ಧೃತರಾಷ್ಟ್ರನಾಗಿ ಮಹಾಭಾರತದಲ್ಲಿ ಮಿಂಚುತ್ತಿರುವ ನಟನಿಗೂ ದಚ್ಚು ಅವರಿಗು ಏನು ಸಂಬಂಧ !

0
176

‘ಈ ಕಥೆ ಸಂಗ್ರಾಮವೂ ವಿಶ್ವಕೇ ಕಲ್ಯಾಣವೂ, ಧರ್ಮ ಅಧರ್ಮ ಆದಿ ಅನಂತ, ಸತ್ಯ ಅಸತ್ಯ ಕೇಷ ಕಳಂಕ, ಸ್ವಾರ್ಥದ ಪರಮಾರ್ಥದ ಕಥೆ, ಶಕ್ತಿ ಇದು ಭಕ್ತಿ ಇದು, ಜನುಮಗಳ ಮುಕ್ತಿ ಇದು, ಜೀವನದ ಸಂಪೂರ್ಣ ಸಾರವಿದು,ಯುಗ ಯುಗದ ಕಣಕಣದಿ, ಸೃಷ್ಟಿಯ ದರ್ಪಣ, ವೇದಗಳ ಪಾಠ ಅಪಾರವೂ, ಧರ್ಮದ ಚರಿತ್ರೆ ಇದು, ದೇವರ ಭಾಷೆ ಇದು, ದಾಳಗಳ ಇತಿಹಾಸದ ಪ್ರಮಾಣವಿದು, ಕೃಷ್ಣನ ಮಹಿಮೆ ಇದು, ಗೀತೆಯ ಗಿರಿಮೆ ಇದು, ಗ್ರಂಥಗಳ ಗ್ರಂಥವಿದು ಶ್ರೇಷ್ಠವು. ಮಹಾಭಾರತ ಮಹಾಭಾರತ’.. ಅಬ್ಬಾ ಎಂತಹ ಸಾಲುಗಳು ಅಲ್ಲವೇ.. ಪ್ರತಿ ನಿತ್ಯ ರಾತ್ರಿ ೮ ಗಂಟೆಯಾದರೆ ಸಾಕು ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲೂ ಇದೇ ಹಾಡಿನ ಗುಣಗಾನ. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಕನ್ನಡಿಗರ ಮೇಲೆ ಪ್ರಭಾವ ಬೀರಿದೆ. ಡಬ್ಬಿಂಗ್ ಧಾರಾವಾಹಿ ಯಾದರೂ ಕೂಡ ಕನ್ನಡದಲ್ಲಿ ನಂಬರ್  ೧ ಧಾರಾವಾಹಿಯಾಗಿದೆ.  ಧರ್ಮ ಅಧರ್ಮಗಳ‌ ಪರಿಚಯ ಮಾಡಿಸುತ್ತಾ ನಮ್ಮ ಮಣ್ಣಿನ ಹೆಮ್ಮೆಯ ಮಹಾಭಾರತ ಗ್ರಂಥದ ದೃಶ್ಯ ರೂಪಕವನ್ನು ನಮ್ಮದೇ ಭಾಷೆಯಲ್ಲಿ ನೋಡುವಂತೆ ಮಾಡಿದ ಸ್ಟಾರ್ ಸುವರ್ಣ ವಾಹಿನಿಯವರಿಗೆ ಪ್ರೇಕ್ಷಕರು ಧನ್ಯವಾದ ತಿಳಿಸುತ್ತಿದ್ದಾರೆ.

ಧಾರವಾಹಿ ಗೆಲ್ಲಲು ಮುಖ್ಯ ಕಾರಣವೇನೆಂದರೆ ಧಾರವಾಹಿಯ ಮುಖ್ಯ ಪಾತ್ರಗಳು.  ಧಾರಾವಾಹಿಯಲ್ಲಿ ಅಭಿನಯಿಸಿರುವ ಕಲಾವಿದರುಗಳೇ ನಿಜವಾದ ಕೃಷ್ಣ, ಅರ್ಜುನ, ಭೀಷ್ಮ ಅನಿಸುವುದಂತು ಸತ್ಯ.  ಆಶ್ಚರ್ಯ ಮೂಡಿಸುವ ವಿಚಾರವೇನೆಂದರೆ ಕುರು ವಂಶದರಾಜ ದೃತರಾಷ್ಟ್ರ ಪಾತ್ರದಲ್ಲಿ  ಮಿಂಚುತ್ತಿರುವ  ಕಲಾವಿದ ತಮ್ಮೆಲ್ಲರಿಗೂ ಬಹಳ ಪರಿಚಿತರದ ಕಲಾವಿದರೆ. ಆದರೆ ಈ ವಿಚಾರ ಅದೆಷ್ಟೋ ಜನರಿಗೆ ತಿಳಿದಿಯೇ ಇಲ್ಲ.  ದೃತರಾಷ್ಟ್ರ ಪಾತ್ರದಲ್ಲಿ ಮಿಂಚಿರುವ ಕಲಾವಿದರ ನಿಜವಾದ ಹೆಸರು ಥಾಕೂರ್ ಅನೂಪ್ ಸಿಂಗ್ ಎಂದು.  ಅನೂಪ್ ಸಿಂಗ್ ಬೇರೆ ಯಾರೂ ಅಲ್ಲ ದರ್ಶನ್ ಅವರ  ಸೂಪರ್‌ ಡೂಪರ್ ಹಿಟ್ ಸಿನಿಮಾ ಯಜಮಾನ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ‌‌..  ಡಿ ಬಾಸ್ ಅವರ  ಯಜಮಾನ ಸಿನಿಮಾದಲ್ಲಿ ದೇವಿ ಶೆಟ್ಟಿ ಪಾತ್ರದಲ್ಲಿ ಮಿಂಚಿರುವ  ನಟರೆ  ಥಾಕೂರ್ ಅನೂಪ್ ಸಿಂಗ್ ಅವರು.

ಖಳನಾಯಕ ಮಾತ್ರವಲ್ಲದೆ  ಉದ್ಘರ್ಷ ಎಂಬ ಕನ್ನಡ ಸಿನಿಮಾದಲ್ಲಿಯೂ ನಾಯಕ ನಟನಾಗಿ  ಅಭಿನಯಿಸಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಭಾಸ್ ಅವರ ಸಾಹೋ ಸೇರಿದಂತೆ ತಮಿಳು ತೆಲುಗು ಮಳಯಾಳಂ ನ  ಸಾಕಷ್ಟು  ಸಿನಿಮಾಗಳಲ್ಲಿ‌ ಅಭಿನಯಿಸಿ ಬೇಡಿಕೆಯ ನಟರಾಗಿದ್ದಾರೆ.. ಇನ್ನು ಅನೂಪ್ ಅವರಿಗೆ  2013 ರಲ್ಲಿ ಹಿಂದಿಯಲ್ಲಿ ಪ್ರಸಾರಗೊಂಡ ಮಹಾಭಾರತ ಧಾರಾವಾಹಿಯ ದೃತರಾಷ್ಟ್ರ ಪಾತ್ರವೂ  ದೊಡ್ಡ ಹೆಸರು ತಂದುಕೊಟ್ಟಿತು. ಇದಾದ ಬಳಿಕ ಅವರು ಥೈಲಾಂಡ್ ನಲ್ಲಿ ನಡೆದ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ಅನೂಪ್ ಅವರು ಚಿನ್ನದ ಪದಕವನ್ನೂ ಕೂಡ ಗೆದ್ದಿದ್ದಾರೆ.‌ ಆನಂತರ ಸಿನಿಮಾಗಳಲ್ಲಿ ಅವಕಾಶಗಳು ಬರುವುದು ಹೆಚ್ಚಾಯಿತು.  ಮೂಲತಃ ಮುಂಬೈ ಅವರಾದರೂ ಕನ್ನಡದ ಮೇಲೆ ಅಪಾರ ಪ್ರೀತಿ ಗೌರವ ಹೊಂದಿರುವ ಅನೂಪ್ ಸಿಂಗ್ ಅವರ ಮುಂದಿನ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು.. ಹಾರೈಸೋಣ.

LEAVE A REPLY

Please enter your comment!
Please enter your name here