1 ಲಕ್ಷ ರೂ.ಗೆ ಮಗಳನ್ನೇ ಮಾರಾಟ ಮಾಡಿದ ತಾಯಿ

0
338

ಕಳೆದ ವಾರ ದಿಲ್ಲಿಯಲ್ಲಿ ವ್ಯಾಪಾರಿಯೊಬ್ಬನಿಂದ 15 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ. ವಿಚಾರಣೆ ವೇಳೆ ತಾಯಿಯಿಂದಲೇ ಮಾರಾಟವಾಗಿದ್ದಾಳೆ ಎಂದು ತಿಳಿದು ಬಂದಿದೆ. ತಾಯಿಯು ಬಾಲಕಿಯನ್ನು ಒಂದು ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ ಎಂದು ಬಾಲಕಿ ಹೇಳಿದ್ದಾಳೆ. ಹಾಗೂ ಕಳೆದ ತಿಂಗಳು ನನ್ನ ಒಂದು ವರ್ಷದ ತಮ್ಮನನ್ನು ತಾಯಿ ಮಾರಾಟ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಕಳೆದ ವಾರ ಬದಾರ್ಪುರದಲ್ಲಿರುವ ತನ್ನ ಸಂಬಂಧಿಯ ಮನೆಗೆ ಹೋಗುವುದಾಗಿ ತನ್ನ ಮಗಳನ್ನು ಕರೆದೊಯ್ದಿದ್ದ ಮಹಿಳೆ ಬದಾರ್ಪುರದ ಬದಲಿಗೆ ನಿಝಾಮುದ್ದೀನ್‌ನ ಹೊಟೇಲ್‌ಗೆ ಕರೆದೊಯ್ದಿದ್ದಳು.

ನಾನು ತಡವಾಗಿ ಬರುತ್ತೇನೆ ನಿನ್ನನ್ನು ವ್ಯಕ್ತಿಯೊಬ್ಬ ನಿನ್ನ ಮನೆಗೆ ಕರೆದೊಯ್ಯತ್ತಾನೆ ಎಂದು ದಿಲ್ಲಿ ಮಹಿಳೆ ತನ್ನ ಮಗಳಿಗೆ ತಿಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದಳು. ಆ ವ್ಯಕ್ತಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿದ್ದ ಕೆಲವು ಮಹಿಳೆಯರು ನಿನ್ನನ್ನು ನಿನ್ನ ತಾಯಿ 1 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿಸಿದರು. ವಿಷಯ ತಿಳಿದು ಗಾಬರಿಗೊಂಡ ಬಾಲಕಿ ಆ ವ್ಯಕ್ತಿಯಿಂದ ತಪ್ಪಿಕೊಂಡು ಹೊರ ಬಂದಿದ್ದಾಳೆ. ಬವಾನಕ್ಕೆ ತೆರಳಿದ ಬಾಲಕಿ ಸಹಾಯಕ್ಕಾಗಿ ನೆರೆ ಮನೆಯವರ ಮೊರೆ ಹೋಗಿದ್ದು, ಅವರು ದಿಲ್ಲಿಯ ಮಹಿಳಾ ಆಯೋಗಕ್ಕೆ ವಿಷಯ ತಿಳಿಸಿದ್ದಾರೆ ಸದ್ಯ , ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.ತನ್ನ ತಾಯಿ ಸಾಲದಲ್ಲಿ ಮುಳುಗಿದ್ದು, ಹೀಗಾಗಿ ತಮ್ಮನ್ನು ಮಾರಾಟ ಮಾಡಿದ್ದಾಗಿ ಪೊಲೀಸರಿಗೆ ಬಾಲಕಿ ತಿಳಿಸಿದ್ದಾಳೆ.

LEAVE A REPLY

Please enter your comment!
Please enter your name here