ನದಿಯ ನೀರನ್ನು ಭೂಮಿಯೊಳಗೆ ಭದ್ರಗೊಳಿಸಿದ ಸರ್ಕಾರ..!

0
129

ಎಲ್ಲೆಲ್ಲೂ ಪ್ರವಾಹ ನೀರಿನ ಭಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ಭೀಕರ ಬರ ಪರಿಸ್ಥಿತಿಯಿಂದ ನೀರೇ ಸಿಗದೇ ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ನೀರಿನ ಮಹಾಪ್ರವಾಹಕ್ಕೆ ನಲುಗಿದ ಜನ ನದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರವಾಹಗಳು ಜನರನ್ನು ಎಡಬಿಡದೆ ಕಾಡುತ್ತಿದೆ, ಈ ನೀರನ್ನು ಹಿಡಿದಿಟ್ಟುಕೊಳ್ಳು ಕಟ್ಟಿದ ಡ್ಯಾಮ್‍ಗಳು ತುಂಬಿಹೋಗಿವೆ ಈ ಅಘಾದ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಂಡರೆ ಮುಂದಿನ ದಿನಗಳಿಗೂ ಮುಖ್ಯವಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು ಎಂಬುದು ಈ ಸರ್ಕಾರದ ಮಹಾಯೋಚನೆ.

ತನ್ನ ನೀರಾವರಿ ಯೋಜನೆಗಳಿಂದಲೇ ಖ್ಯಾತಿ ಪಡೆದಿರುವ ತೆಲಂಗಾಣ ಈಗ ಮಹಾಯೋಜನೆಯ ಮೂಲಕ ಮತ್ತೆ ಸುದ್ದಿಮಾಡಿದೆ. ಅದು ಕಾಳೇಶ್ವರಂನಲ್ಲಿ ನಡೆಸಿರುವ ಚಕಿತ ಸಾಹಸ. ಕಾಳೇಶ್ವರಂನ ಲಕ್ಷ್ಮೇಪುರಂ ಬಳಿಯಲ್ಲಿ ಭೂಮಿಯ ಮೇಲ್ಪದರದಿಂದ ಸುಮಾರು 470 ಅಡಿಗಳ ಆಳದಲ್ಲಿ ನೀರಿನ ಸಂಗ್ರಹಕ್ಕೆ ಯೋಜನೆ ರೂಪಿಸಿ ಆರಂಭಿಕ ಪ್ರಯತ್ನ ಸಫಲವಾಗಿದೆ.

ತೆಲಂಗಾಣದಲ್ಲಿ ಹರಿಯುವ ಪ್ರಮುಖ ನದಿ ಗೋದಾವರಿಯ ಪ್ರವಾಹದ ನೀರನ್ನು ಭೂತಳದಲ್ಲಿ ಸಂಗ್ರಹಿಸಿಟ್ಟು, ನಂತರ ನೀರನ್ನು ಪಂಪ್‍ಗಳ ಮುಖಾಂತರ ಮೇಲಕ್ಕೆ ಹರಿಸಿ 1832 ಕಿ.ಮೀ ಉದ್ದದ ನಾಲೆಗಳ ಮೂಲಕ ರಾಜ್ಯದ ಬೇಸಾಯ ಚಟುವಟಿಕೆಗೆ ನೀರೊದಗಿಸುವ ಮತ್ತು ಹಲವು ಭಾಗಗಳಲ್ಲಿನ ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ಯೋಜನೆ ಕೈಗೂಡಿದೆ. ತೆಲಂಗಾಣ ರಾಜ್ಯ ಈ ಯೋಜನೆಗೆ ಬರೋಬ್ಬರಿ 80,000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.

ಹಳ್ಳದ ಕಡೆ ನೀಓರು ಹರಿಯುವುದು ಸಹಜ ಮತ್ತು ಇದು ನಿಸರ್ಗದ ನಿಯಮ ಆದರೆ ತೆಲಂಗಾಣದಲ್ಲಿ ಇಂಜಿನಿಯರ್‍ಗಳು ತಮ್ಮ ಕೌಶಲದ ಮೂಲಕ 450 ಅಡಿ ನೀರಿನಲ್ಲಿ ನದಿಯ ನೀರನ್ನು ರಕ್ಷಿಸಿ ಮತ್ತೆ ಅದನ್ನು ಬೇಕಾದಾಗ ಮೇಲಕ್ಕೆತ್ತಿ ಬಳಸಿಕೊಳ್ಳುವ ಯೋಜನೆ ಕೈಗೊಂಡು ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಕೊನೆಗಾಣಿಸಲು ಮುಂದಾಗಿರುವುದು ಅಚ್ಚರಿಯ ವಿಚಾರವಾಗಿದೆ.

LEAVE A REPLY

Please enter your comment!
Please enter your name here