್ಲಿ ತೆರೆಕಂಡಿದ್ದ ‘ಹುಲಿರಾಯ’ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ನಂತರ ‘ಫೇಸ್ ಟು ಫೇಸ್’ ಎಂಬ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು !
ಇನ್ನು ‘ರಾಂಚಿ’ ಚಿತ್ರದಲ್ಲಿ ಅಭಿನಯಿಸುತ್ತಿರುವ ದಿವ್ಯಾ, ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ .
‘ನಾನು ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕಿ ಪಾತ್ರವನ್ನು ಅಭಿನಯಿಸುತ್ತಿದ್ದೇನೆ. ನನ್ನ ಹಿಂದಿನ ಸಿನಿಮಾದ ಶೂಟಿಂಗ್ ಸಮಯದಲ್ಲಿ ಸಹಾಯಕ ನಿರ್ದೇಶಕರನ್ನು ಗಮನಿಸುತ್ತಿದ್ದೆ. ಸಹಾಯಕ ನಿರ್ದೇಶಕ ಕೆಲಸವೂ ಚಿತ್ರಗಳಲ್ಲಿ ಬಹಳ ಮುಖ್ಯವಾದದ್ದು ಮತ್ತು ಅವರು ಹೆಚ್ಚು ಜವಾಬ್ದಾರರಾಗಿರುತ್ತಾರೆ !
ಇದು ಈ ಚಿತ್ರದಲ್ಲಿ ತೋರಿಸಲಾಗಿದೆ..ಎಂದು ದಿವ್ಯ ಉರುದುಗ ಹೇಳಿದ್ದಾರೆ !
ಉಳಿದಂತೆ ಚಿತ್ರಕ್ಕೆ ಸಂದೀಪ್ ಚೌತಾ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ಚಿತ್ರಕ್ಕೆ ಬಂಡವಾಳ ಹೂಡಿರುವುದು ರುದ್ರಾ ನಂದ್ ಮತ್ತು ಅರುಣ್ ಕುಮಾರ್.
ಇನ್ನು ಚಿತ್ರತಂಡ ಮೊನ್ನೆಯಷ್ಟೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು ,ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ !