ಕೋಟಿ ಕೋಟಿ ಕಾರ್ಡ್‍ಗಳಿಗೆ ಕೊನೆಗಾಲ..!

0
142

ವಿಶ್ವದೆಲ್ಲೆಡೆ ಆರ್ಥಿಕ ವ್ಯವಸ್ಥೆ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತ ಆರ್ಥಿಕ ವ್ಯವಸ್ಥೆಯಲ್ಲೂ ಬದಲಾವಣೆಗೆ ತೆರೆದುಕೊಂಡಿದೆ. ನೋಟ್ ಬ್ಯಾನ್‍ನಂತಹ ಪರಿಣಾಮ ಎದುರಿಸಿದ ಶ್ರೀಸಾಮಾನ್ಯರು ಇನ್ನು ಮುಂದೆಯೂ ಅನೇಕ ರೀತಿಯ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಅನ್ನೋದನ್ನು ವಿಶ್ವದ ಮುಂಚೂಣಿ ಬ್ಯಾಂಕ್ ಸುಳಿವು ನೀಡಿದೆ.

ಓಹ್ ಮತ್ತೆ ನೋಟ್ ಬ್ಯಾನ್ ಆಗುತ್ತಾ ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ನೋಟ್ ರದ್ಧತಿ ಸಮಯದಲ್ಲಿ ಹೇಳಿದ ಡಿಜಿಟಲ್ ಪಾವತಿ ವಿಚಾರ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಮತ್ತು ಡಿಜಿಟಲ್ ಪೇಮೆಂಟ್ ವ್ಯವಸ್ಥೆ ವಿಸ್ತಾರಗೊಳ್ಳುತ್ತಿದೆ. ಹೀಗಿರುವಾಗ ಆಟೋಮೆಟೆಡ್ ಟೆಲ್ಲರ್ ಮಷೀನ್ (ಎಟಿಎಂ)ನಲ್ಲಿ ಬಳಸುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳಿಗೆ ಶಾಶ್ವತ ವಿದಾಯ ಹೇಳಬೇಕಾದ ಸಮಯ ಹತ್ತಿರದಲ್ಲೇ ಇದೆ ಎಂದು ವಿಶ್ವದ ಬೃಹತ್ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ.

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್‍ಗಳ ವಿತರಣೆಯನ್ನು ಸ್ಥಗಿತಗೊಳಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮುಂದಿನ ಒಂದೂವರೆ ವರ್ಷದ ಗುರಿ ಹೊಂದಿರುವ ಸ್ಟೇಟ್ ಬ್ಯಾಂಕ್ ತನ್ನೆಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಿಂಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಗದು ರಹಿತ ವಹಿವಾಟನ್ನು ಗುರಿಯಾಗಿಸಿಕೊಂಡಿರುವ ಬ್ಯಾಂಕ್ ತನ್ನ ಸಮೂಹದ 90 ಕೋಟಿ ಡೆಬಿಟ್ ಕಾರ್ಡ್ ಮತ್ತು ಮೂರು ಕೋಟಿ ಕ್ರೆಡಿಟ್ ಕಾರ್ಡ್‍ಗಳು ತಮ್ಮ ಕಾರ್ಯ ನಿಲ್ಲಿಸಲಿವೆ. ಎಲ್ಲ ಪಾವತಿಗಳೂ ಆಧುನಿಕ ಮತ್ತು ವರ್ಚುವಲ್ ಕಾರ್ಡ್‍ಗಳ ಮೂಲಕವೇ ನಡೆಯಲಿದೆ ಎಂಬುದು ತಜ್ಞರ ಅಭಿಪ್ರಾಯ. ಮುಂದಿನ ವರ್ಷಗಳಲ್ಲಿ ಭಾರತದಂತಹ ದೇಶ ಡಿಜಿಟಲ್ ವಹಿವಾಟು ನಡೆಸಲಿದೆ ಎಂಬುದು ಸದ್ಯದ ಆಲೋಚನೆ.

ಈ ಕಾರ್ಯಯೋಜನೆಯ ನೀಲನಕ್ಷೆ ಆರಂಭವಾಗಿದ್ದು ಇದರ ಪರಿಣಾಮವೇ ರೂಪುತಳೆದ ಯೋನೋ ಆ್ಯಪ್ ಸೌಲಭ್ಯ ಈಗ ದೇಶವ್ಯಾಪಿ ವ್ಯಾಪಿಸುತ್ತಿದೆ. ಡಿಜಿಟಲ್ ವರ್ಗಾವಣೆ ಮತ್ತು ನಗದು ರಹಿತ ವ್ಯವಹಾರ ಉತ್ತೇಜಿಸಲು ಕೈಗೊಂಡ ಮಹತ್ವದ ಹೆಜ್ಜೆಗಳಲ್ಲಿ ಎಸ್‍ಬಿಐನ ನವೀನ ತಂತ್ರಜ್ಞಾನ ಈ ಯೋನೋ. ಎಸ್‍ಬಿಐ ಭಾರತೀಯರಿಗೆ ಕಲಿಸಲು ಹೊರಟಿರುವ ಡಿಜಿಟಲ್ ಆರ್ಥಿಕ ಸಾಕ್ಷರತೆಗೆ ನೆರವಾಗಲು ಈಗಾಗಲೇ 68 ಸಾವಿರದಷ್ಟು ಯೋನೋ ಕ್ಯಾಷ್ ಪಾಯಿಂಟ್ ತೆರೆದಿದೆ.

ಜಗತ್ತಿನಲ್ಲಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿರುವ ದೇಶಗಳು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಅಪ್ಪಿಕೊಂಡಿದೆ. ಸದ್ಯ ಭಾರತವೂ ಇದಕ್ಕೆ ಹೊರತಲ್ಲ ಮುಂದೆ ಹಳೇ ಸಾವಿರ, ಐನೂರರ ನೋಟಿನಂತೆ ಕಾರ್ಡ್‍ಗಳೂ ನೆನಪಾಗಿ ಮಾತ್ರ ಉಳಿಯಲಿವೆ.

LEAVE A REPLY

Please enter your comment!
Please enter your name here