ರಾಷ್ಟ್ರೀಯ ಪ್ರಾಣಿ ರಾಷ್ಟ್ರದ ಹೆಮ್ಮೆ ಅಳಿವು ಉಳಿವು ನಮ್ಮ ಕೈಯಲ್ಲಿ.

0
118

ಅಂತರಾಷ್ಟ್ರೀಯ ಹುಲಿ ದಿನ , ಹುಲಿಯ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ವಾರ್ಷಿಕ ಆಚರಣೆಯಾಗಿದೆ. ಜುಲೈ 29ರಂದು ಆಚರಣೆಯಲ್ಲಿರುವ ಜಾಗತಿಕ ಹುಲಿಯ ದಿನವನ್ನು 2010ರಲ್ಲಿ ಸೇಂಟ್ ಪೀಟರ್ಸ್ಬರ್ಗ್ ಶೃಂಗಸಭೆಯಲ್ಲಿ ರಚಿಸಲಾಗಿದೆ. ಹುಲಿಗಳನ್ನು ರಕ್ಷಿಸುವ ಬಗೆಗೆ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು. ಹುಲಿ ರಕ್ಷಣಾ ವಿಷಯಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಬೆಂಬಲ ನೀಡುವುದು ಹುಲಿ ದಿನದ ಗುರಿಯಾಗಿದೆ.
ಮುಖ್ಯವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಒಂದು ಹುಲಿ 3 ಅಡಿ ಉದ್ದ 300 ಕೆಜಿ ತೂಕದ ವರೆಗೂ ತೂಗುತ್ತದೆ. ಒಂಟಿಯಾಗಿ ಜೀವಿಸುವ ಹುಲಿ ಸಿಂಹಗಳಿಗೆ ಸರಿಸಾಟಿ . ಭಾರತದ ಮಟ್ಟಿಗೆ ಬಂಗಾಳದಲ್ಲಿ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ ಹಾಗು ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲಿ 2018ರ ಗಣತಿ ಪ್ರಕಾರ 2600 ಹುಲಿಗಳು ಭಾರತದಲ್ಲಿವೆ .ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಕರ್ನಾಟಕ ಕೇರಳ ತಮಿಳುನಾಡಿನಲ್ಲಿ ಸಂಖ್ಯೆ ಹೆಚ್ಚಿದೆ .
ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. (ನಾಗರಹೊಳೆ ಬಂಡಿಪುರ ದಾಂಡೇಲಿ ಆನ್ಶಿ ಹಾಗೂ ಬಿಆರ್ಟಿ.)

ಹುಲಿಯ ಪ್ರಭೇದಗಳು
ಬಂಗಾಳದ ಹುಲಿ
ಸುಮಾತ್ರ ಹುಲಿ
ಸೈಬೀರಿಯಾ ಹುಲಿ
ಮಲಯಾ ಹುಲಿ
ಇಂಡೋ-ಚೀನಾ ಹುಲಿ.

ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿ ಇರುವ ರಾಜ್ಯಗಳು.
ಕರ್ನಾಟಕ
ಮಧ್ಯಪ್ರದೇಶ
ಉತ್ತರ ಖಂಡ
ಮಹಾರಾಷ್ಟ್ರ

ಹುಲಿಯ ಸಂಖ್ಯೆ
2006 – 3411
2010 – 1726
2014 – 2226
2018 – 2600

ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ : ಅನಿಮೇಲಿಯಾ
ವಂಶ. : ಕಾರ್ಡೇಟಾ
ವರ್ಗ. : ಸಸ್ತನಿ
ಗಣ. : ಕಾರ್ನಿವೋರಾ
ಕುಟುಂಬ. : ಫೆಲಿಡೇ
ಕುಲ. : ಪ್ಯಾಂಥೆರಾ
ಪ್ರಭೇದ. : ಪ್ಯಾಂಥೆರಾ ಟೈಗ್ರಿಸ್.

ಕರ್ನಾಟಕವನ್ನು ಹುಲಿಯ ಸಂತತಿಯಲ್ಲಿ ದೇಶದಲ್ಲಿ ಒಂದನೇ ಸ್ಥಾನದಲ್ಲಿರುವ ರಾಜ್ಯ ಎಂದು ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here