ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ರ ವೃದ್ಧೆ!

0
685

ಪವಾಡ,ಜಾದೂಗಳು ನಮ್ಮ ಜೀವನಗಳಲ್ಲಿ ಆಗುವುದು ಸಾಮಾನ್ಯ. ದೇವರ ಕೃಪಕಟಾಕ್ಷವೊ ಅಥವಾ ಆತ್ಮಸ್ಧರ್ಯವೋ ಗೊತ್ತಿಲ್ಲ! ಆದರೆ ಯಾವುದೋ ಶಕ್ತಿ ನಮ್ಮ ಜೀವನದಲ್ಲಿ ಬಹು ಮುಖ್ಯವಾದ ಪರಿಣಾಮವನ್ನು ಬೀರುತ್ತದೆ. 74 ವರ್ಷದ ವೃದ್ಧೆಗೆ ಮಕ್ಕಳಾಗುವುದೇ? ಇಲ್ಲ ಅಂಥ ಊಹಿಸಿದರೆ ನಿಮ್ಮ ಉತ್ತರ ಕಂಡಿತಾವಾಗಿಯೂ ತಪ್ಪು. ಆಂಧ್ರ ಪ್ರದೇಶದಲ್ಲಿ 74 ವರ್ಷದ ಎರ್ರಮಟ್ಟಿ ಮಂಗಮ್ಮ ಎನ್ನುವ ವೃದ್ಧೆ, ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದನ್ನು ಪವಾಡ ಎನ್ನಬೇಕಾ ಅಥವಾ ಅಜ್ಜಿಯ ದೈರ್ಯ ಎನ್ನಬೇಕಾ ಇಲ್ಲ ಕಾಣದ ಶಕ್ತಿ ಆರ್ಶಿವಾದ ಅನ್ನಬೇಕಾ ನೀವೆ ಯೋಚಿಸಿ.

ಮಾರ್ಚ್ 22, 1962 ರಲ್ಲಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದವರಾದ ರಾಜರಾವ್ ಮತ್ತು ಮಂಗಮ್ಮ ವಿವಾಹವಾಗಿದ್ದರು. ವಿವಾಹವಾಗಿ 50 ವರ್ಷವಾದರು ದಂಪತಿಗಳಿಗೆ ಮಕ್ಕಳಾಗಿರಲಿಲ್ಲ, ಮಕ್ಕಳಾಗದ ಈ ದಂಪತಿಗಳನ್ನು ಸಂಬಂಧಿಕರು,ಸ್ನೇಹಿತರು,ನೆರೆಹೊರೆಯವರು ಕೀಳಾಗಿ ಕಾಣುತ್ತಿದ್ದರಂತೆ.ಮತ್ತು ಯಾವುದೇ ಶುಭ ಸಮಾರಂಭಗಳಿಗೆ ಇವರನ್ನು ಆಹ್ವಾನಿಸುತ್ತಿರಲಿಲ್ಲವಂತೆ. ಮಕ್ಕಳಿಗಾಗಿ ಈ ದಂಪತಿಗಳು ಕಾಣದ ದೇವರುಗಳೆಷ್ಟೋ,ಸಲ್ಲಿಸದ ಹರಕೆಗಳೆಷ್ಟೋ. ಮತ್ತು ಅನೇಕ ವೈದ್ಯರ ಬಳಿ ತಪಾಸಣೆ ಸಹ ಮಾಡಿಸಿದ್ದರಂತೆ.

ಕಳೆದ ವರ್ಷ ನವೆಂಬರ್ 2018 ರಂದು ಗುಂಟೂರಿನ ಅಹಲ್ಯಾ ಆಸ್ಪತ್ರೆಗೆ ತೆರಳಿದ್ದಾರೆ. ಇನ್ನು ಈ ವೇಳೆ ಸಮಸ್ಯೆಯನ್ನು ಸವಾಲಾಗಿ ತೆಗೆದುಕೊಂಡ ಡಾಕ್ಟರ್ ಶಾನಕ್ಯಾಲ ಉಮಾಶಂಕರ್, ದಂಪತಿಗಳ ಆಸೆಯಂತೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿ,ಎಲ್ಲಾ ತರಹದ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಪರೀಕ್ಷೆಯ ಬಳಿಕ ಈ ವೃದ್ಧೆಗೆ ಯಾವುದೇ ಸಕ್ಕರೆ ಕಾಯಿಲೆ,ಬಿ.ಪಿ ಕಾಯಿಲೆಗಳು ಇಲ್ಲವೆಂದು ಕಂಡುಬಂದಿದೆ. ಹಾಗಾಗಿ ವೈದ್ಯರು ಕೃತಕ ಗರ್ಭಧಾರಣೆ ನಿಕಿತ್ಸೆ ನೀಡಲು ಒಪ್ಪಿದ್ದಾರೆ, ನಂತರ ಐವಿಎಫ್ ಚಿಕೆತ್ಸೆಯನ್ನು ಮಂಗಮ್ಮ ಗರ್ಭದಲ್ಲಿ ಪ್ರಯೋಗಿಸಿದ್ದು,ಒಂದೇ ತಿಂಗಳಲ್ಲಿ ಮೊದಲ ಹಂತದಲ್ಲೆ ಯಶಸ್ವಿಯಾಗಿದ್ದಾರೆ. ಇನ್ನು ಗರ್ಭಧರಿಸಿದ್ದರಿಂದ ವಿಶೇಷ ತಜ್ಞರು ತೀವ್ರವಾಗಿ ನಿಗಾ ಹರಿಸುತ್ತಿದ್ದರು.

ತಿಂಗಳು ಕಳೆದಂತೆ ಮಂಗಮ್ಮನ ಹೊಟ್ಟೆಯಲ್ಲಿ ಅವಳಿ ಶಿಶು ಇರುವುದು ವೈದ್ಯರಿಗೆ ಗೊತ್ತಾಗಿದೆ. ಅಜ್ಜಿಗೆ 74 ವರ್ಷವಾಗಿದ್ದರಿಂದ ಸಹಜ ಹೆರಿಗೆ ಸಾಧ್ಯವಾಗದ ಕಾರಣ ನಾಲ್ವರು ತಜ್ಞ ವೈದ್ಯರ ಸಮ್ಮುಖದಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಲಾಗಿದೆ. ಈ ಮೂಲಕ 74 ವರ್ಷದ ವೃದ್ಧೆಯೊಬ್ಬಳು ಶಿಶುವಿಗೆ ಜನ್ಮ ನೀಡಿ ದಾಖಲೆ ಬರೆದಿದ್ದಾರೆ. ಇನ್ನು ದೇಶದಲ್ಲಿ ಇದೇ ಮೊದಲು 74 ವರ್ಷದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು!

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here