25 ವಿದೇಶಿಯರು ಸೇರಿ 70ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ ೫ ರಕ್ಷಣಾ ಸಿಬ್ಬಂದಿ ಪ್ರವಾಹಕ್ಕೆ ಸಿಲುಕಿ ಸಾವು.!

0
107

ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿರುಪಾಪುರ ಗಡ್ಡೆಯಲ್ಲಿ ಸಿಲುಕ್ಕಿದ್ದ 25 ವಿದೇಶಿಯರು ಸೇರಿ 70ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ ರಕ್ಷಣಾ ಸಿಬ್ಬಂದಿ ಬೋಟ್ ಮುಗುಚಿ ಐವರು ಸಿಬ್ಬಂದಿ ಕೊಚ್ಚಿಕೊಂಡು ಹೋಗಿರುವ ದಾರುಣ ಘಟನೆ ನಡೆದಿದೆ. ಬೋಟ್ ನಲ್ಲಿದ್ದ ಮೂವರು ಎನ್ಡಿಎಫ್ ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾಗಿದ್ದರು. 70ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಉಳಿದ ನಿರಾಶ್ರಿತರನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ಬೋಟ್ ಮುಗುಚಿಕೊಂಡಿದೆ.

ಈ ವೇಳೆ ಐವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ 25 ವಿದೇಶಿಯರು ಸೇರಿ 70ಕ್ಕೂ ಜನರು ಸಿಲುಕಿದ್ದರು. ಬೆಳಗಿನಿಂದ ರಕ್ಷಣೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು.

ಇದೀಗ ಮತ್ತೊಂದು ರಕ್ಷಣಾ ತಂಡ ಕೂಡಲೇ ಜಾಗೃತರಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಐವರು ರಕ್ಷಣಾ ಸಿಬ್ಬಂದಿ ಪೈಕಿ ನಾಲ್ವರನ್ನು ರಕ್ಷಿಸಿದ್ದು ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಇನ್ನು ಉಳಿದವರ ರಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ನೀರಿನ ಪ್ರವಾಹಕ್ಕೆ ಸಿಲುಕಿ ಬೋಟ್ ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿತ್ತು. ಮತ್ತಷ್ಟು ಇನ್’ಸ್ಪೈರಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here