ಜೀವನದಲ್ಲಿ ಯಾವಾಗ ಏನ್ ಆಗುತ್ತೆ ಹೇಳೋಕೆ ಆಗಲ್ಲ . ವಿಧಿ ಅನ್ನೋದು ನಮ್ಮ ಜೀವನವನ್ನು ಹೇಗೆ ಬೇಕಾದ್ರೂ ಬದಲಾಯಿಸಬಹುದು. ಯಾರನ್ನಾದರೂ ಬಳಿ ತೆಗೆದುಕೊಳ್ಳಬಹುದು. ಒಬ್ಬ ಒಳ್ಳೆ ಮನಸಿರೋ ಮಹಿಳೆಯರಲ್ಲಿ ಲಿನಿ ಕೂಡ ಒಬ್ಬಳು. ಈಕೆ 31 ವರ್ಷದ ಮಹಿಳೆ ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು.
ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾಗಿ ಅಲ್ಲಿನ ಸರ್ಕಾರವೇ ನಡುಗಿ ಹೋಗಿತ್ತು. ಲಿನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ಇವರು ನಿಫಾ ವೈರಸ್ ನಿಂದ ಬಳಲುತ್ತಿದ್ದ ರೋಗಿಗಳ ಶುಶ್ರುಷೆ ಮಾಡುತ್ತಿದ್ದರು. ದುರದೃಷ್ಟಕರ ಏನಂದ್ರೆ ಈಕೆಗೂ ಕೂಡ ನಿಫಾ ವೈರಸ್ ತಗುಲಿತು . ತಾನು ಸಾಯುತ್ತೇನೆಂದು ತಿಳಿದ ಮೇಲೆ ಲಿನಿ ತನ್ನ ಗಂಡನಿಗೊಂದು ಪತ್ರ ಬರೆದಳು. ಹಾಗೂ ಆಸ್ಪತ್ರೆ ಸಿಬ್ಬಂದಿಗೆ “ನಾನು ಸತ್ತ ನಂತರ ನನ್ನ ಕುಟುಂಬದವರು ಇಲ್ಲಿಗೆ ಬರುವ ಮೊದಲು ನನ್ನ ದೇಹವನ್ನು ಸುಟ್ಟು ಹಾಕಿ ಏಕೆಂದರೆ, ನನ್ನ ಕುಟುಂಬದವರಿಗೂ ಈ ವೈರಸ್ ತಗುಲಬಹುದು” ಎಂದು ಹೇಳಿದ್ದಳು. ಹಾಗೂ ತನ್ನ ಗಂಡನಿಗೊಂದು ಪತ್ರ ಬರೆದಿದ್ದಳು ಆ ಪತ್ರ ಈಗ ವೈರಲ್ ಆಗಿದೆ.
ಅದರಲ್ಲಿ ” ನಾನು ಇನ್ನು ಕೆಲವೇ ಗಂಟೆಗಳಲ್ಲಿ ಸಾಯುತ್ತೇನೆ. ಇದು ಎಷ್ಟು ವಿಚಿತ್ರ ಎಂದರೆ, ನಸ್ನು ನಿಮ್ಮನ್ನು ಕೊನೆ ಬಾರಿ ನೋಡಬೇಕೆಂದಿದ್ದೆ ಆದರೆ ಈ ಕಾಯಿಲೆ ನನ್ನನ್ನು ನಿಮ್ಮನ್ನು ನೋಡಲು ಬಿಡುತ್ತಿಲ್ಲ.
ಒಂದು ವೇಳೆ ನಾನು ನಿಮ್ಮನ್ನು ನೋಡಬೇಕೆಂದು ಪ್ರಯತ್ನಿಸಿದರೆ, ನಿಮಗೂ ಕೂಡ ಆ ವೈರಸ್ ತಗುಲಬಹುದೆಂಬ ಭಯ.

ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಅವರನ್ನು ದುಬೈ ಗೆ ಕರೆದುಕೊಂಡು ಹೋಗಿ. ನಾನು ಪ್ರತಿದಿನ ಆಸ್ಪತ್ರೆಗೆ ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳುತ್ತಿದ್ದೆ ಆದರೆ ಈಗ ನಾನು ಹಿಂದಿರುಗಿ ಬರುವುದಿಲ್ಲ ಎಂದು ಹೇಳುವುದು ನೋವಾಗುತ್ತದೆ. ಲಿನಿ ದೇಹವನ್ನು ಆಸ್ಪತ್ರೆಯ ರೆಮೋಟೋರಿಯಮ್ ಉಪಯೋಗಿಸಿ ಶರೀರವನ್ನು ಭಸ್ಮ ಮಾಡಿದರು. ದುರದೃಷ್ಟದಿಂದ ಸಾವನ್ನಪ್ಪಿದ ಲಿನಿ ತನ್ನ ಕುಟುಂಬಕ್ಕಾಗಿ ಮಾಡಿದ ತ್ಯಾಗ ಕೇಳಿ ಅವರಿಗೊಂದು ಸಲ್ಯೂಟ್ ಹೊಡೆಯಲೇಬೇಕು. ಆದರೆ ನಿಜವಾದ ಪ್ರೀತಿ ಸತ್ತ ನಂತರವು ಜೀವಂತವಾಗಿರುತ್ತದೆ ಎನ್ನುವುದು ಲಿನಿಯಿಂದ ನಿಜವಾಗಿದೆ.