ಪೈರಸಿಗೆ ಸಿಲುಕಿ ಮಕಾಡೆ ಮಲಗಿದ ಮೋಸ್ಟ್ ಎಕ್ಸಪೇಕ್ಟಡ್ ಮೂವಿ !

0
217

ಇಡೀ ವಿಶ್ವಾದ್ಯಂತ ಸುಮಾರು ಏಳು ಸಾವಿರ ಪರದೆಗಳಲ್ಲಿ ತೆರೆಕಂಡ ಸಿನಿಮಾ ದಬಾಂಗ್ -3 ಈಗ ಹೊಸ ತಲೆ ನೋವು ಬಂದಿದೆ. ಹೌದು, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ದಬಾಂಗ್-3 ಸಿನಿಮಾ ಕನ್ನಡ ಸೇರಿದಂತೆ 4 ಭಾಷೆಯಲ್ಲಿ ರಿಲೀಸ್ ಆಗಿದೆ. ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ.

 

 

ಈ ಮಧ್ಯೆ ಆನ್ಲೈನ್ ಝಮಾನಾ ಹಿನ್ನೆಲೆ ಲೀಕ್ ಮಾಡುವವರ ಕಣ್ಣು ಬ್ಯಾಡ್ ಬಾಯ್ ದಬಾಂಗ್-3 ಮೇಲೆ ಬಿದ್ದಿದ್ದು, ಮೊದಲ ದಿನವೇ ಆನ್ಲೈನ್ನಲ್ಲಿ ಹರಿಬಿಟ್ಟಿದ್ದು, ಚಿತ್ರತಂಡಕ್ಕೆ ಸಖತ್ ಹೊಡೆತ ಬಿದ್ದಿದೆ.
ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿಗಳ ಮೇಲೆ ಆಲ್ಟೈಮ್ ಕಣ್ಣು ಹಾಕುವ ತಮಿಳು ರಾಕರ್ಸ್, ದಬಾಂಗ್-3ಯನ್ನ ಲೀಕ್ ಯಾವುದೇ ಗುಟ್ಟು ಬಿಡದೇ ಲೀಕ್ ಮಾಡಿದ್ದಾರೆ.

 

 

ಅಂದರೆ ತಮಿಳು ರಾಕರ್ಸ್ ಒಂದೇ ದಬಾಂಗ್-3 ಮೇಲೆ ಕಣ್ಣು ಹಾಕಿಲ್ಲ. ಆನ್ಲೈನ್ ಮೂವೀ ಸೈಟ್ಗಳಾದ 1movies, 123 movies, Fmovies ಹಾಗೂ Filmywap ಸೇರಿದಂತೆ ಪ್ರಮುಖ ವೆಬ್ಸೈಟ್ಗಳು ದಬಾಂಗ್-3 ಹೆಚ್ಡಿ ವರ್ಷನ್ ಲೀಕ್ ಮಾಡಿಬಿಟ್ಟಿದೆ. ಟ್ಟಿಟರ್ ಸೇರಿದಂತೆ ಹಲವು ತಾಣಗಳಲ್ಲಿ ಫ್ರೀ ದಬಾಂಗ್-3 ಡೌನ್ಲೋಡ್ ಹಾಗೂ ದಬಾಂಗ್-3 ಹೆಚ್ಡಿ ಆನ್ಲೈನ್ ಸೇರಿದಂತೆ ಹಲವು ಟ್ಯಾಗ್ಸ್ ಬಳಸಿ, ಸಿನಿಮಾ ಪೈರಸಿ ಮಾಡಲಾಗಿದೆ. ಈ ಪೈರಸಿ ವಿರುದ್ಧ ಹಲವರು ಸಮರ ಸಾರಿ ಕಂಪ್ಲೇಟ್ ಕೊಟ್ರೂ, ಯಾವುದೇ ಪ್ರಯೋಜನವಾಗಿಲ್ಲ.

 

 

ದಬಾಂಗ್-3ಯಲ್ಲಿ ಪಾಂಡೆಯಾಗಿ ಸಲ್ಲು ಬಾಯ್ ಮಿಂಚಿದ್ರೆ, ಬಾಲಿ ಸಿಂಗ್ ಪಾತ್ರದಲ್ಲಿ ಸ್ಯಾಂಡಲ್ವುಡ್ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಸಲ್ಮಾನ್ ಜೊತೆ ಸೋನಾಕ್ಷಿ ಸಿನ್ಹಾ ಸ್ಕ್ರೀನ್ ಶೇರ್ ಮಾಡಿರುವ ದಬಾಂಗ್-3ಗೆ, ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಆಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿಯೂ ದಬಾಂಗ್ ದರ್ಬಾರ್ ಜೋರಾಗಿದ್ದು, ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.

 

 

ದಬಾಂಗ್ -3. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಎಂದು ಕರೆಸಿಕೊಳ್ಳುವ ಸಲ್ಲು ಈ ಬಾರಿ ಕೊಂಚ ಓಪನಿಂಗ್ ಡಲ್ ಹೊಡೆದಿದ್ದಾರೆ. ಒಂದೇ ದಿನಕ್ಕೆ 24 ಕೋಟಿ ಐವತ್ತು ಲಕ್ಷ ಸಂಪಾದಿಸಲಷ್ಟೇ ಶಕ್ತವಾಗಿತ್ತು.

LEAVE A REPLY

Please enter your comment!
Please enter your name here