ಇಸ್ರೋ, ನಾಸಾದಿಂದಲೂ ಭೇಷ್ ಎನಿಸಿಕೊಂಡು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಈ ವಿಜ್ಞಾನಿ.!

0
136

ನಮ್ಮ ಭಾರತೀಯರ ಹೆಮ್ಮೆಯ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಪತನಗೊಂಡ ಬಳಿಕ ಏನಾಯಿತು ಎಂಬುದರ ಕುರಿತು ನಾಸಾ ಹಾಗೂ ಇಸ್ರೋ ವಿಜ್ಞಾನಿಘಲು ಸಂಶೋಧನೆ ಕೈಗೊಂಡಿದ್ದು ಗೊತ್ತೇ ಇದೆ. ಇದೀಗ ಅದೇ ನಾಸಾ ವಿಕ್ರಮ್ ಲ್ಯಾಂಡರ್ ನ ತ್ಯಾಜ್ಯ ಪತ್ತೆಯಾಗಿದ್ದು, ಇದಕ್ಕೆ ತಮಿಳುನಾಡಿನ ಎಂಜಿನಿಯರ್ ಸಹಾಯ ಮಾಡಿರುವುದು ವಿಶೇಷ. ಈ ಕುರಿತು ಸ್ವತಃ ನಾಸಾ ತಿಳಿಸಿದ್ದು, ತಮಿಳುನಾಡಿನ 33 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಷಣ್ಮುಗ ಸುಬ್ರಹ್ಮಣಿಯನ್ ಅವರ ಸಹಾಯ ಯಾರನ್ನು ಮರೆಯುವಂತಿಲ್ಲ. ಪತ್ತೆ ಹಚ್ಚಲು ಸಹಕರಿಸಿದ್ದಕ್ಕೆ ಷಣ್ಮುಗ ಅವರಿಗೆ ಇ-ಮೇಲ್ ಮೂಲಕ ನಾಸಾ ಧನ್ಯವಾದವನ್ನು ಸಹ ತಿಳಿಸಿದ್ದಾರೆ.

 

ಈ ಕುರಿತು ತಿಳಿಸಿರುವ ಷಣ್ಮುಗರವರು, ನಾನು ಪದೇ ಪದೆ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳದ ಹಳೆಯ ಚಿತ್ರಗಳು ಹಾಗೂ ನಾಸಾ ಹೊಸತಾಗಿ ಬಿಡುಗಡೆ ಮಾಡಿದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದೆ. ಇದನ್ನು ನಾನು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ರೆಡ್ಡಿಟ್ ಮೂಲಕ ಹಂಚಿಕೊಳ್ಳುತ್ತಿದ್ದೆ. ವಿಕ್ರಮ್ ಲ್ಯಾಂಡರ್ ಕುರಿತ ಸುಳಿವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ನಾನು ಪ್ರಯತ್ನವನ್ನು ಬಿಡಲಿಲ್ಲ. ಅಂತಿಮವಾಗಿ ನಾನು ಸಂಶೋಧಿಸಿದ ಚಿತ್ರಗಳನ್ನು ಅಕ್ಟೋಬರ್ 3ರಂದು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡೆ. ನಾನು ನೀಡಿದ ಸುಳಿವಿನ ಆಧಾರದ ಮೇಲೆ ಅದೇ ಸ್ಥಳದಲ್ಲಿ ನಾಸಾ ಹೆಚ್ಚು ಹುಡುಕಾಟವನ್ನು ನಡೆಸಿತು. ಕಂಡುಹಿಡಿದ ಎರಡು ತಿಂಗಳ ನಂತರ ಅಧಿಕೃತವಾಗಿ ನಾಸಾ ಘೋಷಣೆ ಮಾಡಿತು ಎಂದರು.

 

ನಾಸಾ ನನ್ನ ಕೊಡುಗೆಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ನನ್ನ ಸಂಶೋಧನೆಗಾಗಿ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್ಆರ್ಒ) ಚಿತ್ರಗಳನ್ನು ಬಳಸಿದ್ದೆ. ನಂತರ ಎಲ್ಆರ್ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದೆ. ಚಂದ್ರನಲ್ಲಿ ಈ ತ್ಯಾಜ್ಯವನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ, ನಾನು ಕೇವಲ ಒಂದು ತುಂಡು ತ್ಯಾಜ್ಯವನ್ನು ಮಾತ್ರ ಪತ್ತೆಹಚ್ಚಿದ್ದೆ ಎಂದು ಸ್ವತಃ ತಮ್ಮ ಖಾತೆಯಲ್ಲಿ ವಿವರಿಸಿದ್ದಾರೆ. ಒಟ್ಟಾರೆ ಇಂದು ಅತಿ ಕಿರಿಯ ವಯಸ್ಸಿನಲ್ಲಿಯೇ ಷಣ್ಮುಗರವರು ಮಾಡಿದ ಸಾಧನೆಯನ್ನು ಇಡೀ ದೇಶವೇ ಭೇಷ್ ಎನ್ನುತ್ತಿರುವುದು ಸಂತಸಕಾರಿಯೇ ಹೌದು.

LEAVE A REPLY

Please enter your comment!
Please enter your name here