ಮಾತಿನಿಂದಲೇ ಜಗತ್ತು ಗೆಲ್ಲುವುದು ಅಂದ್ರೆ ಇದೇನಾ..!

0
245

ಮಾತು, ಮಾತಿಲ್ಲದೆ ಇದ್ದಿದ್ದರೆ ಇಂದು ಅದೆಷ್ಟೋ ಜನರು ಬದುಕಿದ್ದು ಸತ್ತಂತಿರುತ್ತಿದ್ದರು. ಮಾತು ಜಗತ್ತಿನಲ್ಲಿ ಜೀವನ ಸುಧಾರಿಸಿದೆ ಉತ್ತುಂಗಕ್ಕೂ ತೆಗೆದುಕೋಂಡು ಹೋಗಿದೆ. ಮಾತಿಲ್ಲದೆ ಏನೂ ಆಗದು, ಮಾತಿನಲ್ಲೆ ಇಂದು ಬಹಳಷ್ಟು ಕೆಲಸಗಳು ನಡೆಯುತ್ತಿವೆ. ಮಾತು ಕೇವಲ ಮನುಷ್ಯರಿಗಷ್ಟೆ ಅಲ್ಲದೆ ಯಂತ್ರಗಳಿಗೂ ಮಾತಿನ ಮರ್ಮ ಅರಿತಿದೆ. ಮಾತಿನಿಂದಲೇ ಯಂತ್ರಗಳು ಕಾಯಕ ಮಾಡಲು ಆರಂಭಿಸಿದೆ. ಹಾಗಾದ್ರೆ ಈ ಮಾತಿನ ಯಂತ್ರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ತಾಂತ್ರಿಕತೆ ಬೆಳೆದಂತೆ ಜನರು ತಂತ್ರಜ್ಞಾನವನ್ನು ತಮ್ಮ ಬಳಕೆಗೆ ಹೆಚ್ಚು ಬಳಸುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ತಾಂತ್ರಿಕತೆಯ ಜನಸ್ನೇಹಿ ಫೀಚರ್‍ಗಳು. ಅನೇಕರು ದೈಹಿಕವಾಗಿ ಕೀಬೋರ್ಡ್ ಅಥವಾ ಮೌಸ್ ಬಳಸುವುದಿಲ್ಲ, ಹೀಗಿರುವಾಗ ಮಾತಿನ ಸಂದೇಶಗಳನ್ನು ಈ ಯಂತ್ರಗಲು ಬಳಸಿದ್ರೆ ಉತ್ತಮ. ವಾಹನ ಚಲಾಯಿಸುವಾಗ, ಇನ್ನಾವುದೋ ಕೆಲಸದಲ್ಲಿ ನಿರತವಾಗಿದ್ದಾಗ ಇಂತಹ ತಾಂತ್ರಜ್ಞಾನಗಲು ಹೆಚ್ಚು ಬಳಕೆಗೆ ಉಪಯುಕ್ತ.

ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್, ಗೂಗಲ್ ಮತ್ತು ಆ್ಯಪಲ್‍ನಂತಹ ಸಂಸ್ಥೆಗಳು ಧ್ವನಿ ಸಂದೇಶಗಳು ಮತ್ತು ಇದರ ಅಪ್ಲಿಕೇಶನ್‍ಗಳ ಮೀಲಿನ ಸಂಶೋಧನೆಯ ಫಲವಾಗಿ ಗೂಗಲ್ ಅಸಿಸ್ಟೆಂಟ್‍ನಂತಹ ತಂತ್ರಾಂಶಗಳನ್ನು ರೂಪಿಸಿವೆ. ಇದು ಹೆಚ್ಚು ಜನರ ಬಳಕೆಗೆ ಸಹಕಾರಿಯಾಗಿದ್ದು ಕಂಪ್ಯೂಟರ್ ಮಾತ್ರವಲ್ಲದೆ ಮೊಬೈಲ್‍ಗಳ್ಲಿಯೂ ಕಾರ್ಯಾಚರಣೆ ಸುಲಭವಾಗಿದೆ.

ಆ್ಯಪಲ್‍ನ ಸಿರಿ ಮತ್ತು ಗೂಗಲ್‍ನ ಗೂಗಲ್ ಅಸಿಸ್ಟೆಂಟ್ ಇಂದಿನ ತುರ್ತು ಅಗತ್ಯಗಳಿಗೆ ಧ್ವನಿಗೂಡುವ ತಂತ್ರಾಂಶಗಳಾಗಿವೆ. ಯಾವ ವಸ್ತುಗಳನ್ನು ಮುಟ್ಟದೆಯೇ ಕೆಲಸಗಳನ್ನು ಶುರುಮಾಡಬಹುದಾಗಿದೆ. ಫೋನ್ ಕಾಲ್ ಮಾಡುವುದಾಗಿರಲಿ ಅಲಾರ್ಮ್ ಇಡುವುದಾಗಲಿ ಎಲ್ಲವೂ ಸರಾಗ. ಮ್ಯಾಪ್‍ನಲ್ಲಿ ದಾರಿ ಕೇಳುವುದು ಅದರನ್ವಯ ವಾಹನ ಚಲಾಯಿಸುವುದು ಎಲ್ಲವೂ ಸಾಧ್ಯವಾಗಿರುವ ಈ ಧ್ವನಿ ರೂಪದ ತಂತ್ರಜ್ಞಾನಗಳು ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದೆ.

ಇನ್ನು ಕಚೇರಿ ಕೆಲಸಗಳಾಗಿರುವ ಮಾತನ್ನು ಪಠ್ಯಕ್ಕೆ ಇಳಿಸುವ ತಂತ್ರಾಂಶಗಳು ಸುಧೀರ್ಘವಾದ ಭಾಷಣಗಳನ್ನು ಅಥವಾ ನೊಟ್ಸ್‍ಗಳನ್ನು ಲಿಪಿಗೆ ರೂಪಾಂತರಿಸಿ ಕೊಟ್ಟಾಗ ಕೆಲಸದ ಒತ್ತಡವೂ ನಿವಾರಣೆಯಾಗುತ್ತದೆ. ಇದಕ್ಕೆಲ್ಲ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ನೆರವಾಗಿವೆ.

ಇತ್ತಿಚೆಗೆ ಸ್ಮಾರ್ಟ್‍ಪೋನ್ ಬಳಕೆ ಹೆಚ್ಚಾದಂತೆ ಮೊಬೈಲ್‍ಗೆ ಮನೆಯ ಇತರೆ ಉಪಕರಣಗಳನ್ನು ಜೋಡಿಸುವ ಮತ್ತು ನಿಯಂತ್ರಿಸಯುವ ಪರಿಪಾಠ ಶುರುವಾಗಿದೆ. ಇಲ್ಲಿ ಗೂಗಲ್ ಹೋಮ್, ಅಮೆಜಾನ್ ಎಕೋ ಮುಂತಾದ ಸಾಧನಗಳು ಆಶ್ಚರ್ಯವೆನಿಸುವ ಕೆಲಸಗಳನ್ನು ಕೇವಲ ಮಾತಿನಿಂದಲೇ ಮಾಡುತ್ತಿವೆ.

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಕನ್ನಡದಲ್ಲಿದೆ. ಈ ಮಾತು ನಿಜಕ್ಕೂ ಮನುಷ್ಯನನ್ನು ಯಂತ್ರಗಳೊಂದಿಗೆ ಮಾತನಾಡುವ ಮತ್ತು ಅವುಗಳ ಸಾಮಥ್ರ್ಯ ಅರಿಯುವ ಶಕ್ತಿ ಬಂದಿದೆ. ಇದು ತಂತ್ರಜ್ಞಾನದ ಪರಿಚಯ ಇಲ್ಲದ ಹೊಸಬರಿಗೆ ಮಾತಿನ ಒಳ ಗುಟ್ಟುಗಳನ್ನು ತಿಳಿಸಿಕೊಡಲಿದೆ ಇಲ್ಲಿ ಯಾವುದೇ ಭಾಷೆಯ ಸಮಸ್ಯೆಯಿಲ್ಲ ಯಂತ್ರಭಾಷೆಯೇ ಮೇಲು ಮತ್ತು ಅದೇ ಅದರ ಜೀವಾಳ ಯಂತ್ರಭಾಷೆಯನ್ನು ನಿಮ್ಮ ಮಾತಿನ ಮೂಲಕ ಸಾಧಿಸಬಹುದು. ಮಾತು ಜ್ಞಾನಾರ್ಜನೆಯ ಮೊದಲ ಮೆಟ್ಟಿಲು ಏಕೆಂದರೆ ಪ್ರಶ್ನೆ ಕೇಳಿದಾಗ ಜ್ಞಾನ ವಿನಿಮಯವಾಗುತ್ತದೆ, ಈ ಯಂತ್ರಗಳಿಗೂ ಅದೇ ಬೇಕಾಗಿರುವುದು.

LEAVE A REPLY

Please enter your comment!
Please enter your name here