ಯುವ ರಾಕಿ ಭಾಯ್ ಆಗಿ ತಮಿಳು ನಟ !

0
121

ಸದ್ಯ ಕೆಜಿಎಫ್ ಚಿತ್ರ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಬಂದಿದೆ. ಚಂದನವನದಲ್ಲಿ ಐತಿಹಾಸಿಕ ದಾಖಲೆ ಬರೆದ್ದಿದ್ದ ಕೆಜಿಎಫ್ ನಲ್ಲಿ ಯಶ್ ಅವರ ಬಾಲಕನ ಪಾತ್ರದಲ್ಲಿ ಅನ್ಮೋಲ್ ವಿಜಯ್ ಭಟ್ಕಳ್ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದರು ! ಈಗ ಕೆಜಿಎಫ್ ಭಾಗ ಎರಡರಲ್ಲಿ ಯುವ ರಾಕಿ, ಯಾರಾಗಲಿದ್ದಾರೆ ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಆದರೆ ಈಗ ಇದಕ್ಕೆ ತೆರೆ ಬಿದ್ದಿದೆ !

ಈಗಾಗಲೇ ತೀವ್ರ ಕುತೂಹಲ ಕೆರಳಿಸಿದ್ದ ಅಧೀರ ಪಾತ್ರಕ್ಕೆ ಬಿ ಟೌನ್ನ ವಿಲನ್ ಸಂಜಯ್ ದತ್ ಅಭಿನಯಿಸಿ ಭಾರತ ಚಿತ್ರರಂಗದಲ್ಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದಾರೆ !
ಇದೀಗ ರಾಕಿ ಭಾಯ್, ಯುವ ಪಾತ್ರಕ್ಕೆ ಧನುಷ್ ಅಭಿನಯದ ವಡಾ ಚೆನ್ನೈ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದ ಸರಣ್ ಶಕ್ತಿ ಅವರು ಯುವ ರಾಕಿ ಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ !

ಇನ್ನು ಕೆಜಿಎಫ್ ಚಾಪ್ಟರ್ ೨ ಚಿತ್ರಕ್ಕೆ ಭಾರಿ ದೊಡ್ಡ ಸೆಟ್ ಹಾಕಿದ್ದು ಚಿತ್ರದ ಚಿತ್ರೀಕರಣ ನಡೆಯುತ್ತಿದೆ ! ಒಟ್ಟಾರೆ ಚಿತ್ರದ ಬಿಡುಗಡೆಯಾಗುವುದರ ಒಳಗೆ ಇನ್ನೂ ಯಾವ ರೀತಿಯ ದಾಖಲೆ ಬರೆಯುತ್ತದೆ ಕಾದು ನೋಡಬೇಕಾಗಿದೆ

LEAVE A REPLY

Please enter your comment!
Please enter your name here