ವೈರಲ್ ಆಗ್ತಿದೆ ಆರ್ಮಿ ಕಮಾಂಡರ್ ಗೆ ಶ್ವಾನ ಸೆಲ್ಯೂಟ್ ಮಾಡಿದ ಫೋಟೋ…!

0
337

‘ನಿಯತ್ತಿಗೆ ಇರುವ ಮತ್ತೊಂದು ಹೆಸರೇ ಶ್ವಾನ’ ಎಂಬ ಮಾತಿದೆ. ಈ ಮಾತು ಸಾಕಷ್ಟು ವಿಚಾರಗಳಲ್ಲಿ ನಿಜವಾಗಿದೆ. ಇನ್ನು ಆರ್ಮಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಇದೇ ಕಾರಣಕ್ಕೆ ಶ್ವಾನಗಳನ್ನು ಬಳಸುತ್ತಾರೆ. ಎಷ್ಟೋ ಕೇಸ್‍ಗಳಲ್ಲಿ ಶ್ವಾನಗಳು ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿರುವುದನ್ನು ನೀವು ನೋಡಿರಬಹುದು.

 

 

ಇನ್ನು ಈ ಫೋಟೋ ಇತ್ತೀಚೆಗೆ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ. ಭಾರತೀಯ ಭೂಸೇನೆಯ 48ನೇ ಲೆಫ್ಟಿನೆಂಟ್ ಜನರಲ್ ಕನ್ವಲ್‍ಜಿತ್ ಸಿಂಗ್ ಧಿಲ್ಲೋನ್ ಅವರಿಗೆ ಸೇನೆಯ ಶ್ವಾನವೊಂದು ಎರಡೂ ಕೈಗಳನ್ನು ಎತ್ತಿ ಗೌರವದಿಂದ ಸೆಲ್ಯೂಟ್ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಲೆ.ಜ. ಧಿಲ್ಲೋನ್ ಅವರು ಕೂಡಾ ಶ್ವಾನದ ಮುಂದೆ ಕುಳಿತು ಅದಕ್ಕೆ ಸೆಲ್ಯೂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಲೆ.ಜ. ಧಿಲ್ಲೋನ್, ‘ಎಷ್ಟೋ ಬಾರಿ ಬಹಳಷ್ಟು ಜೀವಗಳನ್ನು ರಕ್ಷಿಸಿರುವ ಈತನಿಗೆ ನನ್ನ ಸೆಲ್ಯೂಟ್’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

 

 

ಈ ವರ್ಷ ಜುಲೈನಲ್ಲಿ ಅಮರನಾಥ್ ಯಾತ್ರೆಯ ದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಶ್ವಾನವನ್ನು ಕೆಲಸದಿಂದ ವಾಪಸ್ ಕರೆದೊಯ್ಯುವ ವೇಳೆ ಲೆ.ಜ. ಧಿಲ್ಲೋನ್ ಎದುರಾಗಿದ್ದಾರೆ. ಸೂಚನೆ ನೀಡುತ್ತಿದ್ದಂತೆ ಅವರಿಗೆ ಶ್ವಾನ ಸೆಲ್ಯೂಟ್ ಮಾಡಿದೆ. ಭಾರತೀಯ ಸೇನೆಯ ಸಂಪ್ರದಾಯದ ಪ್ರಕಾರ, ತಮಗೆ ಗೌರವ ನೀಡಿದ ಶ್ವಾನಗಳಿಗೆ ಕೂಡಾ ಸೇನೆಯ ಅಧಿಕಾರಿಗಳು ಅವುಗಳಿಗೆ ಪರಸ್ಪರ ವಂದನೆ ಸಲ್ಲಿಸಬೇಕು.

ಆದ ಕಾರಣ ಲೆ.ಜ. ಧಿಲ್ಲೋನ್ ಕೂಡಾ ಶ್ವಾನಕ್ಕೆ ಸೆಲ್ಯೂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಕೋಟ್ಯಂತರ ದೇಶಪ್ರೇಮಿಗಳ ಮನಗೆದ್ದಿರುವುದಂತೂ ನಿಜ.

LEAVE A REPLY

Please enter your comment!
Please enter your name here