NRC ವೆಂಬ ಕೋಮುವಾದದಿಂದ ದೇಶದ ಆರ್ಥಿಕತೆಗೆ ಬೀಳುವ ಪರಿಣಾಮ!

0
142

ವಿಶೇಷ ಲೇಖನ;-ಅಬ್ದುಲ್ ರಝಾಕ್ ಮರ್ಧಾಳ

NRC ಅಥಾವ National Register of Citizens ಕಾನೂನು ಮೊಟ್ಟಮೊದಲ ಬಾರಿಗೆ 1951ರಲ್ಲಿ ಅಸ್ಸಾಂನಲ್ಲಿ NRC ನೊಂದಾವಣೆ ಮಾಡಬೇಕು ಎಂದು ಸ್ಥಳೀಯರು ಪ್ರತಿಭಟನೆ ಮಾಡಿದಾಗ ಅಸ್ಸಾಂ ರಾಜ್ಯ ಸರಕಾರ NRC ಯನ್ನು ಮೊದಲ ಬಾರಿಗೆ ಜಾರಿಗೆ ತರಲು ಯತ್ನಿಸಿತು ಆದರೆ ಅದು ವಿಫಲವಾಯಿತು. 2019ರಲ್ಲಿ BJP ಸರ್ಕಾರ ಈ ಮಸೂದೆಯನ್ನು ಜಾರಿಗೆ ತರಲು ಪ್ರಮುಖವಾಗಿ ಎರಡು ಕಾರಣಗಳಿವೆ.
1) 1947 ರಲ್ಲಿ ಪಾಕಿಸ್ತಾನ ಭಾರತದಿಂದ ವಿಭಜನೆಯಾದಾಗ ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ಜನರು ಭಾರತದ ಅಸ್ಸಾಂ ಕಡೆ ಅಕ್ರಮವಾಗಿ ವಲಸೆ ಬಂದದ್ದು ಒಂದು ಕಾರಣವಾದರೆ.

2)ಇನ್ನೊಂದು ಕಾರಣ 1971ರಲ್ಲಿ ಪೂರ್ವ ಪಾಕಿಸ್ತಾನಕ್ಕೂ ಪಶ್ಚಿಮ ಪಾಕಿಸ್ತಾನಕ್ಕೂ ಅಧಿಕಾರ ಹಂಚಿಕೆ ವಿಚಾರವಾಗಿ ಅಂತರ್ ಕಲಹ ಏರ್ಪಟ್ಟಾಗ ಪಶ್ಚಿಮ ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಆಗ ಪೂರ್ವ ಪಾಕಿಸ್ತಾನದವರು ನಾವು ಪಾಕಿಸ್ತಾನದಲ್ಲಿ ಇನ್ನು ಮುಂದೆ ಇರುವುದಿಲ್ಲ ನಮಗೆ ಪ್ರತ್ಯೇಕ ರಾಷ್ಟ್ರ ನೀಡಿ ಎಂದು ಪ್ರತಿಭಟಿಸಿದಾಗ ಅಧಿಕಾರದ ಚುಕ್ಕಾಣಿ ಹಿಡಿದಂತಹ ಪಶ್ಚಿಮ ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಜನರ ಮೇಲೆ ದೌರ್ಜನ್ಯ ,ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆ.

 

ಈ ಸಂದರ್ಭದಲ್ಲಿ ಸಂತ್ರಸ್ತರಾದಂತಹ ಲಕ್ಷಾಂತರ ಪೂರ್ವ ಪಾಕಿಸ್ತಾನದವರು ಅಸ್ಸಾಂ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶಿಸುತ್ತಾರೆ. ಆಗ ಅಸ್ಸಾಂ ಗಡಿ ಪ್ರದೇಶಕ್ಕೆ ಅಂದಿನ ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಭೇಟಿ ಮಾಡಿದಾಗ ಪಶ್ಚಿಮ ಪಾಕಿಸ್ತಾನ ಪೂರ್ವ ಪಾಕಿಸ್ತಾನದ ಮೇಲಿನ ದಬ್ಬಾಳಿಕೆಯನ್ನು ಮನಗಂಡು ಪಾಕಿಸ್ತಾನದ ವಿರುದ್ಧ ಯುದ್ದವನ್ನು ಘೋಷಣೆ ಮಾಡಿ ಪೂರ್ವ ಪಾಕಿಸ್ತಾನದವರಿಗೆ ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರವನ್ನು ಸೃಷ್ಟಿಮಾಡಿ ಲೋಕಸಭೆಯಲ್ಲಿ ಮಾನ್ಯತೆ ಕೊಟ್ಟು ಬಾಂಗ್ಲಾ-ಭಾರತದ ಗಡಿಯನ್ನು ನಿರ್ಧಾರ ಮಾಡುತ್ತಾರೆ.ಈ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನ ದಿಂದ ಬಂದಂತಹ ಕೆಲವು ಹಿಂದೂ-ಮುಸ್ಲಿಂ ನಿರಾಶ್ರಿತರು ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರಕ್ಕೆ ತೆರಳದೇ ಭಾರತದಲ್ಲಿ ಅಕ್ರಮವಾಗಿ ಉಳಿದುಕೊಳ್ಳುತ್ತಾರೆ.

ಈ ಮೇಲಿನ ಎರಡು ಸಂದರ್ಭದಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸಂತ್ರಸ್ಥರ ಪೀಳಿಗೆಯವರನ್ನು ಭಾರತ ದೇಶದಿಂದ ಹೊರಗೆ ಹಾಕಲು ತಂದಿರುವ ಕಾನೂನಾಗಿದೆ NRC!

 

NRC ಕಾನೂನಿನ ಪ್ರಕಾರ ಪ್ರತಿ ಒಬ್ಬ ನಾಗರೀಕರು ತಾವು ಈ ದೇಶದ ಪ್ರಜೆಗಳು ಎಂದು ನಿರೂಪಿಸಲು ಸರ್ಕಾರಕ್ಕೆ 1971 ಕ್ಕಿಂತ ಮೊದಲು ಈ ದೇಶದಲ್ಲಿ ವಾಸಿಸುತ್ತಿದ್ದಿವಿ ಎಂಬುವುದಕ್ಕೆ ಈ ಕೆಳಗಿನ ಆರು ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಗಳನ್ನು ನೀಡಬೇಕು.

(1) 1951ರಲ್ಲಿ ನಡೆದ ಜನಗಣತಿ (census)ಯಲ್ಲಿ
ನಿಮ್ಮ ಪೂರ್ವಜರ ಹೆಸರಿರುವ ದಾಖಲೆ.
(2)1971 ಮಾರ್ಚ್ ತಿಂಗಳ 24-ನೇ ತಾರೀಖಿನ ಮತ ಪಟ್ಟಿ (voter list)ಯಲ್ಲಿ ನಿಮ್ಮ ಪೂರ್ವಜರ ಹೆಸರಿರುವ ದಾಖಲೆ.
(3)1971 ಮುಂಚೆ ಸರ್ಕಾರಿ ನೌಕರಿಯಲ್ಲಿ ನಿಮ್ಮ ಪೂರ್ವಜರು ಸೆವೆ ಮಾಡಿರುವ ದಾಖಲೆ.
(4) 1971 ಕ್ಕೆ ಮುಂಚೆ ನಿಮ್ಮ ಪೂರ್ವಜರು ನೊಂದಣಿ ಮಾಡಿರುವ ಭೂ ದಾಖಲಾತಿ.
(5) 1971 ಕ್ಕೆ ಮುಂಚೆ ಬೇಂಕು ಅಥವಾ ತಪಾಲು ವ್ಯವಹಾರದ ಏನಾದರು ದಾಖಲಾತಿ.
(6) 1971 ಕ್ಕೆ ಮುಂಚೆ ದಾಖಲಾದ ಸ್ಕೂಲ್ ಪ್ರಮಾಣ ಪತ್ರ.
ಈ ಮೇಲಿನ ಆರು ದಾಖಲೆಗಳಲ್ಲಿ ಯಾವುದಾದರೂ ಒಂದು
ದಾಖಲೆ ನೀಡದ ಭಾರತದ ನಾಗರಿಕರನ್ನು ಭಾರತದ ನಾಗರಿಕರಲ್ಲ ಎಂದು ಬಿಂಬಿಸಿ Detention centre ವೆಂಬ ಜೈಲಿನಲ್ಲಿ ಬಂಧಿಸಿ ಇಡಬೇಕು ಎನ್ನುವ ಮೂರ್ಖತನದ ಕಾನೂನಾಗಿದೆ NRC!

 

ಹೌದು, ಇದನ್ನು ಮೂರ್ಖತನವೆನ್ನಲು ಕಾರಣವಿದೆ ಯಾಕೆಂದರೆ 6 ವರ್ಷದ ಹಿಂದೆ NRCಯನ್ನು ಅಸ್ಸಾಂ ರಾಜ್ಯದಲ್ಲಿ ಜಾರಿಗೆ ತರುತ್ತಾರೆ ಸುಮಾರು 3.9 ಕೋಟಿ ಜನರ ನಾಗರಿಕತೆ ಪ್ರಕ್ರಿಯೆ ಸುಮಾರು 1500ಕೋಟಿ ವೆಚ್ಚದಲ್ಲಿ 6 ವರ್ಷಗಳ ಕಾಲ ನಡೆಯಿತು. 50ಲಕ್ಷ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿದ ಪರಿಣಾಮ ಸುಮಾರು 12ಲಕ್ಷ ಹಿಂದೂ ಹಾಗೂ 6ಲಕ್ಷ ಮುಸ್ಲಿಂ ಅಸ್ಸಾಂ ನಾಗರೀಕರ ಬಳಿ ದಾಖಲೆ ಇಲ್ಲದ ಕಾರಣ ಅವರನ್ನು ಬಂದಿಸಿ Detention centre ನಲ್ಲಿ ಇಡಲಾಯಿತು ಎಂದು ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ವರದಿ ನೀಡಿದೆ. ಈಗ ಕೇಂದ್ರ ಸರ್ಕಾರ ಈ NRC ಸರಿ ಇಲ್ಲಾ ಎಂದು ಮತ್ತೊಮ್ಮೆ ಇದನ್ನು ಅಸ್ಸಾಂ ನಲ್ಲಿ ಜಾರಿಗೊಳಿಸಲು ಮುಂದಾಗಿದೆ ಅಂದರೆ 1500ಕೋಟಿ ಬೊಕ್ಕಸಕ್ಕ ನಷ್ಟ ಹಾಗೂ 50 ಲಕ್ಷ ಸರ್ಕಾರಿ ನೌಕರರ ಶ್ರಮ ಎಲ್ಲವೂ ವ್ಯರ್ಥವಾಯಿತು ಎಂದರ್ಥ!

ಈಗ ಈ NRC ಯನ್ನು ಇಡೀ ದೇಶದಲ್ಲಿ ಜಾರಿ ಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಒಂದು ಅಸ್ಸಾಂ ರಾಜ್ಯದಲ್ಲಿ 3.9 ಕೋಟಿ ನಾಗರೀಕರ ದಾಖಲೆ ಪರೀಕ್ಷೆ ಮಾಡಲು 50ಲಕ್ಷ ಸರ್ಕಾರಿ ನೌಕರರು 6ವರ್ಷ ಕೆಲಸ ಮಾಡಿ ರೂ.1500 ಕೋಟಿ ವೆಚ್ಚ ತಗುಲಿ ಎಲ್ಲವೂ ವ್ಯರ್ಥವಾಯಿತು ಎಂದಾದರೆ ಇನ್ನೂ ಇಡೀ ಭಾರತದ 130ಕೋಟಿ ಜನರ(NRC) ನಾಗರಿಕತ್ವದ ದಾಖಲೆ ಪರಿಶೀಲಿಸಲು ಸುಮಾರು 1,50,000ಸಾವಿರ ಕೋಟಿ ರೂಪಾಯಿ ಖರ್ಚು ಹಾಗೂ ಸುಮಾರು 15ಕೋಟಿ ಸರ್ಕಾರಿ ಕೆಲಸಗಾರರು ಅವಶ್ಯಕತೆ ಇದೆ ಇಷ್ಟು ಹಣ ,ನೌಕರರು ಹಾಗೂ ಕನಿಷ್ಠ 10 ವರ್ಷಗಳೆ ಇಡೀ ಭಾರತದ NRC ಪ್ರಕ್ರಿಯೆಗೆ ಬೇಕಾಗಬಹುದು.ಇದರಿಂದ ನಮ್ಮ ದೇಶದ ಆರ್ಥಿಕತೆಗೆ ಬೀಳುವ ಹೊಡೆತ ಉಹಿಸಲು ಸಾಧ್ಯವಿಲ್ಲ.

 

ಮೇಲೆ ಕೊಟ್ಟಿರುವಂತಹ ದಾಖಲೆ ಇಲ್ಲದ ಹಿಂದೂ, ಸಿಕ್ ,ಪ್ಯಾರಿಸ್, ಬುದ್ದಿಸ್ಟ್ ,ಕ್ರಿಶ್ಚಿಯನ್ ಮತ್ತು ಜೈನರನ್ನು ಅಂದರೆ ಮುಸ್ಲಿಂರನ್ನು ಹೊರತುಪಡಿಸಿ ಇತರ ಎಲ್ಲಾ ಧರ್ಮದವರನ್ನು CAB (Citizenship Amendment Bill) ಅನ್ನುವ ಹೊಸ ಬಿಲ್ ಮೂಲಕ ಮೂಲಕ ಪೌರತ್ವನ್ನು ನೀಡಿ 20ಕೋಟಿ ಮುಸ್ಲಿಂರನ್ನು ಜೈಲಿಗಟ್ಟುವ ಕೋಮುವಾದದ ಹುನ್ನರಾವಾಗಿದೆ ಈ NRC!

NRC ಹೆಸರಿನಲ್ಲಿ 20ಕೋಟಿ ಮುಸ್ಲಿಂರನ್ನು ಜೈಲಿಗಟ್ಟಲು ಕೇಂದ್ರ ಸರ್ಕಾರ ಯೋಚನೆ ಮಾಡಿದ್ದಿದ್ದರೆ ಜೈಲುಗಳ ನಿರ್ಮಾಣ ಕೇಂದ್ರ ಸರ್ಕಾರ ಮಾಡಬೇಕು, ನಂತರ ಆ ಜೈಲುಗಳಲ್ಲಿ ಇರುವ 20ಕೋಟಿ ಜನರಿಗೆ ಬೇಕಾದ ಆಹಾರ- ನೀರು ಇತ್ಯಾದಿಗಳಿಗೆ ಬೇಕಾದ ಸಾವಿರಾರು ಕೋಟಿ ರೂಪಾಯಿ ಖರ್ಚು. ಅವರನ್ನು ಜೈಲಿನಲ್ಲಿ ಕಾಯಲು ಬೇಕಾದ ಪೋಲಿಸರ ವ್ಯವಸ್ಥೆ ಈ ಎಲ್ಲಾ ವೆಚ್ಚವನ್ನು ಸರ್ಕಾರವೇ ನೀಡಬೇಕು.
ಒಂದು ವೇಳೆ ಅಸ್ಸಾಂನಲ್ಲಿ ಅದ ರೀತಿ NRC ಲೆಕ್ಕ ಸರಿ ಇಲ್ಲಾ ಎಂದಾದರೇ 150000ಸಾವಿರ ಕೋಟಿ ಮತ್ತು 15 ಕೋಟಿ ಸರ್ಕಾರಿ ನೌಕರರ ಶ್ರಮ ಎಲ್ಲಾವೂ ವ್ಯರ್ಥ!

 

NRCಯನ್ನು ಕೋಮುವಾದದ ಉದ್ದೇಶದಿಂದ ಜಾರಿಗೆ ತಂದರೆ ಮುಸ್ಲಿಂರು ಮಾತ್ರವಲ್ಲದೆ ದಲಿತರು ,ಹಿಂದುಳಿದ ವರ್ಗದವರು ,ಬಡ ಹಿಂದೂಗಳು ಈಗೇ ಎಲ್ಲಾ ವರ್ಗದವರು ಮೇಲಿನ ಆರು ದಾಖಲೆಗಳಲ್ಲಿ ಯಾವುದನ್ನು ನೀಡಲಾಗದೆ ಕೇಂದ್ರ ಸರ್ಕಾರದ ವಿರುದ್ಧ ದಂಗೆ ಎದ್ಧು ಭಾರತ ದೇಶ ಸರ್ವ ನಾಶವಾಗಿ ಇತಿಹಾಸದ ಪುಟಗಳಲ್ಲಿ ಅಮರವಾಗುವುದಲ್ಲಿ ಸಂಶಯವಿಲ್ಲ!

ವಿಶೇಷ ಲೇಖನ:-ಅಬ್ದುಲ್ ರಝಾಕ್ ಮರ್ಧಾಳ

LEAVE A REPLY

Please enter your comment!
Please enter your name here