ಜಗತ್ತಿನ ಯಾವುದೇ ಹಣ್ಣಿನಲ್ಲಿರಲಾರದಷ್ಟು ಪೋಷಕಾಂಶಗಳು ಈ ಹಣ್ಣಿನಲ್ಲಿವೆ..!

0
730

ಜಗತ್ತಿನ ಪ್ರತಿಯೊಂದು ಭೂಭಾಗದಲ್ಲಿಯೂ ವಿಶಿಷ್ಟ ಪ್ರಭೇದದ ಹಣ್ಣುಗಳು ಬೆಳೆಯುತ್ತವೆ. ಪ್ರತಿಯೊಂದು ಹಣ್ಣು ಕೂಡಾ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ರೆ ಜಗತ್ತಿನಲ್ಲೇ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣಿನ ಮೂಲ ಭಾರತ ಎಂದರೆ ನೀವು ನಂಬಲೇ ಬೇಕು.

ಹೌದು, ಭಾರತೀಯ ಕಡಲ ತೀರಗಳಲ್ಲಿ ಹೆರಳವಾಗಿ ಬೆಳೆಯುವ ನೋನಿ ಹಣ್ಣು ಜಗತ್ತಿನಲ್ಲೇ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ಹೆಗ್ಗಳಿಕೆ ಗಳಿಸಿದೆ. ಇನ್ನು ‘ನೋನಿ’ ಎಂಬ ಈ ಹೆಸರು ಬಂದಿದ್ದು ಹವಾಯಿ ಆದಿವಾಸಿಗಳಿಂದ. ನೋನಿಯ ವೈಜ್ಞಾನಿಕ ಹೆಸರು ಮೊರಿಂಡಾ ಸಿಟ್ರಿಫೋಲಿಯಾ ರುಬಿಯೇಸಿಯ ಸಸ್ಯ ವರ್ಗಕ್ಕೆ ಸೇರಿದ ಗಿಡವಾಗಿದೆ. ನೋನಿಯ ಎಲೆ ನೋವು ನಿವಾರಕ ಗುಣ ಹೊಂದಿರುವುದರಿಂದ ಕೆಲವು ದೇಶಗಳಲ್ಲಿ ಇದನ್ನು ‘ಪೆಯಿನ್ ಕಿಲ್ಲಿಂಗ್ ಟ್ರೀ’ ಎಂದು ಕರೆಯುತ್ತಾರೆ. ಇದರ ಕಾಯಿ ಹಣ್ಣಾದಾಗ ಬೆಣ್ಣೆಯಂತೆ ಮೆತ್ತಗಿರುವುದರಿಂದ ‘ಛೀಸ್ ಫ್ರೂಟ್’ ಎಂತಲೂ ಕರೆಯುತ್ತಾರೆ. ಇನ್ನು ಸಂಸ್ಕøತದಲ್ಲಿ ಇದನ್ನು ‘ಅಚ್ಚುಕ ಫಲ’, ‘ಆಯುಷ್ಕ’ಎಂತಲು, ಬೇರೆ ಬೇರೆ ಭಾಷೆಗಳಲ್ಲಿ ‘ತಗಟೆಮರ’, ‘ಕಂಬಲ ಪಂಡು’, ‘ವೆನ್ನುವ’, ‘ಬತುರ್ಂಡಿ’ ಹೀಗೆ ನಾನಾ ಹೆಸರುಗಳಿಂದ ಮೂಲಿಕಾ ಪಂಡಿತರಿಂದ ಪರಿಚಿತವಾಗಿದೆ.

ಇನ್ನು ಕ್ರಿಸ್ತ ಹುಟ್ಟುವ ಹಲವು ಶತಮಾನಗಳ ಹಿಂದೆಯೇ ಪಾಲಿನೇಷಿಯನ್ ಆದಿವಾಸಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನೋನಿಯನ್ನು ಬಳಸುತ್ತಿದ್ದ ಉದಾಹರಣೆಗಳಿವೆ. ನಾವು ತುಳಸಿಗಿಡಕ್ಕೆ ಎಷ್ಟು ಪಾವಿತ್ರ್ಯವನ್ನು ಕೊಟ್ಟಿದ್ದೇವೆಯೊ, ಅವರು ಅಷ್ಟೇ ಪಾವಿತ್ರ್ಯವನ್ನು ಆದಿವಾಸಿಗಳು ನೋನಿ ಗಿಡಕ್ಕೆ ಕೊಟ್ಟಿದ್ದರು.

ಇನ್ನು ಅಚ್ಚರಿ ಎಂದರೆ ಮನುಷ್ಯ ಮತ್ತು ಪ್ರಾಣಿಗಳಿಗೆ ಬರುವ ಅನೇಕ ರೋಗಗಳನ್ನು ವಾಸಿಮಾಡುವ ಅದ್ಬುತ ಸಸ್ಯ ರಾಸಾಯನಿಕಗಳು ನೋನಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಖನಿಜಾಂಶಗಳು, ಅಮೈನೋ ಆಮ್ಲಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‍ಗಳು, ಜೀವ ರಾಸಾಯನಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ಪ್ಲೇವನಾಯ್ಡ್ಸ್, ಇರಿಡಾಡೈ, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್ಸ್, ಸ್ಕೋಪೊಲಿಟಿನ್, ಬಿಟಾ ಸಿಸ್ಟಾಲ್, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ, ನೋವು ಬಾವುಗಳನ್ನು ಕಡಿಮೆ ಮಾಡಬಲ್ಲ ಅನೇಕ ಸಸ್ಯ ರಾಸಾಯನಿಕ ಘಟಕಗಳು. ನೆಲ್ಸನ್ ಮತ್ತು ಇಲ್ವಿಚ್ ರವರುಗಳು ನೊನಿ ಗಿಡವನ್ನು ಒಂದು ಬದುಕಿರುವ ಜೀವ ರಾಸಾಯನಿಕ ಕಾರ್ಖಾನೆ ಎಂದು ಕರೆದಿದ್ದಾರೆ. ಜಗತ್ತಿನ ಯಾವುದೇ ದವಸ-ಧಾನ್ಯ, ಹಣ್ಣು-ತರಕಾರಿಗಳಲ್ಲಿ ಇರಲಾರದಷ್ಟು ಪೋಷಕಾಂಶಗಳನ್ನು ವಿಜ್ಞಾನಿಗಳು ಇದರಲ್ಲಿ ಕಂಡು ಹಿಡಿದಿದ್ದಾರೆ.

ಈ ಹಣ್ಣಿನ ಕುರಿತು ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳು ಕೂಡಾ ಸಂಶೋಧನೆ ನಡೆಸಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ನೋನಿಯ ಬಳಕೆ ಹೆಚ್ಚಿದೆ. ಆದರೆ ಭಾರತದಲ್ಲಿ ಮಾತ್ರ ಇನ್ನೂ ನೋನಿ ಹಣ್ಣಿನ ಬಳಕೆ ಪರಿಪೂರ್ಣವಾಗಿ ಆಗುತ್ತಿಲ್ಲ. ನೈಸರ್ಗಿಕವಾಗಿ ಸಿಗುವ ಈ ಹಣ್ಣಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಔಷಧಿಯ ರೂಪ ನೀಡಲಾಗಿದೆ. ನೋನಿ ಹಣ್ಣಿನ ಔಷಧಿಗಾಗಿ ಕರ್ನಾಟಕದ ಶಿವಮೊಗ್ಗದ ಶ್ರೀನಿವಾಸಮೂರ್ತಿ ಮತ್ತು ಅಂಬುಜಾಕ್ಷಿ ದಂಪತಿ ಈಗ ತಮ್ಮದೇ ಆದ ಒಂದು ಸಣ್ಣ ಔಷಧ ಕಾರ್ಖಾನೆಯನ್ನು ಆರಂಭಿಸಿದ್ದಾರೆ. ‘ವ್ಯಾಲ್ಯೂ ಪ್ರಾಡಕ್ಟ್ಸ್’ ಹೆಸರಿನಲ್ಲಿ ‘ಅಮೃತ್ ನೋನಿ’ಯನ್ನು ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here