ಪ್ರಖ್ಯಾತ ಹಂಪಿ ಜಗತ್ತಿನಲ್ಲೇ ೨ನೇ ಮಹತ್ವದ ಪ್ರೇಕ್ಷಣೀಯ ಸ್ಥಳ..!

0
106

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಭಾರೀ ಪ್ರಸಿದ್ಧಿ ಪಡೆದುಕೊಂಡಿದ್ದ ಹಂಪಿ ಅಂದಿಗೂ, ಎಂದೆಂದಿಗೂ ಶ್ರೇಷ್ಠವಾದ ಪ್ರೇಕ್ಷಣೀಯ ಸ್ಥಳ ಎಂದೇ ಹೇಳಬಹುದು. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಗೆ ವಿಶ್ವ ಮಾನ್ಯತೆ ಸಿಕ್ಕಿದ್ದು, ವಿಶ್ವದ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಂಪಿಗೆ ಎರಡನೇ ಸ್ಥಾನ ಲಭಿಸಿದೆ.ಜಗತ್ತಿನಲ್ಲೇ ಅದ್ಭುತವಾದ ಕಲಾ ವೈಭವ ಮತ್ತು ಪರಂಪರೆಯನ್ನು ಹೊಂದಿರುವ ಹಂಪಿ ಪ್ರವಾಸೋದ್ಯಮ ಮಾಡುವವರು ನೋಡಲೇಬೇಕಾದ ಸ್ಥಳ ಎಂದು ಪ್ರತಿಷ್ಠಿತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಈ ಹಿಂದೆಯೇ ಗುರುತಿಸಿತ್ತು.

ಜನವರಿ ೨೦೧೯ ರಲ್ಲಿ ಹಂಪಿ ಯಾಕೆ ಜಗತ್ತಿನ ಎರಡನೇ ಮಹತ್ವದ ಪ್ರೇಕ್ಷಣೀಯ ಸ್ಥಳ ಹಾಗೂ ಜಗತ್ತಿನಲ್ಲಿ ವೀಕ್ಷಿಸಬಹುದಾದ ೫೨ನೇ ಅದ್ಭುತ ಪ್ರವಾಸಿ ತಾಣಗಳಲ್ಲಿ ಹಂಪಿಗೆ ಎರಡನೇ ಸ್ಥಾನ ಪಡೆಯಲು ಕಾರಣ ಏನು ಎಂಬುದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ೫೨ ಅದ್ಭುತ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಭಾರತೀಯ ಏಕೈಕ ಸ್ಥಳ ಎಂಬುದು ಹೆಮ್ಮೆಯ ವಿಷಯವೂ ಹೌದು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ವಿಶ್ವ ವಿಖ್ಯಾತ ವಿಜಯನಗರದ ರಾಜಧಾನಿಯಾಗಿತ್ತು. ವಿಜಯನಗರದ ವೈಭವಕ್ಕೆ ಸಾಕ್ಷಿಯಾಗಿದ್ದ ಈ ನಗರಿ, ಹಲವಾರು ದೇವಾಲಯ, ವಿಶಾಲವಾದ ಮಾರುಕಟ್ಟೆ, ಬೀದಿಗಳನ್ನು ಹೊಂದಿದೆ. ಇಲ್ಲಿ ನೂರಕ್ಕೂ ಅಧಿಕ ದೇವಾಲಯಗಳು, ಮಂಟಪಗಳು ಇದ್ದು, ಇತಿಹಾಸ ಪ್ರೇಮಿಗಳು, ಪ್ರವಾಸಿಗರ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here