ರಿಯಲ್ ಸ್ಟಾರ್ ಸೂಪರ್ ಸ್ಟಾರ್, ಉಪೇಂದ್ರ ಅವರು ಎರಡು ವರ್ಷಗಳ ಬಳಿಕ ‘ಐ ಲವ್ ಯೂ’ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಅಮೆರಿಕದಲ್ಲಿ ಬಿಡುಗಡೆಯಾದ ‘ಐ ಲವ್ ಯೂ’, ಐವತ್ತು ದಿನಗಳತ್ತ ಸಾಗುತ್ತಿದೆ..
ಈ ಯಶಸ್ಸಿನಿಂದ ಸಂತಸಗೊಂಡಿರುವ ಉಪ್ಪಿ ಸದ್ಯ ನವ ನಿರ್ದೇಶಕ ಮೌರ್ಯ ಅವರ “ಬುದ್ಧಿವಂತ – ೨” ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಯಾಗಿದ್ದಾರೆ.. ಇದಾದ ನಂತರ ಉಪ್ಪಿ, ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ !!
ಶಶಾಂಕ್ ಅವರ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಸಿನಿಮಾಗೆ ಚಿತ್ರದ ನಟನಾ ವರ್ಗದ ಆಯ್ಕೆಯಲ್ಲಿ ತೊಡಗಿದ್ದಾರೆ ..
ಈಗಾಗಲೇ ಚಿತ್ರದ ತಯಾರಿಯಲ್ಲಿರುವ ಶಶಾಂಕ್ ರಿಯಲ್ ಸ್ಟಾರ್ ಗೆ ನಾಯಕಿ ಯಾರು ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ !!
ಸದ್ಯ ಪಡ್ಡೆಹುಲಿಯ ನಾಯಕಿ ನಿಶ್ವಿಕಾ ಅವರನ್ನು ಶಶಾಂಕ್ ಸಂಪರ್ಕಿಸಿದ್ದಾರೆ ..
ನಿಶ್ವಿಕಾ ಇದಾಗಲೇ ಕನ್ನಡದ “ವಾಸು ನಾನ್ ಪಕ್ಕಾ ಕಮರ್ಷಿಯಲ್” ಹಾಗೂ “ಅಮ್ಮ ಐ ಲವ್ ಯು” ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸದ್ಯ ನಿಶ್ವಿಕಾ ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮ್ಯಾನ್” ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ, ಉಪೇಂದ್ರ ಅವರೊಂದಿಗೆ, ಶಶಾಂಕ್ ನಿರ್ದೇಶಕರಾಗಿ, ನಿಶ್ವಿಕ ಅವರ ಮೊದಲ ದೊಡ್ಡ ಸ್ಟಾರ್ ನಟನ ಜತೆಗಿನ ಚಿತ್ರ ತೆರೆಗೆ ಬರಲಿದೆ. ಆಗಸ್ಟ್ ನಲ್ಲಿ ಚಿತ್ರದ ಮಹೂರ್ತ ನಡೆಯುವ ನಿರೀಕ್ಷೆ ಇದೆ.ಹಾಗೆಯೇ ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.