ತೈವಾನ್ ರಾಷ್ಟ್ರೀಯ ದಿನಾಚರಣೆ ಆಚರಿಸಿ, ಚೀನಾಗೆ ಮುಖಭಂಗ ಉಂಟುಮಾಡಿದ ಭಾರತೀಯರು…!!

0
147

ಚೀನಾ ಮತ್ತು ಭಾರತದ ಸಂಘರ್ಷ ಇದೀಗ ರಾಜತಾಂತ್ರಿಕ ಮಟ್ಟದಲ್ಲೂ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಕೆಲ ತಿಂಗಳುಗಳಿಂದ ಗಡಿಯಲ್ಲಿ ಉದ್ಭವವಾಗಿರುವ ವಿಷಮ ಸ್ಥಿತಿ ಇದೀಗ ಎರಡೂ ದೇಶಗಳ ರಾಜತಾಂತ್ರಿಕ ಮಟ್ಟದಲ್ಲೂ ಕಾಣಿಸಿಕೊಂಡಿದೆ. ಅದಕ್ಕೆ ಕಾರಣ ತೈವಾನ್ ದೇಶದ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವು. ಹೌದು, ದ್ವೀಪ ರಾಷ್ಟ್ರ ತೈವಾನ್ ದೇಶವನ್ನು ತನ್ನ ಭಾಗ ಎಂದು ಬೊಬ್ಬೆಹಾಕುವ ಚೀನಾಗೆ ಭಾರತ ತಕ್ಕ ತಿರುಗೇಟು ನೀಡಿದೆ‌. ತೈವಾನ್ ದೇಶದ ಸ್ವಾತಂತ್ರ್ಯವನ್ನು ಭಾರತ ಗೌರವಿಸಲು ಬದ್ದವಾಗಿದ್ದು, ಅದಕ್ಕೆ ಬೆಂಬಲವಾಗಿರಲಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ಅಂತರಾಷ್ಟ್ರೀಯ ಸಮುದಾಯಕ್ಕೆ ಭಾರತ ನೀಡಿದೆ. ಭಾರತ ತೆಗೆದುಕೊಂಡಿರುವ ಈ ನಿಲುವು ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾಗೆ ಭಾರೀ ಮುಜುಗರ ಉಂಟುಮಾಡಿದೆ.

ಇನ್ನು ತೈವಾನ್ ಎನ್ನುವ ದೇಶ ಆಗ್ನೇಯ ಏಷ್ಯಾದ ಒಂದು ಪುಟ್ಟ ಸ್ವತಂತ್ರ ದ್ವೀಪ ರಾಷ್ಟ್ರವಾದರೂ, ಚೀನಾ ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ದಶಕಗಳಿಂದಲೂ ಅನೇಕ ಕುತಂತ್ರಗಳನ್ನು ಹೆಣೆಯುತ್ತಾ ಪ್ರಯತ್ನಿಸುತ್ತಲೇ ಇದೆ. ಚೀನಾ ಸ್ವತಂತ್ರ ತೈವಾನ್‌ನನ್ನು ‘ಪ್ರಾಮಿನೆನ್ಸ್ ಆಫ್ ರಿಪಬ್ಲಿಕ್ ಚೀನಾ’ ಎಂದೇ ಕರೆಯುತ್ತದೆ. ಆದರೆ ತೈವಾನ್ ಮಾತ್ರ ಚೀನಾದ ಈ ನಿಲುವನ್ನು ಗಟ್ಟಿಯಾಗಿ ವಿರೋಧಿಸಿಕೊಂಡೆ ಬಂದಿದೆ. ಆದರೆ ತೈವಾನ್ ದೇಶದ ಆಂತರಿಕ ಸಂಘರ್ಷವನ್ನು ಬಳಸಿಕೊಂಡು ಅದನ್ನು ಕಬಳಿಸುವ ಹುನ್ನಾರವನ್ನು ಚೀನಾ ಮಾಡಿದೆ. 1949ರ ನಂತರ ತೈವಾನ್‌ನಲ್ಲಿ ರಾಷ್ಟ್ರೀಯವಾದಿ ಕುಮಿಂಟಾಂಗ್ ಸರ್ಕಾರ ರಚಿಸಿ, ಅದನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡಿತು. ಆದರೆ 1949ರ ವೇಳೆಗೆ ನಾಗರಿಕ ಯುದ್ದ ತಾರಕಕ್ಕೆ ಏರಿತ್ತು. ಕಮ್ಯುನಿಸ್ಟ್ ನಾಯಕ ಮಾವೊ ನೇತೃತ್ವದ ಸಿಪಿಸಿ ಸೇನೆ ಜೆಡಾಂಗ್ ಮುಂದಾಳತ್ವದ ಕೆಎಂಟಿ ಸೇನೆಯನ್ನು 1949ರ ನಾಗರಿಕ ಯುದ್ಧದಲ್ಲಿ ಸೋಲಿಸಿತು. ಆದರು ತೈವಾನ್ ಜನರ ಸ್ವಾತಂತ್ರ್ಯದ ಕನಸು ಕಮರಲಿಲ್ಲ.

ಮುಂದೆ 1988ರಲ್ಲಿ ತೈವಾನ್ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಲೀ ಟೆಂಗ್ ಹೂ ತನ್ನ ಆಡಳಿತದಲ್ಲಿ ತೈವಾನ್ನ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಿದರು. ಚೀನಾ ಪರವಾದ ಅಧಿಕಾರಶಾಹಿಗಳನ್ನು ಅಧಿಕಾರದಿಂದ ದೂರವಿಟ್ಟರು. ಇದರ ಪರಿಣಾಮವಾಗಿ ತೈವಾನ್ನಲ್ಲಿ ಚೀನಾದ ಪ್ರಭಾವ ತಗ್ಗಿತು. ನಂತರ 1996ರಲ್ಲಿ ಲೀ ಪ್ರತ್ಯಕ್ಷ ಚುನಾವಣೆಯ ಮೂಲಕ ಮತ್ತೆ ಅಧ್ಯಕ್ಷರಾಗಿ ಆರಿಸಿ ಬಂದರು. ಇದು ತೈವಾನ್‌ನಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆದ ಮೊದಲ ಚುನಾವಣೆ. ಆ ಮೂಲಕ ತೈವಾನ್ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

ಇನ್ನು ತೈವಾನ್‌ನ ಹೊಸ ತಲೆಮಾರು ಸಂಪೂರ್ಣ ಸಾರ್ವಭೌಮ ತೈವಾನ್‌ನ ಕನಸನ್ನು ಕಾಣತೊಡಗಿದ್ದಾರೆ. ಚೀನಾದ ದಾಸ್ಯವನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಚೀನಾದ ಆಕ್ರಮಣವನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶವನ್ನು ಚೀನಾಕ್ಕೆ ನೇರವಾಗಿಯೆ ನೀಡುತ್ತಿದ್ದಾರೆ. ತೈವಾನ್ ಜನರ ಈ ನಡೆಗೆ ಚೀನಾ ಕೆಂಗಣ್ಣು ಬೀರಿದೆ. ‘ಸ್ವಾತಂತ್ರ್ಯವನ್ನು ಕನವರಿಸಬೇಡಿ’ ಎಂದು ಎಚ್ಚರಿಕೆ ನೀಡಿದೆ. ಆದರು ಚೀನಾದ ಯಾವ ಬೆದರಿಕೆಗೂ ತೈವಾನ್ ಸೊಪ್ಪು ಹಾಕುತ್ತಿಲ್ಲ. ಚೀನಾ ತೈವಾನ್ ಗಡಿಗೆ ಕ್ಷಿಪಣಿಗಳು, ಯುದ್ದ ವಿಮಾನಗಳನ್ನು, ಸೈನಿಕರನ್ನು ರವಾನಿಸಿದರು ತೈವಾನ್ ಹೆದರುತ್ತಿಲ್ಲ. ನಾವು ಯುದ್ದಕ್ಕೆ ಸೈ ಎಂಬ ಸಂದೇಶವನ್ನು ಚೀನಾಕ್ಕೆ ನೀಡಿದ್ದಾರೆ. ಜತೆಗೆ ಸ್ವತಂತ್ರ ತೈವಾನ್‌ನ ಕನಸನ್ನು ಬಿಡಲು ಸಾಧ್ಯವಿಲ್ಲ ಎಂದು ಅಲ್ಲಿನ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಇಂದು ಇರುವ ತೈವಾನ್ ದೇಶದ ರಾಷ್ಟ್ರೀಯ ದಿನಾಚರಣೆಯನ್ನು ಆಚರಣೆ ಮಾಡಬೇಡಿ ಎಂದು ಚೀನಾದ ರಾಯಭಾರಿ ಭಾರತದ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಧಿಕ್ಕರಿಸಿ ಭಾರತದ ಮಾಧ್ಯಮಗಳು ತೈವಾನ್ ದೇಶದ ರಾಷ್ಟ್ರೀಯ ದಿನಾಚರಣೆಗೆ ಬೆಂಬಲ ನೀಡಿವೆ. ಈ ನಡುವೆ ಭಾರತದ ಸಾಮಾಜಿಕ ಜಾಲತಾಣದಲ್ಲಿ ತೈವಾನ್ ರಾಷ್ಟ್ರೀಯ ದಿನಾಚರಣೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಭಾರತೀಯರು ಸ್ವತಂತ್ರ ತೈವಾನ್ ಗೆ ಶುಭಾಶಯ ಕೋರಿದ್ದಾರೆ. ಭಾರತೀಯರ ಈ ನಡೆ ಚೀನಾಗೆ ನುಂಗಲಾರದ ತುತ್ತಾಗಿದೆ.

LEAVE A REPLY

Please enter your comment!
Please enter your name here