ಪಂಚಸೂತ್ರದ ತಂತ್ರದಿಂದ ಪಂಚಾಯತ್ ಗೆಲ್ಲಲು ಬಿಜೆಪಿ ಸಿದ್ದತೆ

0
35

ಉಡುಪಿ: ಬೈ ಎಲೆಕ್ಷನ್ ಗೆಲುವಿನ ಕೇಕೆ ಹಾಕುತ್ತಿರುವ ಬಿಜೆಪಿ ಪಂಚಾಯತ್ ಮಟ್ಟವನ್ನೂ ಗಟ್ಟಿ ಮಾಡಲು ಸಿದ್ದತೆ ನಡೆಸುತ್ತಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಬಲವರ್ಧನೆಗೆ ತಂದರೆ ಮುಂಬರುವ ಎಲೆಕ್ಷನ್ ಗೂ ಅನುಕೂಲ ಎಂಬ ಹಿನ್ನೆಲೆಯಲ್ಲಿ ಪಂಚ ಸೂತ್ರ ಪ್ಲ್ಯಾನ್ ಮಾಡ್ಕೊಂಡಿದೆ.

ಏನದು ಪಂಚ ಸೂತ್ರ ತಂತ್ರ..?

ಜಿಲ್ಲೆಯಲ್ಲಿ ಒಂದು ವಾರ್ ರೂಂ
ಜಿಲ್ಲೆಗೊಂದು ಕಾಲ್ ಸೆಂಟರ್
ಪ್ರತಿ ಮತಗಟ್ಟೆಯಲ್ಲಿ ಪಂಚರತ್ನ ಸಮಿತಿ
ಕುಟುಂಬ ಸಮ್ಮಿಲನ
ಪೇಜ್ ಪ್ರಮುಖ್

ಈ ಬಾರಿಯ ಪಂಚಾಯತ್ ಚುನಾವಣೆ ಗೆ ಬಿಜೆಪಿ ಈ ಪಂಚಸೂತ್ರದ ಮೂಲಕ ಗೆಲ್ಲಲು ಸಿದ್ದತೆ ನಡೆಸುತ್ತಿದೆ.
ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ರಾಜ್ಯದ ಪ್ರಥಮ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಂಚರತ್ನ- ಪಂಚಸೂತ್ರತ ತಂತ್ರದಿಂದ ಗೆಲುವು ಶತಸ್ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಪಂಚರತ್ನ ಸಮಿತಿ ರಚನೆ ಮತ್ತು ಪಂಚಸೂತ್ರದ ಅನುಷ್ಠಾನದ ಮೂಲಕ ಎದುರಿಸಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ.‌ ಕಾರ್ಯಕರ್ತರು ಪಂಚಾಯತ್ ಚುನಾವಣಾ ಕೆಲಸ ಪ್ರಾರಂಭ ಮಾಡಬೇಕೆಂಬ ಉದ್ದೇಶದಿಂದ ಗ್ರಾಮ ಸ್ವರಾಜ್ ಸಮಾವೇಶಗಳಿಗೆ ಚಾಲನೆ ಕೊಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳು ಹಾಗೂ ಪಂಚಾಯತ್ ಗಳಿಗೆ ಕೊಟ್ಟ ಗರಿಷ್ಠ ಅನುದಾನ, ಯೋಜನೆಗಳ ಕುರಿತು ಜನರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶ ಎಂದು ವಿವರಿಸಿದರು.

31 ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದ್ದು,
ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಸರಕಾರ ನೇರ- ಅತಿ ಹೆಚ್ಚು ಅನುದಾನದ ಮೂಲಕ ಪಂಚಾಯತ್ ಗಳನ್ನು ಸಶಕ್ತೀಕರಣಗೊಳಿಸಿದೆ. ಗ್ರಾಮಗಳು ಸಶಕ್ತವಾದರೆ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ಚಿಂತನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ವಿವರಿಸಿದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರಕಾರವೂ ಪಂಚಾಯತ್ ಗಳನ್ನು ಬಲಪಡಿಸುತ್ತಾ ಸಾಗಿದೆ ಎಂದು ಶ್ರೀ ಕಟೀಲ್ ಅವರು ಮೆಚ್ಚುಗೆ ಸೂಚಿಸಿದರು.

“ಗ್ರಾಮ ಗ್ರಾಮದಲ್ಲೂ ಕಮಲ ಅರಳಬೇಕು”

ಪಂಚಾಯಿತಿ ಮಟ್ಟದಲ್ಲೂ ಬಲಿಷ್ಠವಾಗಿ ಬೆಳೆಯಬೇಕು ಹಾಗೂ ಗ್ರಾಮ ಗ್ರಾಮದಲ್ಲೂ ಕಮಲ ಅರಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶುಕ್ರವಾರದಂದು ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷವೂ ಗ್ರಾಮೀಣ ಪ್ರದೇಶದ ಪ್ರತಿಹಳ್ಳಿಗೂ ವಿಸ್ತರಿಸಬೇಕು. ಎಲ್ಲೆಲ್ಲೂ ಪಕ್ಷದ ಚುನಾಯಿತ ಪ್ರತಿನಿಧಿಗಳು ಇರಬೇಕು. ಪಂಚಾಯಿತಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಪಕ್ಷದ ಹಿತಿದೃಷ್ಟಿಯಿಂದ ವರ್ತಿಸಬೇಕು. ಹೆಚ್ಚುಹೆಚ್ಚಾಗಿ ಜನಸಂಪರ್ಕವನ್ನು ಬೆಳೆಸಿಕೊಳ್ಳಬೇಕು. ಗ್ರಾಮ ಮಟ್ಟದ ಘಟಕಗಳ ಬಲವರ್ಧನೆ ಮಾಡಬೇಕು ಎಂದು ಡಿಸಿಎಂ ಸಲಹೆ ನೀಡಿದರು.

LEAVE A REPLY

Please enter your comment!
Please enter your name here