ಕರಾವಳಿಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ‘ತ್ರಿಮೂರ್ತಿ’ಗಳೇ ಕಾರಣ..!

0
123

ರಾಜ್ಯದ ಕರಾವಳಿ ಭಾಗದಲ್ಲಿ ಸಾಕಷ್ಟು ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷ ಇದೀಗ ಕರಾವಳಿ ಪ್ರದೇಶಗಳಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ಇನ್ನು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ತ್ರಿಮೂರ್ತಿಗಳಾದ ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫನಾರ್ಂಡಿಸ್ ಕಾರಣ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಹೇಳಿದರು.

ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿಯ ಪ್ರಯುಕ್ತ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಅಮೀನ್‍ಮಟ್ಟು, ಇತ್ತೀಚಿಗೆ ನಡೆದ ಎಲ್ಲ ಚುನಾವಣೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾಂಗ್ರೆಸ್‍ನ ತ್ರಿಮೂರ್ತಿಗಳೇ ನೇರ ಕಾರಣ .

ಹಿಂದುಳಿದ ವರ್ಗದವರಿಗೆ ರಾಜಕೀಯ ಸ್ಥಾನಮಾನ ನೀಡುವುದಕ್ಕಾಗಿ ದೇವರಾಜ್ ಅರಸು ಅವರು ಪೂಜಾರಿಯಂತಹವರಿಗೆ ಟಿಕೆಟ್ ಕೊಡಿಸಿ ಬೆಳೆಸಿದರು. ಆದರೆ ಕರಾವಳಿಯ ಈ ಮೂವರು ಕಾಂಗ್ರೆಸ್ ನಾಯಕರು ಎಂದಿಗೂ ಕೂಡ ಭೂ ಸುಧಾರಣೆಯ ಕಾಯ್ದೆ ಜಾರಿಗೊಳ್ಳುವಲ್ಲಿ ದೇವರಾಜ ಅರಸು ಅವರ ಪಾತ್ರದ ಬಗ್ಗೆ ಹೇಳಿಕೊಳ್ಳಲಿಲ್ಲ. ಜನಾರ್ಧನ್ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫೆನಾರ್ಂಡೀಸ್ ವಾಸ್ತವ ಸ್ಥಿತಿಯನ್ನು ಯುವ ಪೀಳಿಗೆಯ ಮುಂದೆ ಆವಾಗಲೆ ಇಟ್ಟಿದ್ದರೆ ಇಂದು ಯುವ ಜನತೆ ಬಿಜೆಪಿಯತ್ತ ವಾಲುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here